Upendra: ನಟ ಉಪೇಂದ್ರ ದಂಪತಿಗಳ ‘ಮೊಬೈಲ್ ಹ್ಯಾಕ್’ ಮಾಡಿದ ಆರೋಪಿ ಅರೆಸ್ಟ್!!

Upendra: ಸ್ಯಾಂಡಲ್ ವುಡ್ ನಟ ಉಪೇಂದ್ರ ಅವರ ಪತ್ನಿ ಪ್ರಿಯಾಂಕ ಅವರ ಮೊಬೈಲನ್ನು ಹ್ಯಾಕ್ ಮಾಡಿದ ವಿಚಾರ ರಾಜ್ಯಾದ್ಯಂತ ಸದ್ದು ಮಾಡಿತ್ತು. ಈ ಕುರಿತು ದೂರು ಕೂಡ ದಾಖಲಾಗಿತ್ತು. ಇದೀಗ ಪೊಲೀಸರು ತನಿಖೆ ನಡೆಸಿ ಮೊಬೈಲ್ ಹ್ಯಾಕ್ ಮಾಡಿದ ಆರೋಪಿಯನ್ನು ಪತ್ತೆ ಹಚ್ಚಿ ಅರೆಸ್ಟ್ ಮಾಡಿದ್ದಾರೆ.

ಹೌದು, ನಟ ಉಪೇಂದ್ರ ಹಾಗೂ ಪ್ರಿಯಾಂಕಾ ಮೊಬೈಲ್ ಹ್ಯಾಕ್ ಪ್ರಕರಣ ಸಂಬಂಧ ಆರೋಪಿ ಬಿಹಾರ ಮೂಲದ ವಿಕಾಸ್ ಕುಮಾರ್ ಎಂಬಾತನನ್ನು ಬೆಂಗಳೂರಿನ ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಆರೋಪಿ ಬಂಧನಕ್ಕೆಂದು ಬಿಹಾರಕ್ಕೆ ಹೋದ ಪೊಲೀಸರೇ ಈ ಸೈಬರ್ ಖದೀಮರ ಜಾಲ ನೋಡಿ ಶಾಕ್ ಆಗಿದ್ದಾರೆ.
ಈ ಬಗ್ಗೆ ನಟ ಉಪೇಂದ್ರ ಹಾಗೂ ಪತ್ನಿ ಪ್ರಿಯಾಂಕಾ ವಿಡಿಯೋ ಮೂಲಕ ಮಾಹಿತಿ ನೀಡಿದ್ದು, ನನ್ನ ಹಾಗೂ ಪತ್ನಿ ಪ್ರಿಯಾಂಕಾ ಅವರ ಫೋನ್ ನಂಬರ್ ಗಳನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ. ಫೋನ್ ಮೂಲಕ ಬರಿ ಸಂದೇಶಗಳನ್ನು ಕಳುಹಿಸುತ್ತಿದ್ದು, ಅರ್ಜಂಟಾಗಿ ಹಣ ನೀಡುವಂತೆ ಮೆಸೇಜ್ ಕಳುಹಿಸುತ್ತಿದ್ದಾರೆ.ನಮ್ಮ ಫೋನ್ ನಂಬರ್ ಗಳಿಂದ ಕರೆ ಅಥವಾ ಮೆಸೇಜ್ ಬಂದರೆ ದಯವಿಟ್ಟು ಯಾರೂ ಹಣ ಹಾಕಬೇಡಿ. ಫೋನ್ ನಂಬರ್ ಹ್ಯಾಕ್ ಆಗಿದೆ ಎಂದು ಮನವಿ ಮಾಡಿದ್ದರು. ಅಲ್ಲದೇ ಫೋನ್ ನಂಬರ್ ಹ್ಯಾಕ್ ಆಗಿರುವ ಬಗ್ಗೆ ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರು ದಾಖಲಾಗುತ್ತಿದ್ದಂತೆ ಅಲರ್ಟ್ ಆದ ಪೊಲೀಸರು, ಆರೋಪಿ ಪತ್ತೆಗೆ ಬಲೆ ಬೀಸಿದ್ದರು. ತನಿಖೆ ವೇಳೆ ಆರೋಪಿ ಬಿಹಾರದ ದಶರತಪುರದ ನಿವಾಸಿ ಎನ್ನುವುದು ಗೊತ್ತಾಗಿತ್ತು.ಆರೋಪಿ ಬಂಧನಕ್ಕೆಂದು ಬಿಹಾರಕ್ಕೆ ಹೋದ ಪೊಲೀಸರೇ ಈ ಸೈಬರ್ ಖದೀಮರ ಜಾಲ ನೋಡಿ ಶಾಕ್ ಆಗಿದ್ದಾರೆ. 20ರಿಂದ 25 ವಯಸ್ಸಿನ ಯುವಕರು ಈ ದಂಧೆಯಲ್ಲಿ ನಿರತರಾಗಿದ್ದು, ಊರಿನ 150 ಮಂದಿ ಯುವಕರು ಸೈಬರ್ ಅಪರಾಧದಲ್ಲೇ ತೊಡಗಿಗೊಂಡಿರುವ ಆಘಾತಕಾರಿ ವಿಷಯ ಈ ವೇಳೆ ಬೆಳಕಿಗೆ ಬಂದಿದೆ.
Comments are closed.