Kambala: 10 ಕಂಬಳಕ್ಕೆ ಸರಕಾರದಿಂದ ತಲಾ 75 ಲಕ್ಷ ಅನುದಾನ: ಯಾವ್ಯಾವ ಕಂಬಳಕ್ಕೆ ಅನುದಾನ?

Kambala: ತುಳುನಾಡಿನ ಪರಂಪರೆಯ ಅವಿಭಾಜ್ಯ ಅಂಗವಾಗಿರುವ ಜನಪದ ಕ್ರೀಡೆ ಕಂಬಳ ಉಳಿವಿಗಾಗಿ ನಿರಂತರ ಹೋರಾಟ ನಡೆಸಿದ ಪುತ್ತೂರು ಶಾಸಕ ಅಶೋಕ್ ರೈ ಅವರ ಪ್ರಯತ್ನಕ್ಕೆ ಮತ್ತೆ ಮಹತ್ವದ ಜಯ ಸಿಕ್ಕಿದೆ. ದಶಕಗಳ ಜನಪದ ಕ್ರೀಡೆಯಾದ ಕಂಬಳ, ಕಾನೂನು ಹೋರಾಟ ಮತ್ತು ಸಂಕಷ್ಟದ ಸನ್ನಿವೇಶ ಎದುರಿಸಿದ ಸಂದರ್ಭದಲ್ಲೂ, ಸುಪ್ರೀಂ ಕೋರ್ಟ್ ಮಟ್ಟದವರೆಗೆ ಹೋರಾಡಿ ಕಂಬಳ ಉಳಿಸಿದ ಪ್ರಮುಖ ನಾಯಕರಲ್ಲಿ ಅಶೋಕ್ ರೈ ಅವರ ಪಾತ್ರ ಮಹತ್ವದ್ದು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ, ಕರಾವಳಿ ಭಾಗದಲ್ಲಿ ನಡೆಯಲಿರುವ 10 ಕಂಬಳಗಳಿಗೆ ತಲಾ ₹5 ಲಕ್ಷದಂತೆ ಅನುದಾನ ಬಿಡುಗಡೆಗೊಳಿಸಿದೆ. ಇದಕ್ಕೆ ಪ್ರಮುಖ ಕಾರಣಕರ್ತರು ಪುತ್ತೂರು ಶಾಸಕ ಅಶೋಕ್ ರೈ ಅವರೇ ಎಂದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಯಾವ್ಯಾವ ಕಂಬಳಕ್ಕೆ ಅನುದಾನ?ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಮೂಲಕ 2024-25ನೇ ಸಾಲಿನ ಅನುದಾನ ಮಂಜೂರಾಗಿದ್ದು, ಈ ಕೆಳಗಿನ ಕಂಬಳಗಳಿಗೆ ತಲಾ ₹5 ಲಕ್ಷ ಸಹಾಯಧನ ದೊರಕಲಿದೆ.
ಪುತ್ತೂರು ಕಂಬಳ
ಉಪ್ಪಿನಂಗಡಿ ಕಂಬಳ
ಜಪ್ಪು ಕಂಬಳ
ಬಂಟ್ವಾಳ ಕಂಬಳ
ವೇಣೂರು ಕಂಬಳ
ಮೂಲ್ಕಿ ಕಂಬಳ
ಮಂಗಳೂರು ಕಂಬಳ
ನರಿಂಗಾಣ ಕಂಬಳ
ಮೂಡಬಿದ್ರಿ ಕಂಬಳ
ಐಕಳ ಕಂಬಳ
Comments are closed.