Vijayapura : ಎಳನೀರು ಕುಡಿಯಲು ಬಂದ ಬ್ಯಾಂಕ್ ಮ್ಯಾನೇಜರ್ – ಪಟಾಯಿಸಿ ಹನಿ ಟ್ರ್ಯಾಪ್ ಮಾಡಿದ ಆಂಟಿ!!

Share the Article

Vijayapura : ಬ್ಯಾಂಕ್ ಕೆಲಸದ ಬಿಡುವಿನ ವೇಳೆ ಎಳನೀರು ಕುಡಿಯಲು ಬಂದಂತಹ ಬ್ಯಾಂಕ್ ಮ್ಯಾನೇಜರ್ ಅನ್ನು ಎಳನೀರು ಮಾರುವ ಆಂಟಿ ಪಟಾಯಿಸಿಕೊಂಡು ಹನಿ ಡ್ರಾಪ್ ನಡೆಸಿದ ಘಟನೆ ವಿಜಯಪುರದಲ್ಲಿ ನಡೆದಿದೆ. ಹಾಗಿದ್ರೆ ಏನಿದು ಹನಿ ಟ್ರಾಪ್ ಸ್ಟೋರಿ ನೋಡೋಣ ಬನ್ನಿ.

ಇಂಡಿ ಪಟ್ಟಣದ ಡಿವೈಎಸ್ಪಿ ಕಾರ್ಯಾಲಯದ ಪಕ್ಕದಲ್ಲಿರುವ ಪುಟ್‌ಪಾತ್ ಮೇಲೆ ಎಳನೀರು (ತೆಂಗಿನಕಾಯಿ) ಮಾರುತ್ತಿದ್ದ ಮಹಿಳೆ ಸುವರ್ಣ ಎಂಬಾಕೆ ಹೊನಸೂರೆ ಎಂಬ ಮಹಿಳೆ ತನ್ನಲ್ಲಿಗೆ ಎಳನೀರು ಕುಡಿಯಲು ಬರುತ್ತಿದ್ದ ಇಂಡಿ ತಾಲೂಕಿನ ಅಂಜುಟಗಿ ಗ್ರಾಮದ ನಿವಾಸಿ ಇಂಡಿಯ ಬ್ಯಾಂಕ್ ಮ್ಯಾನೇಜರ್‌ಗೆ ನವ್ಹೆಂಬರ್ 1ರಂದು ಬರ್ರೀ ಸರ್ ಎಂದು ಪುಸಲಾಯಿಸಿದ್ದಾಳೆ. ಮಹಿಳೆ ಮಾತುನಂಬಿ ಇಂಡಿಗೆ ಬಂದ ಬ್ಯಾಂಕ್‌ ಮ್ಯಾನೇಜರನನ್ನು ತನ್ನ ಗೆಳತಿಯ ಮನೆಗೆ ಕರೆದುಕೊಂಡು ಹೋಗಿ ದೈಹಿಕ ಸಂಪರ್ಕ ಬೆಳೆಸಿದ್ದಾಳೆ. ಸರಸಲ್ಲಾಪ ನಡೆಸಿದ ಖುಷಿಯಲ್ಲಿದ್ದ ಬ್ಯಾಂಕ್ ಮ್ಯಾನೇಜರ್ ಗೆ ಈ ವೇಳೆ ದೊಡ್ಡ ಅಘಾತ ಕಾದಿದೆ. ಕಾರಣ ಕೆಲ ಹೊತ್ತಲ್ಲೇ ಸುವರ್ಣಮ್ಮ ಫೋನ್ ಮಾಡಿ ನಾವು ಮಾಡಿರುವ ಸಾಧನೆಯನ್ನು ಮೀಡಿಯಾದವರು ರೆಕಾರ್ಡ್ ಮಾಡಿಕೊಂಡಿದ್ದಾರೆ. ಅವರೊಂದಿಗೆ ಮಾತನಾಡಿ, ಸಮಸ್ಯೆ ಬಗ್ಗೆ ಹರಿಸಿಕೋ ಎಂದು ಬಾಂಬ್ ಹಾಕಿದ್ದಾಳೆ.

ಬ್ಯಾಂಕ್ ಮ್ಯಾನೇಜರ್ ಗೆ ತಿಳಿಯದಂತೆ ಸರಸ ಸಲ್ಲಾಪದ ವಿಡಿಯೋವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದ ಮಹಿಳೆ ತನ್ನ ಪರಿಚಯಸ್ಥನಾದ ಮಹೇಶ ಬಗಲಿ, ಯೂಟ್ಯೂಬರ್ ಹಾಗೂ ಹೋಮಗಾರ್ಡ್ ಆಗಿರುವ ತೌಸಿಫ್ ಖರೋಶಿ ಎಂಬುವವರಿಂದ ಫೋನ್ ಮಾಡಿಸಿ ₹10 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದರು. ಇದರಲ್ಲಿ ಆಕೆಯ ಮಗ ಅಮೂಲ್ ಹೊನಸೂರೆ ಕೂಡ ಭಾಗಿಯಾಗಿದ್ದಾನೆ.

ಅಂದಹಾಗೆ ಸುವರ್ಣಮ್ಮ ಸ್ನೇಹಿತೆಯ ಮನೆಗೆ ಕರೆಸಿಕೊಂಡು ಲೈಂಗಿಕ ಕ್ರಿಯೆ ನಡೆಸಿ ತಾನೇ ವಿಡಿಯೋ ಮಾಡಿಕೊಂಡಿದ್ದಾಳೆ. ಬಳಿಕ ₹10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದು, ಇದು ಹನಿಟ್ರ್ಯಾಪ್ ಎಂದು ಗೊತ್ತಾಗಿ ದೂರು ದಾಖಲಿಸಿದ್ದೇನೆ ಎಂದು ಬ್ಯಾಂಕ್ ಮ್ಯಾನೇಜರ್ ತಿಳಿಸಿದ್ದಾರೆ. ಸಧ್ಯ ನಾಲ್ವರನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ

Comments are closed.