Viral Video: 80KM ವೇಗದಲ್ಲಿ ಬಸ್‌ ಓಡಿಸ್ತಾ ಬಿಗ್‌ಬಾಸ್‌ ನೋಡಿದ ಬಸ್‌ ಡ್ರೈವರ್:‌ ಕ್ರಮ ಕೈಗೊಂಡ ಕಂಪನಿ

Share the Article

Bangalore: ಖಾಸಗಿ ವಲಯದ ಪ್ರಮುಖ ಟ್ರಾವೆಲ್‌ ಕಂಪನಿ ಆಗಿರುವ ವಿಆರ್‌ಎಲ್‌ನ ಡ್ರೈವರ್‌ ಬಿಗ್‌ಬಾಸ್‌ ನೋಡುತ್ತಾ ಬಸ್‌ ರೈಡ್‌ ಮಾಡಿರುವ ವಿಡಿಯೋ ವೈರಲ್‌ ಆಗಿದೆ. ಬಸ್‌ ಗಂಟೆಗೆ 80 ಕಿ.ಮೀ ವೇಗದಲ್ಲಿ ಹೋಗುತ್ತಿದ್ದ ವೇಳೆ, ಡ್ರೈವರ್‌ ಬಿಗ್‌ಬಾಸ್‌ ನೋಡುತ್ತಾ ಬಸ್‌ ರೈಡ್‌ ಮಾಡುವುದು ಕಂಡು ಬಂದಿದ್ದು, ಇದನ್ನು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಆಕ್ಸಿಡೆಂಟ್‌ಗಳಿಗೆ ಇದೂ ಒಂದು ಕಾರಣ ಎಂದು ವಿಡಿಯೋವನ್ನು ಪೋಸ್ಟ್‌ ಮಾಡಿದ್ದಾರೆ. ಇದರಲ್ಲಿ ಡ್ರೈವರ್‌ ಬಸ್‌ನ ಸ್ಟೇರಿಂಗ್‌ ವೀಲ್‌ನ ಕೆಳಗೆ ಮೊಬೈಲ್‌ ಇಟ್ಟು ಬಿಗ್‌ಬಾಸ್‌ ನೋಡುತ್ತಿರುವುದು ಕಂಡಿದೆ. ಮಧ್ಯರಾತ್ರಿ 2.50 ರ ಸುಮಾರಿಗೆ ಈ ವಿಡಿಯೋ ಮಾಡಿದ್ದಾಗಿ ತೋರಿಸಲಾಗಿದೆ.

ಈ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ವಿಆರ್‌ಎಲ್‌ ಬಸ್‌ ಡ್ರೈವರ್‌ ವಿರುದ್ಧ ಕ್ರಮ ತೆಗೆದುಕೊಂಡಿದೆ ಎಂದು ತಿಳಿಸಿದೆ.

ನಿಮ್ಮ ದೂರಿನ ನಂತರ, ಆಂತರಿಕ ವಿಚಾರಣೆ ನಡೆಸಲಾಯಿತು ಮತ್ತು ಸಂಬಂಧಪಟ್ಟ ಚಾಲಕನ ನಿರ್ಲಕ್ಷ್ಯ ವರ್ತನೆಯಿಂದಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಕರ್ತವ್ಯದಿಂದ ಅವರನ್ನು ಬಿಡುಗಡೆ ಮಾಡಲಾಗಿದೆ. ಪ್ರಯಾಣಿಕರ ಸುರಕ್ಷತೆಗೆ ಧಕ್ಕೆ ತರುವ ಯಾವುದೇ ಕ್ರಮವನ್ನು ವಿಜಯಾನಂದ್ ಟ್ರಾವೆಲ್ಸ್ ಸಹಿಸುವುದಿಲ್ಲ. ಈ ವಿಚಾರದಲ್ಲಿ ಶೂನ್ಯ ಸಹಿಷ್ಣುತೆಯನ್ನು ಕಾಯ್ದುಕೊಳ್ಳುತ್ತದೆ.

Comments are closed.