South Sudan : ಸೈನಿಕರಿಗೆ ಸಂಬಳದ ಬದಲು ಹುಡುಗಿಯರನ್ನು ನೀಡಲು ಸರ್ಕಾರ ನಿರ್ಧಾರ!!

South Sudan : ದಕ್ಷಿಣ ಸುಡಾನ್ ಸರ್ಕಾರ ತನ್ನ ಸೈನಿಕರಿಗೆ ತಿಂಗಳ ಸಂಬಳದ ಬದಲು ಮಹಿಳೆಯರ ಮೇಲೆ ಅತ್ಯಾಚಾರ ಮಾಡಲು ಅವಕಾಶ ನೀಡಿದ ಭೀಕರ ಘಟನೆ ಒಂದು ಬಹಿರಂಗವಾಗಿದೆ.

ಹೌದು, ದಕ್ಷಿಣ ಸುಡಾನ್‌ನಲ್ಲಿ 2013ರಲ್ಲಿ ಪ್ರಾರಂಭವಾದ ಅಂತರ್ಯುದ್ಧದ ಸಮಯದಲ್ಲಿ ಸರ್ಕಾರಪರ ಸೈನಿಕರಿಗೆ ಸಂಬಳ ಬದಲಾಗಿ ಮಹಿಳೆಯರ ಮೇಲೆ ದೌರ್ಜನ್ಯ ಮಾಡಲು ಅವಕಾಶ ನೀಡಲಾಗಿತ್ತು. ಮಹಿಳೆಯರು, ಮಕ್ಕಳು ಹಾಗೂ ವಯೋವೃದ್ಧರು ಎಲ್ಲರೂ ಈ ಕ್ರೂರತನದ ಬಲಿಯಾಗಿದ್ದಾರೆ. ವಿಶ್ವಸಂಸ್ಥೆಯ ವರದಿ ಪ್ರಕಾರ, ಸೈನಿಕರಿಗೆ “ಸಂಬಳದ ಬದಲಿಗೆ ಮಹಿಳೆಯರನ್ನು ಉಪಯೋಗಿಸಿಕೊಳ್ಳಿ” ಎಂಬಂತೆ ಪರೋಕ್ಷ ಅನುಮತಿ ನೀಡಲಾಗಿತ್ತು. ಈ ವರದಿ ಜಗತ್ತಿನಾದ್ಯಂತ ಆಕ್ರೋಶಕ್ಕೆ ಕಾರಣವೂ ಆಗಿತ್ತು.
ಒಬ್ಬ ಮಹಿಳೆ ಯುಎನ್ ತಂಡಕ್ಕೆ ನೀಡಿದ ಸಾಕ್ಷ್ಯದಲ್ಲಿ, ಐದು ಸೈನಿಕರು ತನ್ನ ಮಕ್ಕಳ ಮುಂದೆ ತನ್ನ ಮೇಲೆ ಅತ್ಯಾಚಾರ ನಡೆಸಿದರೆಂದು ಹೇಳಿದ್ದಾಳೆ. ನಂತರ ಅವಳನ್ನು ಕಾಡಿನೊಳಗೆ ಎಳೆದುಕೊಂಡು ಹೋಗಿ ಮತ್ತೆ ಅತ್ಯಾಚಾರ ಮಾಡಲಾಗಿದೆ. ಅವಳು ಹಿಂತಿರುಗಿದಾಗ, ಅವಳ ಮಕ್ಕಳು ಕಣ್ಮರೆಯಾಗಿದ್ದರು ಎಂಬ ಹೃದಯವಿದ್ರಾವಕ ಘಟನೆ ವರದಿಯಾಗಿದೆ. ಸಧ್ಯ ಈ ವಿಷಯವು ಅಲ್ ಜಜೀರಾ ಮತ್ತು ದಿ ಗಾರ್ಡಿಯನ್ ವರದಿಗಳ ಮೂಲಕ ಹೊರಬಂದಿದ್ದು, ವಿಶ್ವಸಂಸ್ಥೆಯು ಕೂಡ ಈ ಘಟನೆಯನ್ನು ಮಾನವೀಯ ಇತಿಹಾಸದಲ್ಲೇ ಅತಿ ಭೀಕರ ಘಟನೆಯೆಂದು ಘೋಷಿಸಿದೆ.
Comments are closed.