BBK-12 : ಗಿಲ್ಲಿ ಮೇಲೆ ಕೈ ಮಾಡಿದ ರಿಷಾಗೆ ಬಹುದೊಡ್ಡ ಶಿಕ್ಷೆ ಕೊಟ್ಟ ಸುದೀಪ್!!

Share the Article

BBK-12 : ಯಾರ ಮೇಲೆ ಯಾರೂ ಹಲ್ಲೆ ಮಾಡಬಾರದು’ ಎಂಬುದು ಬಿಗ್ ಬಾಸ್​ನ (Bigg Boss) ಮೂಲ ನಿಯಮಗಳಲ್ಲಿ ಒಂದು. ಈ ರೀತಿ ಮಾಡಿದರೆ ಆ ಕ್ಷಣವೇ ಅವರನ್ನು ಮನೆಯಿಂದ ಹೊರಕ್ಕೆ ಕಳುಹಿಸಲಾಗುತ್ತದೆ. ಆದರೆ ಇದೆಲ್ಲವನ್ನು ಮರೆತು ಕೆಲವು ದಿನಗಳ ಹಿಂದೆ ಬಿಗ್ ಬಾಸ್ ಸ್ಪರ್ಧಿ ರಿಷಾ ಅವರು ಮನೆಯೊಳಗೆ ಇಲ್ಲಿ ನಟನ ಮೇಲೆ ಹಲ್ಲೆ ಮಾಡಿದ್ದರು. ಇದರ ಬೆನ್ನಲ್ಲೇ ಅವರನ್ನು ಮನೆಯಿಂದ ಕಳಿಸಬೇಕೆಂದು ವೀಕ್ಷಕರು ಆಗ್ರಹಿಸಿದ್ದರು. ಇದೀಗ ವೀಕೆಂಡ್ ನಲ್ಲಿ ಸುದೀಪ ಅವರು ರಿಷಾಗೆ ಬಹುದೊಡ್ಡ ಶಿಕ್ಷೆಯನ್ನು ನೀಡಿದ್ದಾರೆ ಎನ್ನಲಾಗಿದೆ.

ಶನಿವಾರದ (ನವೆಂಬರ್ 8) ಸಂಚಿಕೆ ಮುಗಿಯುವುದಕ್ಕೂ ಮುನ್ನ ಕಿಚ್ಚ ಸುದೀಪ್ ಅವರು ಈ ಬಗ್ಗೆ ಸೂಚನೆ ನೀಡಿದರು. ‘ಮುಂದಿನ ಸಂಚಿಕೆಯಲ್ಲಿ ಮಾತನಾಡಲು ಬಹಳ ದೊಡ್ಡ ಟಾಪಿಕ್ ಇದೆ. ಈ ವೇದಿಕೆ ಮೇಲೆ ಕೆಲವು ನಿರ್ಧಾರ ನಾವು ತೆಗೆದುಕೊಳ್ಳುತ್ತೇವೆ. ಮನೆ ಒಳಗಡೆ ಅದು ದೊಡ್ಡ ವಿಚಾರ ಆಗಲೇ ಇಲ್ಲ. ಮನೆ ಆಚೆ ಸ್ವಲ್ಪ ದೊಡ್ಡದಾಗಿದೆ. ಇಂದು ಹೋಗುವುದಕ್ಕಿಂತ ಮುಂಚೆ ನಿಮಗೆ ನೆನಪಿಸಿ ಹೋಗುತ್ತೇನೆ’ ಎಂದು ಹೇಳಿದ ಸುದೀಪ್ ಅವರು ಆ ದಿನದ ವಿಡಿಯೋ ಪ್ಲೇ ಮಾಡಿದರು. 

ಖಡಕ್ ನಿರ್ಧಾರ ತೆಗೆದುಕೊಳ್ಳುವುದಕ್ಕೂ 24 ಗಂಟೆಗಳ ಮುನ್ನವೇ ಸುದೀಪ್ ಅವರು ವಿಡಿಯೋ ಪ್ಲೇ ಮಾಡಿ ಸೂಚನೆ ನೀಡಿದ್ದಾರೆ. ಆದ್ದರಿಂದ ಭಾನುವಾರದ ಸಂಚಿಕೆ ಶುರು ಆಗುವವರೆಗೂ ರಿಷಾ ಎದೆಯಲ್ಲಿ ಢವಢವ ಮುಂದುವರಿಯಲಿದೆ. ಆ ಮೂಲಕ ಸುದೀಪ್ ಅವರು ತಮ್ಮದೇ ಸ್ಟೈಲ್​​ನಲ್ಲಿ ದೊಡ್ಡ ಶಿಕ್ಷೆ ನೀಡಿದ್ದಾರೆ. ಭಾನುವಾರ ಅವರು ಪ್ರಕಟಿಸಲಿರುವ ಅಂತಿಮ ತೀರ್ಪು ಏನು ಎಂಬುದನ್ನು ತಿಳಿಯಲು ವೀಕ್ಷಕರು ಕಾದಿದ್ದಾರೆ.

Comments are closed.