Namma metro: ‘ನಮ್ಮ ಮೆಟ್ರೋ ಇನ್ನು ನಮ್ಮದಲ್ಲ’ ಕೇಂದ್ರದ ಆಸ್ತಿ; ಹೈಕೋರ್ಟ್ ತೀರ್ಪು

Share the Article

Namma metro: ‘ನಮ್ಮ ಮೆಟ್ರೋ’ದ ಮಾಲೀಕತ್ವ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ರಾಜ್ಯ ಸರ್ಕಾರದ ಅಧೀನ ಸಂಸ್ಥೆಯಲ್ಲ, ಬದಲಾಗಿ ಇದು ಕೇಂದ್ರ ಸರ್ಕಾರದ ನಿಯಂತ್ರಣಕ್ಕೊಳಪಟ್ಟಿದೆ ಎಂದು ‘ರೈಲ್ವೆ ಕಂಪನಿ’ ಸ್ಪಷ್ಟಪಡಿಸಿದೆ.ಈ ಐತಿಹಾಸಿಕ ತೀರ್ಪಿನೊಂದಿಗೆ, ಮೆಟ್ರೋ ನೌಕರರ ಮುಷ್ಕರವನ್ನು ಹತ್ತಿಕ್ಕಲು ರಾಜ್ಯ ಸರ್ಕಾರ ಜಾರಿಗೊಳಿಸಿದ್ದ ‘ಕರ್ನಾಟಕ ಅತ್ಯವಶ್ಯಕ ಸೇವೆಗಳ ನಿರ್ವಹಣಾ ಕಾಯ್ದೆ’ (ಎಸ್ಮಾ) ಅಧಿಸೂಚನೆಯನ್ನು ನ್ಯಾಯಾಲಯ ರದ್ದುಗೊಳಿಸಿದೆ.ಹೈಕೋರ್ಟ್ ಹೇಳಿದ್ದೇನು?ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ಪೀಠವು, ನೌಕರರ ಸಂಘದ ವಾದವನ್ನು ಎತ್ತಿಹಿಡಿದು ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿಯನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿದೆ.

1. ಕೇಂದ್ರದ ಕಾಯ್ದೆಯೇ ಅಂತಿಮ: ಬಿಎಂಆರ್‌ಸಿಎಲ್ ಅನ್ನು ‘ಮೆಟ್ರೋ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ, 2002’ರ ಅಡಿಯಲ್ಲಿ ಸ್ಥಾಪಿಸಲಾಗಿದೆ. ಇದು ಕೇಂದ್ರ ಸರ್ಕಾರದ ಕಾಯ್ದೆಯಾಗಿದ್ದು, ಅದರ ನಿಯಮಗಳೇ ಅಂತಿಮವಾಗಿರುತ್ತವೆ.

2. ಷೇರು ಬಂಡವಾಳ ಮುಖ್ಯವಲ್ಲ: ಬಿಎಂಆರ್‌ಸಿಎಲ್‌ನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಲಾ ಶೇ. 50ರಷ್ಟು ಷೇರುಗಳನ್ನು ಹೊಂದಿರಬಹುದು. ಆದರೆ, ಆಡಳಿತಾತ್ಮಕ ಮತ್ತು ಕಾನೂನಾತ್ಮಕ ನಿಯಂತ್ರಣದ ವಿಷಯದಲ್ಲಿ, ಅದು ಕೇಂದ್ರದ ‘ರೈಲ್ವೆ’ ಕಾಯ್ದೆಯ ವ್ಯಾಪ್ತಿಗೇ ಬರುತ್ತದೆ.

3. ರಾಜ್ಯಕ್ಕೆ ಅಧಿಕಾರವಿಲ್ಲ: ಕೇಂದ್ರ ಸರ್ಕಾರದ ಕಾಯ್ದೆಯಡಿ ಬರುವ ಸಂಸ್ಥೆಯ ಸೇವೆಯನ್ನು ‘ಅತ್ಯವಶ್ಯಕ ಸೇವೆ’ ಎಂದು ಘೋಷಿಸಲು ಅಥವಾ ಕೈಗಾರಿಕಾ ವಿವಾದಗಳಲ್ಲಿ ಹಸ್ತಕ್ಷೇಪ ಮಾಡಲು ರಾಜ್ಯ ಸರ್ಕಾರಕ್ಕೆ ‘ಎಸ್ಮಾ’ ಕಾಯ್ದೆಯಡಿ ಅಧಿಕಾರವಿಲ್ಲ.

4. ಕೇಂದ್ರವೇ ‘ಸಂಬಂಧಪಟ್ಟ ಸರ್ಕಾರ’: ನೌಕರರ ಯಾವುದೇ ಕೈಗಾರಿಕಾ ವ್ಯಾಜ್ಯಗಳು, ವೇತನ, ಅಥವಾ ಸೇವಾ ನಿಯಮಗಳಿಗೆ ಸಂಬಂಧಿಸಿದಂತೆ ತೀರ್ಮಾನ ಕೈಗೊಳ್ಳುವ ಅಧಿಕಾರ ‘ಸಂಬಂಧಪಟ್ಟ ಸರ್ಕಾರ’ವಾದ (Appropriate Government) ಕೇಂದ್ರ ಸರ್ಕಾರಕ್ಕೆ ಮಾತ್ರ ಇರುತ್ತದೆ.

Comments are closed.