Bihar: ನಿತೀಶ್ ಕುಮಾರ್ ಗೆ NDA ಶಾಕ್ – ಸಿಎಂ ಸ್ಥಾನದಿಂದ ಗೇಟ್ ಪಾಸ್?

Bihar: ಬಿಹಾರದಲ್ಲಿ ಎನ್ ಡಿ ಎ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿ ಇತಿಹಾಸ ಸೃಷ್ಟಿಸಿದೆ. ಬಿಜೆಪಿ ಹಾಗೂ ಜೆಡಿಯು ಹತ್ತಿರ, ಹತ್ತಿರ ಸಮಾನ ಅಂಕಿಗಳಲ್ಲಿ ಗೆಲುವು ಸಾಧಿಸಿವೆ. ಚುನಾವಣೆ ಪೂರ್ವದಲ್ಲೇ ಪ್ರಧಾನಿ ಮೋದಿ ಅವರು ನಿತೀಶ್ ಕುಮಾರ್ ಅವರನ್ನು ಮುಂದಿನ ಸಿಎಂ ಎಂದು ಅನುಮೋದಿಸಿದ್ದರು. ಆದರೆ ಇದೀಗ ನಿತೀಶ್ ಕುಮಾರ್ ಅವರಿಗೆ ಸಿಎಂ ಸ್ಥಾನದಿಂದ ವೇಟ್ ಪಾಸ್ ನೀಡಲಾಗುತ್ತದೆ ಎಂಬ ಸುದ್ದಿ ಕೇಳಿ ಬಂದಿದೆ.

ಹೌದು, ಬಿಹಾರ ಚುನಾವಣೆ ಫಲಿತಾಂಶ ಭರ್ಜರಿಯಾಗಿ ಬಂದಿದ್ದು, ಎನ್‌ಡಿಎ ಮೈತ್ರಿಕೂಟಕ್ಕೆ ಬಿಹಾರದ ಮತದಾರರು ಜೈ ಎಂದಿದ್ದಾರೆ. ಹಾಗೇ ಬಿಹಾರದಲ್ಲಿ ಮತ್ತೆ ಎನ್‌ಡಿಎ ಸರ್ಕಾರ ರಚನೆ ಆಗಲಿದೆ, ಆ ಮೂಲಕ ನಿತೀಶ್ ಕುಮಾರ್ ಮತ್ತೊಮ್ಮೆ ಬಿಹಾರದ ಮುಖ್ಯಮಂತ್ರಿ ಆಗುತ್ತಾರೆ ಎಂಬ ಲೆಕ್ಕಾಚಾರ ಇದೆ.
ಅಂದಹಾಗೆ ಬಿಜೆಪಿ ಸುಮಾರು 90 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡು ಜಯದ ಹೊಸ್ತಿಲಲ್ಲಿ ಇದೆ. ಆದರೆ ಜೆಡಿಯು 80 ಸ್ಥಾನಗಳಲ್ಲಿ ಗೆಲ್ಲಲು ಮುಂದೆ ನುಗ್ಗಿದ್ದು, ಹೀಗೆ ಪರಿಸ್ಥಿತಿ ಇದ್ದರೂ, ಬಿಜೆಪಿ ಪಾಲಿಗೆ ಮುಖ್ಯಮಂತ್ರಿ ಸ್ಥಾನ ಸಿಗುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆ. ಇದೇ ವಿಚಾರಕ್ಕೆ ಇದೀಗ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜೊತೆಗೆ ಕಿರಿಕ್ ಆಗಲಿದೆ ಎಂಬ ಸುದ್ದಿ ಹಬ್ಬಿದೆ. ಹಾಗೇ ಮುಂದಿನ ದಿನಗಳಲ್ಲಿ ನಿತೀಶ್ ಕುಮಾರ್ ಅವರನ್ನು ಕೆಳಗೆ ಇಳಿಸುವ ಪ್ರಯತ್ನ ಆಗುತ್ತಾ? ಎಂಬ ಚರ್ಚೆ ಕೂಡ ಜೋರಾಗಿದೆ.
Comments are closed.