ಸೀರೆಗಾಗಿ ಜಗಳ; ವಧುವನ್ನು ಹ*ತ್ಯೆ ಮಾಡಿ ಪರಾರಿಯಾದ ವರ

Share the Article

Ahemadabad: ಮದುವೆಗೆ ಇನ್ನೇನು ಕೆಲವೇ ಗಂಟೆ ಬಾಕಿ ಇತ್ತು. ಅದಕ್ಕೂ ಮೊದಲು ವಧು ವರರ ನಡುವೆ ಸೀರೆ ವಿಷಯಕ್ಕೆ ಜಗಳ ನಡೆದು, ನಂತರ ವಧುವಿನ ಕೊಲೆಯಲ್ಲಿ ಕೊನೆಗೊಂಡಿದೆ.

ಈ ಘಟನೆ ಗುಜರಾತ್‌ನ ಭಾವನಗರ ನಗರದಲ್ಲಿ ಶನಿವಾರ (ನ.15) ನಡೆದಿದೆ. ಪ್ರೀತಿಸಿ ಮದುವೆಯಾಗಬೇಕಿದ್ದ ಹುಡುಗ ಆಕೆಯನ್ನು ಹತ್ಯೆ ಮಾಡಿದ್ದಾರೆ.

ಸೀರೆ ಮತ್ತು ಹಣದ ಕಾರಣದಿಂದ ಜಗಳ ನಡೆದಿದೆ ಎಂದು ಪೊಲೀಸರು ಹೇಳಿದ್ದು, ಆರೋಪಿ ಸಾಜನ್‌ ಬರೈಯಾ ಮತ್ತು ಮೃತಪಟ್ಟ ಸೋನಿ ಹಿಮ್ಮತ್‌ ರಾಥೋಡ್‌ ಕಳೆದ ಒಂದೂವರೆ ವರ್ಷದಿಂದ ಲಿವಿಂಗ್‌ ಟುಗೆದರ್‌ನಲ್ಲಿದ್ದರು. ನಂತರ ಮದುವೆ ನಿಶ್ಚಯವಾಗಿತ್ತು. ಮದುವೆಯ ಹಲವು ಶಾಸ್ತ್ರ ಮುಗಿದಿತ್ತು.

ಆದರೆ ಕೆಲವೇ ಗಂಟೆಗೆ ಮೊದಲು, ವಧು ವರರ ನಡುವೆ ಸೀರೆ ಮತ್ತು ಹಣದ ವಿಚಾರಕ್ಕೆ ಗಲಾಟೆ ಆಯಿತು. ಸಿಟ್ಟಿನ ಭರದಲ್ಲಿ ಸೋನಿ ತಲೆಗೆ ಕಬ್ಬಿಣದ ಪೈಪ್‌ನಿಂದ ಹೊಡೆದು, ಗೋಡೆಗೆ ಆಕೆಯ ತಲೆ ಬಡಿದು ಸಾಜನ್‌ ಹತ್ಯೆ ಮಾಡಿದ್ದಾನೆ. ನಂತರ ಆಕೆಯ ಮನೆಯನ್ನು ಧ್ವಂಸ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ. ಮಾಹಿತಿ ಪಡೆದ ಪೊಲೀಸ್‌ ತಂಡ ಸ್ಥಳಕ್ಕೆ ಬಂದಿದ್ದು, ತನಿಖೆ ಮಾಡುತ್ತಿದೆ.

Comments are closed.