Home News Bihar: ಬಿಹಾರದಲ್ಲಿ ಸರ್ಕಾರ ರಚನೆ ಬಹುತೇಕ ಫೈನಲ್ – ಇವರೇ ನೋಡಿ ನೂತನ ಸಿಎಂ

Bihar: ಬಿಹಾರದಲ್ಲಿ ಸರ್ಕಾರ ರಚನೆ ಬಹುತೇಕ ಫೈನಲ್ – ಇವರೇ ನೋಡಿ ನೂತನ ಸಿಎಂ

Hindu neighbor gifts plot of land

Hindu neighbour gifts land to Muslim journalist

Bihar: ಬಿಹಾರದಲ್ಲಿ ಎನ್ ಡಿ ಎ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿ ಇತಿಹಾಸ ಸೃಷ್ಟಿಸಿದೆ. ಬಿಜೆಪಿ ಹಾಗೂ ಜೆಡಿಯು ಹತ್ತಿರ, ಹತ್ತಿರ ಸಮಾನ ಅಂಕಿಗಳಲ್ಲಿ ಗೆಲುವು ಸಾಧಿಸಿವೆ. ಈ ಚುನಾವಣೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮತ್ತು ಬಿಜೆಪಿಯ ಬಿರುಗಾಳಿಗೆ ಮಹಾಘಟಬಂಧನ್ ಮೈತ್ರಿಕೂಟ ತತ್ತರಿಸಿದೆ ಹೋಗಿದೆ. ನಡುವೆ ಸರ್ಕಾರ ರಚನೆ ಕಸರತ್ತು ಕೂಡ ನಡೆಯುತ್ತಿದೆ. ಇದೀಗ ಈ ಎಲ್ಲ ಕಸರತ್ತು ಫೈನಲ್ ಆಗಿದ್ದು ಸರ್ಕಾರ ರಚನೆಯು ಕೂಡ ಬಹುತೇಕ ಅಂತಿಮವಾಗಿದೆ. ಹೀಗಾಗಿ ಇವರೇ ರಾಜ್ಯದ ನೂತನ ಸಿಎಂ ಮತ್ತು ಡಿಸಿಎಂ ಎನ್ನಲಾಗುತ್ತಿದೆ.

ಮೂಲಗಳ ಪ್ರಕಾರ ಇನ್ನು ಎರಡ್ಮೂರು ದಿನದೊಳಗೆ ಬಿಹಾರದಲ್ಲಿ ಸರ್ಕಾರ ರಚನೆ ಕೆಲಸ ನಡೆಯಲಿದೆ. 18ನೇ ಬಿಹಾರ ವಿಧಾನಸಭೆ ರಚನೆಗೆ ಅಧಿಸೂಚನೆ ಹೊರಡಿಸುವುದರೊಂದಿಗೆ ಸರ್ಕಾರ ರಚನೆ ಪ್ರಕ್ರಿಯೆಯು ರವಿವಾರ ವೇಗ ಪಡೆದುಕೊಂಡಿದೆ. ನ.19 ಅಥವಾ 20ರಂದು ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ವೇಳಾಪಟ್ಟಿಯನ್ನು ಅನುಸರಿಸಿ ದಿನಾಂಕ ಅಂತಿಮವಾಗಲಿದೆ.

ಮೂಲಗಳ ಪ್ರಕಾರ, ನಿತೀಶ್‌ ಕುಮಾರ್‌ ಅವರು ದಾಖಲೆಯ ಹತ್ತನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಇನ್ನು ಲೋಕ ಜನ ಶಕ್ತಿ(LJP) ಪಕ್ಷವು 29 ಕ್ಷೇತ್ರಗಳಲ್ಲಿ 22ನೇ ಗೆದ್ದಿದ್ದು, ಇದರ ನಾಯಕ ಚಿರಾಗ್ ಪಾಸ್ವಾನ್ ಅವರು ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಜೊತೆಗೆ, ಎನ್‌ಡಿಎ ಅಧಿಕಾರವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಹಿರಿಯ ನಾಯಕರು, ಕೇಂದ್ರ ಸಚಿವರು ಭಾಗಿಯಾಗಲಿದ್ದಾರೆ.