Rahul Gandhi : ‘ಬ್ರೆಜಿಲ್ ಮಾಡೆಲ್’ ನಿಂದ ಭಾರತದಲ್ಲಿ 22 ಬಾರಿ ಮತದಾನ’ ಎಂದ ರಾಹುಲ್ ಗಾಂಧಿ – ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟ ಬ್ರೆಜಿಲ್ ‘ಬ್ಯೂಟಿ’

Share the Article

Rahul Gandhi : ಭಾರತದಲ್ಲಿ ಅಕ್ರಮ ಮತದಾನ ನಡೆಯುತ್ತದೆ, ಮತಗಳ್ಳತನ ಆಗುತ್ತಿದೆ ಎಂದು ಗಂಭೀರವಾಗಿ ಆರೋಪ ಮಾಡುತ್ತಿರುವ ರಾಹುಲ್ ಗಾಂಧಿಯವರು ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬ್ರೆಜಿಲ್ ಮಾಡೆಲ್ ಬರೋಬ್ಬರಿ 22 ಬಾರಿ ಮತ ಚಲಾಯಿಸಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದರು. ಇದೀಗ ರಾಹುಲ್ ಗಾಂಧಿ ಆರೋಪಕ್ಕೆ ಇದೀಗ ಬ್ರೆಜಿಲ್ ಮಾಡೆಲ್ ಲಾರಿಸ್ಸಾ ಪ್ರತಿಕ್ರಿಯೆ ನೀಡಿದ್ದಾರೆ.

ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ, ಹರಿಯಾಣದಲ್ಲಿ ’25 ಲಕ್ಷ ಮತಗಳನ್ನು ಕಳವು ಮಾಡಲಾಗಿದೆ’ ಎಂದು ಆರೋಪಿಸಿದ್ದರು ಮತ್ತು ಬ್ರೆಜಿಲ್ನ ಮಾಡೆಲ್ಗೆ ಸೇರಿದ ಮಹಿಳೆಯೊಬ್ಬರ ಛಾಯಾಚಿತ್ರವು ರಾಜ್ಯದ ಮತದಾರರ ಪಟ್ಟಿಯಲ್ಲಿ ‘ಸ್ವೀಟಿ’, ‘ಸೀಮಾ’ ಮತ್ತು ‘ಸರಸ್ವತಿ’ ಮುಂತಾದ ವಿವಿಧ ಹೆಸರುಗಳಲ್ಲಿ 22 ಬಾರಿ ಕಾಣಿಸಿಕೊಂಡಿದೆ ಎಂದು ಉದಾಹರಣೆಯಾಗಿ ಉಲ್ಲೇಖಿಸಿದ್ದರು.

ಇದೀಗ ಬ್ರೆಜಿಲಿಯನ್ ಮಾಡೆಲ್ X ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದು, ಭಾರತದಲ್ಲಿ ಚುನಾವಣಾ ಉದ್ದೇಶಗಳಿಗಾಗಿ ತಮ್ಮ ಚಿತ್ರವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಆಘಾತ ವ್ಯಕ್ತಪಡಿಸಿದ್ದಾರೆ. ಪೋರ್ಚುಗೀಸ್ ಭಾಷೆಯಲ್ಲಿ ಮಾತನಾಡುತ್ತಾ, ಅವರು ತಮಾಷೆ ಮಾಡಿದ್ದು, ‘ಗೈಸ್, ನಾನು ನಿಮಗೆ ಒಂದು ಜೋಕ್ ಹೇಳುತ್ತೇನೆ. ಇದು ತುಂಬಾ ಭಯಾನಕವಾಗಿದೆ! ನಾವು ನನ್ನ ಹಳೆಯ ಚಿತ್ರವನ್ನು ಬಳಸುತ್ತಿದ್ದೇವೆಯೇ? ನನ್ನ ಫೋಟೋ ಹಳೆಯದು; ನಾನು ಚಿಕ್ಕವಳಾಗಿದ್ದೆ. ಅವರು ಭಾರತದಲ್ಲಿ ಮತದಾನಕ್ಕಾಗಿ ನನ್ನ ಚಿತ್ರವನ್ನು ಬಳಸುತ್ತಿದ್ದಾರೆ, ಪರಸ್ಪರ ಹೋರಾಡಲು ನನ್ನನ್ನು ಭಾರತೀಯ ಎಂದು ಚಿತ್ರಿಸುತ್ತಿದ್ದಾರೆ. ಎಷ್ಟು ಹುಚ್ಚು ನೋಡಿ!’ ಎಂದಿದ್ದಾರೆ.

 

Comments are closed.