karnataka: ಇಂದಿನಿಂದ ಕರ್ನಾಟಕ, ತಮಿಳುನಾಡಿಗೆ ಕೇರಳ ಟೂರಿಸ್ಟ್ ಬಸ್ ಬಂದ್

Share the Article

karnataka: ಇಂದಿನಿಂದ ಕರ್ನಾಟಕ (Karnataka) ಮತ್ತು ತಮಿಳುನಾಡಿಗೆ (Tamil Nadu) ಅಂತರರಾಜ್ಯ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಕೇರಳದ ಐಷಾರಾಮಿ ಬಸ್‌ ಮಾಲೀಕರ ಸಂಘ (Luxury Bus Owners Association, Kerala) ತಿಳಿಸಿದೆ.ಸೋಮವಾರ ಸಂಜೆ 6 ಗಂಟೆಯಿಂದ ಟೂರಿಸ್ಟ್ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಐಷಾರಾಮಿ ಬಸ್‌ ಮಾಲೀಕರ ಸಂಘ, ಕೇರಳ ರಾಜ್ಯ ಸಮಿತಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಎರಡೂ ರಾಜ್ಯಗಳು ಕಾನೂನುಬಾಹಿರ ರಾಜ್ಯದ ತೆರಿಗೆಗಳನ್ನು (Tax) ವಿಧಿಸುತ್ತಿದೆ. ಕೇರಳ ನಿರ್ವಾಹಕರಿಗೆ ಸೇರಿದ ಅಖಿಲ ಭಾರತ ಪ್ರವಾಸಿ ಪರವಾನಗಿ (AITP) ಬಸ್‌ಗಳನ್ನು ವಶಪಡಿಸಿಕೊಳ್ಳಲು ಪ್ರಾರಂಭಿಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸಂಘದ ರಾಜ್ಯ ಅಧ್ಯಕ್ಷ ಎಜೆ ರಿಜಾಸ್‌ ಹೇಳಿದ್ದಾರೆ.ಕಳೆದ 1 ವರ್ಷದಿಂದ ತಮಿಳುನಾಡಿನಲ್ಲಿ ಕೇರಳದ ಬಸ್ಸುಗಳಿಂದ ದಂಡ ವಸೂಲಿ ಮಾಡಲಾಗುತ್ತಿದ್ದು, ಇದರಿಂದ ನಿರ್ವಾಹಕರು ಮತ್ತು ಪ್ರಯಾಣಿಕರಿಗೆ ಕಿರುಕುಳವಾಗುತ್ತಿದೆ. ಆರ್ಥಿಕ ನಷ್ಟ ಮತ್ತು ವಾಹನ ಮುಟ್ಟುಗೋಲಿನ ಭಯದಿಂದ ಅಂತರರಾಜ್ಯ ಸೇವೆ ನೀಡುತ್ತಿದ್ದವರು ಹಿಂಜರಿಯುತ್ತಿದ್ದಾರೆ. ವಾಹನ, ಚಾಲಕ, ಪ್ರಯಾಣಿಕರ ಸುರಕ್ಷತೆಗೆ ಸೇವೆ ಸ್ಥಗಿತದ ನಿರ್ಧಾರ ಅತ್ಯಗತ್ಯ’ ಎಂದು ಸಂಘ ಹೇಳಿದೆ. ಜತೆಗೆ, ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಿ, ತಮಿಳುನಾಡು ಮತ್ತು ಕರ್ನಾಟಕ ಸರ್ಕಾರ ಹಾಗೂ ಸಾರಿಗೆ ಇಲಾಖೆಯೊಂದಿಗೆ ಸೇರಿ ಇಂತಹ ಕಾನೂನುಬಾಹಿರ ಚಟುವಟಿಕೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದೆ.

Comments are closed.