Home News Zee Kannada: ‘ದಯವಿಟ್ಟು ನಮ್ಮನ್ನು ಕ್ಷಮಿಸಿ’ ಎಂದು ವಿಭಿನ್ನ ಪೋಸ್ಟ್ ಹಂಚಿಕೊಂಡ ಜೀ ಕನ್ನಡ!!

Zee Kannada: ‘ದಯವಿಟ್ಟು ನಮ್ಮನ್ನು ಕ್ಷಮಿಸಿ’ ಎಂದು ವಿಭಿನ್ನ ಪೋಸ್ಟ್ ಹಂಚಿಕೊಂಡ ಜೀ ಕನ್ನಡ!!

Hindu neighbor gifts plot of land

Hindu neighbour gifts land to Muslim journalist

Zee Kannada : ಕನ್ನಡದ ಕಿರುತೆರೆಯಲ್ಲಿ ‘ಜೀ ಕನ್ನಡ’ ತನ್ನದೇ ಆದ ಮೆರುಗು ಮೂಡಿಸಿದ. ಅನೇಕ ಮನರಂಜನ ಕಾರ್ಯಕ್ರಮಗಳನ್ನು ನೀಡುವ ಮೂಲಕ ಕನ್ನಡ ಜನತೆಯನ್ನು ರಂಜಿಸುತ್ತಿದೆ. ಇದರ ನಡುವೆ ಜೀ ಕನ್ನಡವು ಸೋಶಿಯಲ್ ಮೀಡಿಯಾದಲ್ಲಿ ಕ್ಷಮಾಪಣಾ ಪತ್ರ ಒಂದನ್ನು ಶೇರ್ ಮಾಡಿಕೊಂಡಿದ್ದು ದಯವಿಟ್ಟು ನಮ್ಮನ್ನು ಕ್ಷಮಿಸಿಬಿಡಿ ಎಂದು ಹೇಳಿದೆ. ಹಾಗಂತ ಇದು ತಪ್ಪು ಮಾಡಿ ಕೇಳಿದ ಕ್ಷಮೆ ಅಲ್ಲ. ಮತ್ತೇನು ಗೊತ್ತಾ?

ಹೌದು, ಮನರಂಜನಾ ವಾಹಿನಿ ಜೀ ಕನ್ನಡವು ತನ್ನ ವೀಕ್ಷಕರಿಗೆ ಬಹಿರಂಗ ಪತ್ರ ಬರೆದು ಕ್ಷಮೆ ಕೋರಿದೆ. ಆದರೆ ಅದರಲ್ಲಿ ವೀಕ್ಷಕರಾದ ನಿಮ್ಮನ್ನು ನಮ್ಮದೇ ಕಾರ್ಯಕ್ರಮಗಳನ್ನು ಮಾತ್ರ ನೋಡುವಂತೆ ಮಾಡಿದ, ಇತರ ಚಾನೆಲ್ ಗಳನ್ನು ಮರೆಯುವಂತೆ ನಿಮ್ಮನ್ನು ರೂಪಿಸಿದ ನಮ್ಮ ಚಾನೆಲ್ ನನ್ನು ಕ್ಷಮಿಸಬೇಕು ಎಂದು ಬರೆಯಲಾಗಿದೆ.

ಕ್ಷಮಾಪಣಾ ಪತ್ರದಲ್ಲಿ ಏನಿದೆ?
ವೈವಿಧ್ಯಮಯ, ವಿಶೇಷ, ವಿಭಿನ್ನ ಕಾರ್ಯಕ್ರಮಗಳ ಮೂಲಕ ಮನರಂಜನಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ನಿಮ್ಮ ಹೆಮ್ಮೆಯ ಜೀ ಕನ್ನಡ ಚಾನಲ್ ನಮ್ಮೆಲ್ಲರ ಮನಗೆದ್ದಿರುವುದು ಗೊತ್ತೇ ಇದೆ. ನಿಮ್ಮ ಪ್ರಶಂಸೆಯ ಜೊತೆಗೆ ಜೀ ಕನ್ನಡ ಚಾನಲ್ ಶುರುವಾದ ನಂತರ ಮನೋರಂಜನೆಯಲ್ಲೇ ಮುಳುಗುವ ನಾವು ರಿಮೋಟ್‌ನೇ ಮರೆತು ಬಿಡುತ್ತೀವಿ, ಚಾನಲ್ ಬದಲಾಯಿಸುವುದೇ ಇಲ್ಲ ಎನ್ನುವ ಪ್ರೀತಿಯ ಆರೋಪ ಕೇಳಿಬಂದಿದೆ. ನಮ್ಮ ಅದ್ಭುತ ಮನರಂಜನಾ ಕಾರ್ಯಕ್ರಮಗಳ ಮೂಲಕ ನಿಮಗೆ ಬೇರೆ ಚಾನಲ್ ಗಳನ್ನು ಮರೆಯುವಂತೆ ಮಾಡಿದ್ದಕ್ಕಾಗಿ ದಯವಿಟ್ಟು ಕ್ಷಮೆಯಿರಲಿ. ನಿಮ್ಮ ಕ್ಷಮೆಯ ಜೊತೆಜೊತೆಗೇ ನಿಮ್ಮ ಪ್ರೀತಿಯ ಆರೋಪವನ್ನು ನಾವು ಇನ್ನೂ ಹೆಚ್ಚು ಮಾಡುತ್ತೇವೆ ಎನ್ನುವ ಭರವಸೆ ನೀಡುತ್ತೇವೆ. ಧನ್ಯವಾದಗಳು.

ಇದಕ್ಕೆ ಕೆಲವು ವೀಕ್ಷಕರು ಹಲವು ರೀತಿಯಲ್ಲಿ ಕಮೆಂಟ್ ಮಾಡಿದ್ದು ನಿಮ್ಮ ಬೆನ್ನನ್ನು ನೀವೇ ತಟ್ಟಿಕೊಳ್ಳುತ್ತಿದ್ದೀರಿ. ಇದು ಉತ್ತಮ ನಡೆಯಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಹೊಸ ಧಾರಾವಾಹಿ, ರಿಯಾಲಿಟಿ ಶೋ ಉನ್ನತಿಯಿಂದ ಅವನತಿಯ ಕಡೆಗೆ ಹೋಗುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ.