Bihar Election : ಗೆದ್ದ ಮೇಲೆ ಮಾಸ್ಕ್ ತೆಗೆಯುತ್ತೇನೆ ಎಂದಿದ್ದ ಪುಷ್ಪಂ ಪ್ರಿಯಾ – ಈಗ ಗೆದ್ದಳೋ, ಸೋತಳೋ?

Share the Article

Bihar Election : ಬಿಹಾರದಲ್ಲಿ ಗೆಲ್ಲುವವರೆಗೂ ಮಾಸ್ಕ್‌ ತೆಗೆಯುವುದಿಲ್ಲ ಎಂದು ಪ್ಲೂರಲ್ಸ್‌ ಪಾರ್ಟಿ ಮುಖ್ಯಸ್ಥೆ ಪುಷ್ಪಂ ಪ್ರಿಯಾ ಚೌಧರಿ ಪ್ರತಿಜ್ಞೆ ಮಾಡಿದ್ದರು. ಹಾಗಿದ್ದರೆ ಈಗ ಈಕೆ ಸೋತಳೋ ಇಲ್ಲಾ ಗೆದ್ದಳೋ ನೋಡೋಣ ಬನ್ನಿ.

ಯಸ್ “ಬಿಹಾರದಲ್ಲಿ ಗೆಲುವು ಸಾಧಿಸುವವರೆಗೂ ಮಾಸ್ಕ್ ತೆಗೆಯುವುದಿಲ್ಲ ಎಂದು ‘ಪ್ಲುರಲ್ಸ್ ಪಾರ್ಟಿ’ ಮುಖ್ಯಸ್ಥೆ ಪುಷ್ಪಂ ಪ್ರಿಯಾ ಚೌಧರಿ ಅವರು ಶಪಥ ಮಾಡಿದ್ದರು. ಇದೀಗ ಅವರು ಭಾರೀ ಅಂತರದಿಂದ ಹಿನ್ನಡೆ ಅನುಭವಿಸಿದ್ದಾರೆ.

2020ರಲ್ಲಿ ‘ದಿ ಪ್ಲುರಲ್ಸ್ ಪಾರ್ಟಿ’ಯನ್ನು ಸ್ಥಾಪಿಸಿದ ಪುಷ್ಪಂ ಪ್ರಿಯಾ, ಜಾತಿ ಮತ್ತು ಧರ್ಮವನ್ನು ಮೀರಿದ ಹೊಸ ಬಗೆಯ ರಾಜಕೀಯವನ್ನು ಬಿಹಾರಕ್ಕೆ ಪರಿಚಯಿಸುವ ಗುರಿ ಹೊಂದಿದ್ದರು. ಅವರ ಪಕ್ಷವು ರಾಜ್ಯದ ಎಲ್ಲಾ 243 ಸ್ಥಾನಗಳಲ್ಲಿ ‘ವಿಶಿಲ್’ ಚಿಹ್ನೆಯಡಿಯಲ್ಲಿ ಸ್ಪರ್ಧಿಸಿತ್ತು. ಕಪ್ಪು ಬಟ್ಟೆ ಮತ್ತು ಮಾಸ್ಕ್‌ನಲ್ಲೇ ಕಾಣಿಸಿಕೊಳ್ಳುತ್ತಿದ್ದ ಅವರು, ಚುನಾವಣೆಯಲ್ಲಿ ಗೆದ್ದ ನಂತರವೇ ಮಾಸ್ಕ್ ತೆಗೆಯುವುದಾಗಿ ಶಪಥ ಮಾಡಿದ್ದರು. ಹೀಗಾಗಿ ಅವರು ಮುಂದೆಯೂ ಮಾಸ್ಕ್ ಹಾಕಿರುತ್ತಾರೋ ಅಥವಾ ತೆಗೆಯುತ್ತಾರೋ ಎಂಬುದು ಯಕ್ಷಪ್ರಶ್ನೆಯಾಗಿದೆ.

ಇನ್ನೂ ದರ್ಭಾಂಗಾ ಕ್ಷೇತ್ರದಲ್ಲಿ, 2020ರಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿಯ ಸಂಜಯ್ ಸರೋಗಿ ಅವರು ಈ ಬಾರಿಯೂ ಮುನ್ನಡೆ ಕಾಯ್ದುಕೊಂಡಿದ್ದಾರೆ. ವಿಕಾಸಶೀಲ್ ಇನ್ಸಾನ್ ಪಾರ್ಟಿ (ವಿಐಪಿ)ಯ ಉಮೇಶ್ ಸಹಾನಿ ಅವರು 4,700ಕ್ಕೂ ಹೆಚ್ಚು ಮತಗಳಿಂದ ಹಿನ್ನಡೆಯಲ್ಲಿದ್ದರೆ, ಪುಷ್ಪಂ ಪ್ರಿಯಾ ಅವರು ಬರೋಬ್ಬರಿ 12,000 ಮತಗಳಿಗಿಂತ ಹೆಚ್ಚು ಅಂತರದಿಂದ ಹಿಂದಿದ್ದಾರೆ.

Comments are closed.