ATM: ಕಾರ್ಡ್ ಇಲ್ಲದೆಯೂ ATM ನಿಂದ ಹಣ ಡ್ರಾ ಮಾಡ್ಬೋದು ಅಂತ ಗೊತ್ತಾ ನಿಮ್ಗೆ? ಇದಂತೂ ತುಂಬಾ ಸುಲಭ

ATM: ತುರ್ತು ಸಂದರ್ಭದಲ್ಲಿ ಅಥವಾ ಯಾವುದಾದರೂ ಎಮರ್ಜೆನ್ಸಿ ವೇಳೆ ಹಣ ಬೇಕೆಂದಾಗ ಸೀದಾ ಎಟಿಎಂಗೆ ಹೋಗಿ ಬಿಡಿಸಿಕೊಂಡು ಬರುತ್ತೇವೆ. ಆದರೆ ಕೆಲವೊಮ್ಮೆ ಆತುರದಲ್ಲಿ ಎಟಿಎಂ ಗೆ ತೆರಳಿದಾಗ ಗೊತ್ತಾಗುತ್ತೆ ನಾವು ಮನೆಯಲ್ಲಿ ಕಾರ್ಡ್ ಮರೆತು ಬಂದಿದ್ದೇವೆ. ಇಂಥ ಸಂದರ್ಭದಲ್ಲಿ ಸಿಟ್ಟು, ದುಃಖ, ಅಳು ಎಲ್ಲವೂ ಒಟ್ಟಿಗೆ ಬಂದುಬಿಡುತ್ತದೆ. ಆದರೆ ಇನ್ನು ಮುಂದೆ ಆ ಚಿಂತೆ ಬಿಡಿ ಏಕೆಂದರೆ ನೀವು ಕಾರ್ಡ್ ಇಲ್ಲದೆಯೂ ಕೂಡ ಎಟಿಎಂನಿಂದ ಹಣ ಡ್ರಾ ಮಾಡಬಹುದು.

ಹೌದು, ಹೌದು. ಅದು ಸಾಧ್ಯ. ಕಾರ್ಡ್ ಮರೆತುಹೋದರೂ ಪರವಾಗಿಲ್ಲ, ಎಟಿಎಂನಿಂದ ಹಣವನ್ನು ಪಡೆಯಬಹುದು. ಆದರೆ ಫೋನ್ ನಿಮ್ಮೊಂದಿಗೆ ಇರಬೇಕು. ಫೋನ್ನಲ್ಲಿ ಯುಪಿಐ ಅಪ್ಲಿಕೇಶನ್ ಕೂಡಾ ಇರಬೇಕು. ಇದು ಎಟಿಎಂನಲ್ಲಿ ಗೂಗಲ್ ಪೇ, ಫೋನ್ಪೇ ಅಥವಾ ಭೀಮ್ ಅಪ್ಲಿಕೇಶನ್ ಮೂಲಕ ಹಣವನ್ನು ಡ್ರಾ ಮಾಡಲು ಅವಕಾಶ ಮಾಡಿಕೊಡುತ್ತದೆ. ಇದು ಫೀಚರ್ ವೇಗ, ಸುಲಭ ಹಾಗೆಯೇ ಅತ್ಯಂತ ಸುರಕ್ಷಿತ ಕೂಡ. ಏಕೆಂದರೆ ಇದಕ್ಕೆ ಕಾರ್ಡ್ ಸ್ವೈಪ್ ಮಾಡುವುದು ಅಥವಾ ಪಿನ್ ನಮೂದಿಸುವ ಅಗತ್ಯವಿಲ್ಲ.
ಎಟಿಎಂ ಇಲ್ಲದೆ ಹಣ ಡ್ರಾ ಮಾಡುವುದು ಹೇಗೆ?
ನೀವು ಎಟಿಎಂ ಯಂತ್ರದಲ್ಲಿ ವಿತ್ ಡ್ರಾ ಕ್ಯಾಶ್ ಆಯ್ಕೆಯನ್ನು ಆರಿಸಬೇಕಾಗುತ್ತದೆ. ಅದರ ನಂತರ ಎಟಿಎಂನಲ್ಲಿ ಯುಪಿಐ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದನ್ನು ಆಯ್ಕೆ ಮಾಡಿದ ನಂತರ, ಎಟಿಎಂ ಪರದೆಯ ಮೇಲೆ ಕ್ಯೂಆರ್ ಕೋಡ್ ಕಾಣಿಸಿಕೊಳ್ಳುತ್ತದೆ. ಈಗ ನಿಮ್ಮ UPI ಅಪ್ಲಿಕೇಶನ್ನಿಂದ QR ಕೋಡ್ ಅನ್ನು ಸ್ಕ್ಯಾನ್ ಮಾಡಿ. ಉದಾಹರಣೆಗೆ ಗೂಗಲ್ ಪೇ. ಇದರ ನಂತರ, ನಿಮ್ಮ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಿ ಮತ್ತು ನಿಮ್ಮ ಯುಪಿಐ ಪಿನ್ ಅನ್ನು ನಮೂದಿಸಿ. ನಂತರ ನಿಮಗೆ ಬೇಕಾದ ಮೊತ್ತವನ್ನು ನಮೂದಿಸಿ. ನಂತರ ಮುಂದುವರಿಸಿ ಕ್ಲಿಕ್ ಮಾಡಬೇಕು. ಆ ಬಳಿಕ ಎಟಿಎಂನಿಂದ ಹಣ ಸಿಗುತ್ತದೆ.
ಇನ್ನೂ ATM ನಲ್ಲಿ UPI ಅಪ್ಲಿಕೇಶನ್ ಬಳಸಿ, ನೀವು ಪ್ರತಿ ವಹಿವಾಟಿಗೆ ಗರಿಷ್ಠ ₹10,000 ಹಿಂಪಡೆಯಬಹುದು. ದಿನಕ್ಕೆ ನಿಮ್ಮ UPI ಮಿತಿ ಇಷ್ಟು ಮಾತ್ರ. ನೀವು PhonePe, Google Pay, Paytm ಮತ್ತು BHIM ಮೂಲಕ UPI ನಗದು ಹಿಂಪಡೆಯುವಿಕೆ ಮಾಡಬಹುದು. ಈ ವೈಶಿಷ್ಟ್ಯವು ICCW- ಸಕ್ರಿಯಗೊಳಿಸಿದ ATM ಗಳಲ್ಲಿ ಮಾತ್ರ ಲಭ್ಯವಿದೆ ಎಂಬುದನ್ನು ಗಮನಿಸುವುದು ಮುಖ್ಯ. ಇದರರ್ಥ ನೀವು ಎಲ್ಲಾ ATMನಲ್ಲಿಯೂ UPI ಬಳಸಿ ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ.
Comments are closed.