Recharge : ಡಿ. 1 ರಿಂದ ಎಲ್ಲಾ ರಿಚಾರ್ಜ್ ದರ ಮತ್ತೆ ಏರಿಕೆ ?!

Recharge : ಕೆಲವು ತಿಂಗಳ ಹಿಂದಷ್ಟೇ ರಿಚಾರ್ಜ್ ದರವನ್ನು ಏರಿಸಿ, ಎಲ್ಲಾ ಟೆಲಿಕಾಂ ಕಂಪನಿಗಳು ದೇಶದ ಜನತೆಗೆ ಶಾಕ್ ನೀಡಿದ್ವು. ಇದೀಗ ಈ ಬೆನ್ನಲ್ಲೇ ಮತ್ತೆ ಒಗ್ಗೂಡಿರುವ ಟೆಲಿಕಾಂ ಕಂಪನಿಗಳು ಮತ್ತೆ ತನ್ನ ಗ್ರಾಹಕರಿಗೆ ಅಘಾತ ನೀಡಲು ತಯಾರಿ ನಡೆಸಿವೆ. ಅಂದರೆ ಡಿಸೆಂಬರ್ 1 ರಿಂದ ಇಲ್ಲ ರಿಚಾರ್ಜ್ ದರಗಳು ಏರಿಕೆಯಾಗಲಿವೆ ಎಂದು ಸುದ್ದಿಮೂಲಗಳು ತಿಳಿಸಿವೆ.

ಹೌದು, ಇದೇ ಡಿಸೆಂಬರ್ 1ರಿಂದ ಈ ಎಲ್ಲಾ ಟೆಲಿಕಾಂ ಕಂಪೆನಿಗಳು ಮತ್ತೊಮ್ಮೆ ದರ ಏರಿಕೆ ಮಾಡಲು ಚಿಂತನೆ ನಡೆಸಿವೆ ಎನ್ನಲಾಗುತ್ತಿದೆ. ಈ ಬಗ್ಗೆ ಅಧಿಕೃತವಾಗಿ ಟಿಲಿಕಾಂ ಕಂಪೆನಿಗಳು ಯಾವುದೇ ಮಾಹಿತಿ ನೀಡಿಲ್ಲವಾದರೂ, ಸದ್ಯ ಹರಡಿರುವ ಸುದ್ದಿಯ ಪ್ರಕಾರ, ಅತಿ ಶೀಘ್ರದಲ್ಲಿ ಶೇಕಡಾ 10ರಷ್ಟು ದರ ಏರಿಕೆ ಹೆಚ್ಚಾಗಲಿದೆ ಎಂದೇ ಹೇಳಲಾಗುತ್ತಿದೆ.
ಎಷ್ಟು ಹೆಚ್ಚಾಗಬಹುದು?
ರೂ 239 ಯೋಜನೆಯು ಸುಮಾರು ರೂ 265-ರೂ 270 ವರೆಗೆ ಹೋಗಬಹುದು. · ರೂ 479 ಯೋಜನೆಯು ರೂ 530 ಕ್ಕೆ ತಲುಪಬಹುದು. ವಾರ್ಷಿಕ ಯೋಜನೆಗಳು ಆಪರೇಟರ್ ಅನ್ನು ಅವಲಂಬಿಸಿ ರೂ 300-ರೂ 500 ರಷ್ಟು ಹೆಚ್ಚಾಗಬಹುದು.
Comments are closed.