Social Media: 15 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್‌ಗೆ ಮುಂದಾದ ಸರ್ಕಾರ

Social Media: ಸ್ಮಾರ್ಟ್‌ಫೋನ್ ಮತ್ತು ಸೋಶಿಯಲ್ ಮೀಡಿಯಾದಿಂದ ( social media) ಯುವ ಸಮುದಾಯದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳನ್ನು ತಡೆಯಲು, ಡೆನ್ಮಾರ್ಕ್ ಸರ್ಕಾರ 15 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಲು ನಿರ್ಧರಿಸಿದೆ.ಯುವ ಸಮುದಾಯಸ್ಮಾರ್ಟ್ ಫೋನ್ ಹಾಗೂ ಸೋಶಿಯಲ್ ಮೀಡಿಯಾದ ಪ್ರಭಾವದಿಂದ ಯುವ ಸಮುದಾಯ ದಾರಿ ತಪ್ಪುತ್ತಿದ್ದು, ಈ ಹಿನ್ನೆಲೆ ಡೆನ್ಮಾರ್ಕ್‌ನಲ್ಲಿ ಸರ್ಕಾರವು 15 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸುವುದಕ್ಕೆ ತೀರ್ಮಾನ ಮಾಡಿದೆ. ಮಕ್ಕಳು ಮಾನಸಿಕವಾಗಿ ಹಾಳು ಮಾಡುವ ಡಿಜಿಟಲ್ ವಿಚಾರಗಳತ್ತ ಹೆಚ್ಚು ಹೆಚ್ಚು ವಾಲುತ್ತಿದ್ದು, ಇದು ಅವರ ಮೇಲೆ ಮಾನಸಿಕ ಆರೋಗ್ಯದ ಜೊತೆಗೆ ಸಾಮಾಜದ ಸ್ವಾಸ್ಥ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ ಎಂಬ ಕಳವಳದ ನಡುವೆ ಡೆನ್ಮಾರ್ಕ್ ಸರ್ಕಾರವೂ ಈ ನಿರ್ಧಾರಕ್ಕೆ ಬಂದಿದೆ.ಮೌಲ್ಯಮಾಪನದ ನಂತರ 13ನೇ ವಯಸ್ಸಿಗೆ ಸೋಶಿಯಲ್ ಮೀಡಿಯಾ ಬಳಸುವುದಕ್ಕೆ ಅನುಮತಿಈ ಕ್ರಮದಿಂದಾಗಿ ಪೋಷಕರು ನಿರ್ದಿಷ್ಟ ಮೌಲ್ಯಮಾಪನದ ನಂತರ 13ನೇ ವಯಸ್ಸಿಗೆ ಮಕ್ಕಳಿಗೆ ಸಾಮಾಜಿಕ ಮಾಧ್ಯಮವನ್ನು ಬಳಸುವುದಕ್ಕೆ ಅವಕಾಶ ನೀಡುತ್ತದೆ. ಆದರೆ ಈ ನಿಷೇಧವನ್ನು ಯಾವ ರೀತಿ ಜಾರಿಗೊಳಿಸಲಾಗುತ್ತದೆ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.

Comments are closed.