Home News Bihar Election: ಇದುವರೆಗೂ BJP ಗೆಲ್ಲದ ಕ್ಷೇತ್ರದಲ್ಲಿ ಗೆದ್ದು ದೇಶದ ಅತಿ ‘ಕಿರಿಯ ಶಾಸಕಿ’ಯಾದ ಗಾಯಕಿ...

Bihar Election: ಇದುವರೆಗೂ BJP ಗೆಲ್ಲದ ಕ್ಷೇತ್ರದಲ್ಲಿ ಗೆದ್ದು ದೇಶದ ಅತಿ ‘ಕಿರಿಯ ಶಾಸಕಿ’ಯಾದ ಗಾಯಕಿ – ಯಾರು ಈ ಮೈಥಿಲಿ ಟಾಕೂರ್!!

Hindu neighbor gifts plot of land

Hindu neighbour gifts land to Muslim journalist

Bihar Election: 2025ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಕೇವಲ 25 ವರ್ಷದ ಜಾನಪದ ಗಾಯಕಿ ಹಾಗೂ ಬಿಜೆಪಿ ಅಭ್ಯರ್ಥಿ ಮೈಥಿಲಿ ಠಾಕೂರ್ ದರ್ಭಾಂಗಾದ ಅಲಿನಗರ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಮೋಘ ಜಯಬೇರಿ ಭಾರಿಸಿ ಇತಿಹಾಸ ನಿರ್ಮಿಸಿದ್ದಾರೆ. ಅಲ್ಲದೆ ದೇಶದ ಅತಿ ಕಿರಿಯ ಶಾಸಕ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದಾರೆ.

ಹೌದು, ರಿಯಾಲಿಟಿ ಶೋ ಒಂದರ ರನ್ನರ್ ಅಪ್ ಆಗಿದ್ದ ಮೈಥಿಲಿ ಠಾಕೂರ್​​ ಕಂಠಕ್ಕೆ ಬಹಳ ಅಭಿಮಾನಿಗಳಿದ್ದರು. ಈ ಮೈಥಿಲಿ ಠಾಕೂರ್ ಚುನಾವಣಾ ಕಣಕ್ಕೆ ಇಳಿದ ಮೊದಲ ಪ್ರಯತ್ನದಲ್ಲೇ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಮೈಥಿಲಿ ಠಾಕೂರ್ ಒಟ್ಟಾರೆ 74 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದಿದ್ಗು ಆ ಮೂಲಕ ತಮ್ಮ ಸಮೀಪದ ಸ್ಪರ್ಧಿ ಆರ್ ಜೆಡಿಯ ಬಿನೋದ್ ಮಿಶ್ರಾ ಅವರಿಗಿಂತ 12 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದು ಐತಿಹಾಸಿಕ ಜಯ ಸಾಧಿಸಿದ್ದಾರೆ. ಈ ಮೂಲಕ ಭಾರತದ ಅತ್ಯಂತ ಕಿರಿಯ ಶಾಸಕಿ ಎಂಬ ಹೆಗ್ಗಳಿಕೆಗೆ ಖ್ಯಾತರಾಗಿದ್ದಾರೆ.

ಯಾರು ಈ ಮೈಥಿಲಿ?
2000ನೇ ಇಸವಿಯ ಜುಲೈ 25ರಂದು ಮಧುಬನಿಯಲ್ಲಿ ಜನಿಸಿದ ಮೈಥಿಲಿ ಠಾಕೂರ್ ಅವರ ಕುಟುಂಬವು ದೆಹಲಿಯ ನಜಾಫ್‌ಗಢಕ್ಕೆ ಸ್ಥಳಾಂತರಗೊಂಡಿತು. ಅಲ್ಲಿ ಅವರ ತಂದೆ ಕೆಲಸ ಕಳೆದುಕೊಂಡ ಕಾರಣ ಅವರು ಆರ್ಥಿಕ ಸಮಸ್ಯೆಗಳನ್ನು ಎದುರಿಸಿದರು. ಸ್ವತಃ ಶಾಸ್ತ್ರೀಯ ಗಾಯಕರಾಗಿದ್ದ ಅವರ ತಂದೆ ತಮ್ಮ ಕುಟುಂಬವನ್ನು ಪೋಷಿಸಲು ಸಂಗೀತದತ್ತ ಮುಖ ಮಾಡಿದರು. ಅವರು ಮೈಥಿಲಿಯ ಮಾರ್ಗದರ್ಶಕ ಮತ್ತು ಶಿಕ್ಷಕರೂ ಆಗಿದ್ದರು.

ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಜಾನಪದ ಸಂಗೀತವೆರಡರಲ್ಲೂ ಹೆಸರು ಮಾಡಿರುವ ಮೈಥಿಲಿ ಸ ರಿ ಗ ಮ ಪ ಲಿಟಲ್ ಚಾಂಪ್ಸ್ ಮತ್ತು ಇಂಡಿಯನ್ ಐಡಲ್ ಜೂನಿಯರ್‌ನಂತಹ ಪ್ರಸಿದ್ಧ ರಿಯಾಲಿಟಿ ಶೋಗಳ ಮೂಲಕ ಜನಪ್ರಿಯರಾದರು. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹಾಡಿನ ರೀಲ್ಸ್ ಮಾಡುತ್ತಿದ್ದರು. ಮೈಥಿಲಿ ಹಿಂದಿ ಮತ್ತು ಭೋಜ್‌ಪುರಿ ಪ್ರದರ್ಶನಗಳಿಗೆ ದೇಶಾದ್ಯಂತ ಹೆಸರಾಗಿದ್ದಾರೆ