ಚಿತ್ತಾಪುರದಲ್ಲಿ ಇಂದು RSS ಪಥಸಂಚಲನ

Share the Article

Kalburgi: ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಇಂದು ಆರ್‌ಎಸ್‌ಎಸ್‌ ಪಥಸಂಚಲನ ನಡೆಯಲಿದೆ. ಈ ಕಾರಣದಿಂದ ಪಥಸಂಚಲನ ನಡೆಯುವ ಎಲ್ಲಾ ಮಾರ್ಗಗಳಲ್ಲಿ ಸಿಸಿಟಿವಿ ಹಾಕಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ.

ಪಥಸಂಚಲನದಲ್ಲಿ 300 ಗಣವೇಷಧಾರಿಗಳು ಹಾಗೂ 50 ಬ್ಯಾಂಡ್‌ ಸಿಬ್ಬಂದಿಗಳಿಗೆ ಮಾತ್ರ ಷರತ್ತು ಬದ್ದ ಅನುಮತಿ ನೀಡಲಾಗಿದೆ. ಇಂದು ಮಧ್ಯಾಹ್ನ 3.30 ರಿಂದ ಬಜಾಜ್‌ ಕಲ್ಯಾಣ ಮಂಟಪದಿಂದ ಪಥಸಂಚಲನ ಪ್ರಾರಂಭಗೊಂಡು, ಸುಮಾರು ಒಂದೂವರೆ ಕಿ.ಮೀ ವರೆಗೆ ಸಾಗಲಿದೆ.

ಇದರ ಜೊತೆಗೆ ಜಿಲ್ಲಾಡಳಿತ ಪೊಲೀಸರ ಕಾರ್ಯಕ್ಕೆ ಯಾವುದೇ ಅಡ್ಡಿಪಡಿಸಬಾರದೆಂದು ಸೂಚನೆ ನೀಡಿದೆ.

Comments are closed.