Puttur: ಪುತ್ತೂರು: ವಿಷಪದಾರ್ಥ ಸೇವಿಸಿದ ಮಹಿಳೆ ಮೃತ್ಯು: ಪತಿಯ ವಿರುದ್ಧ ಪ್ರಕರಣ ದಾಖಲು


Puttur: ಪುತ್ತೂರು(puttur) ಕೊಡಿಪ್ಪಾಡಿ ನಿವಾಸಿ ಮನೋಜ್ ಅವರ ಪತ್ನಿ ಶ್ರುತಿ (35.)ರವರು ಎರಡು ದಿನದ ಹಿಂದೆ ವಿಷಪದಾರ್ಥ ಸೇವಿಸಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆಯೊಬ್ಬರು ಚಿಕಿತ್ಸೆಗೆ ಸ್ಪಂದಿಸದೆ ನ.4ರಂದು ರಾತ್ರಿ ಮೃತಪಟ್ಟಿದ್ದಾರೆ.
ನ.3ರಂದು ಮನೆಯಲ್ಲಿ ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡಿದ್ದ ಅವರನ್ನು ಮಂಗಳೂರು ಎಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ನ.4ರಂದು ರಾತ್ರಿ ಮೃತಪಟ್ಟಿದ್ದಾರೆ.
ಗಂಡ ನೀಡುತ್ತಿದ್ದ ಮಾನಸಿಕ, ದೈಹಿಕ ಕಿರುಕುಳದಿಂದ ಮಗಳು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆರೋಪಿಸಿ ಶ್ರುತಿ ಅವರ ತಂದೆ ಇಕ್ಕಿದು ಗ್ರಾಮದ ಆನಂದ ರೈ ಅವರು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನಲ್ಲಿ “ನನ್ನ ಮಗಳನ್ನು 15 ವರ್ಷದ ಹಿಂದೆ ಮನೋಜ್ ಗೆ ವಿವಾಹ ಮಾಡಿಕೊಡಲಾಗಿತ್ತು. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಒಂದೂವರೆ ವರ್ಷದಿಂದ ಕೊಡಿಪ್ಪಾಡಿಯಲ್ಲಿ ಮನೆ ಮಾಡಿ ವಾಸ್ತವ್ಯ ಹೊಂದಿದ್ದರು. ಮನೋಜ್ ನನ್ನ ಮಗಳು ಶ್ರುತಿಗೆ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ. ನ.4ರಂದು ಬೆಳಿಗ್ಗೆ ಆಕೆ ವಿಷಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿದ್ದಾಳೆ ಎಂದು ಆನಂದ ರೈ ದೂರಿನಲ್ಲಿ ತಿಳಿಸಿದ್ದು, ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.