Bigg boss: ಬಿಗ್‌ ಬಾಸ್‌ ಮನೆಯಿಂದ ಕಾಕ್ರೋಚ್‌ ಸುಧಿ ಔಟ್‌

Share the Article

Bigg boss: ಬಿಗ್‌ ಬಾಸ್‌ ಕನ್ನಡ 12 ಮನೆಯಿಂದ ಕಾಕ್ರೋಚ್‌ ಸುಧಿ ಔಟ್‌ ಆಗಿದ್ದಾರೆ. ನಾಮಿನೇಷನ್‌ ಆದ ಸ್ಪರ್ಧಿಗಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ತಮ್ಮ ಸೂಟ್‌ಕೇಸ್‌ ಹಿಡಿದು ಮನೆಯ ಮುಖ್ಯಧ್ವಾರದಲ್ಲಿ ನಿಂತಿದ್ದರು. ಡೋರ್‌ ಕ್ಲೋಸ್‌ ಆಗಿ ಓಪನ್‌ ಆದಾಗ ಸುಧಿ ಇರಲಿಲ್ಲ. ಕಿಚ್ಚನ ವಾರದ ಪಂಚಾಯ್ತಿಯಲ್ಲಿ 5 ಜನ ನಾಮಿನೇಷನ್‌ನಲ್ಲಿದ್ದರು. ಅವರ ಪೈಕಿ ಮೊದಲು ಧ್ರುವಂತ್‌ ಸೇಫ್‌ ಆದರು. ನಂತರ ರಘು, ರಿಷಾ, ಸುಧಿ ಮತ್ತು ಜಾಹ್ನವಿ ಅವರು ನಾಮಿನೇಷನ್‌ನಲ್ಲಿದ್ದರು. ನಾಲ್ಕು ಜನರೂ ತಮ್ಮ ತಮ್ಮ ಸೂಟ್‌ಕೇಸ್‌ ತೆಗೆದುಕೊಂಡು ಮುಖ್ಯಧ್ವಾರದ ಬಳಿ ಬರುತ್ತಾರೆ. ಬಾಗಿಲು ಓಪನ್‌ ಆದಾಗ ಎಲ್ಲರೂ ಆಚೆ ಕಡೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಿಲ್ಲುತ್ತಾರೆ. ಮುಖ್ಯಧ್ವಾರ ಕ್ಲೋಸ್‌ ಆಗಿ ಮತ್ತೆ ಓಪನ್‌ ಆದಾಗ ಯಾರು ಇರಲ್ಲವೋ, ಅವರು ಮನೆಯಿಂದ ಔಟ್‌ ಎಂದು ಸುದೀಪ್‌ ತಿಳಿಸಿದ್ದರು.ಅದರಂತೆ ನಾಮಿನೇಷನ್‌ ಆದ ನಾಲ್ಕು ಸ್ಪರ್ಧಿಗಳು ತಮ್ಮ ತಮ್ಮ ಸೂಟ್‌ಕೇಸ್‌ ತೆಗೆದುಕೊಂಡು ಮನೆಯ ಮುಖ್ಯಧ್ವಾರದ ಬಳಿ ಬಂದು ನಿಲ್ಲುತ್ತಾರೆ. ಬಾಗಿಲು ಕ್ಲೋಸ್‌ ಆಗಿ ಮತ್ತೆ ಓಪನ್‌ ಆದಾಗ, ಕಾಕ್ರೋಚ್‌ ಸುಧಿ ಇರಲ್ಲ. ಉಳಿದಂತೆ ರಘು, ರಿಷಾ, ಜಾಹ್ನವಿ ಇರುತ್ತಾರೆ. ಮೂವರಿಗೂ ಅಭಿನಂದನೆ ತಿಳಿಸಿ ಸೂಟ್‌ಕೇಸ್‌ ತೆಗೆದುಕೊಂಡು ಮನೆಯಲ್ಲಿ ಮುಂದುವರಿಯುವಂತೆ ಸುದೀಪ್‌ ಅವರು ಹೇಳುತ್ತಾರೆ.

Comments are closed.