Gold Price : 2026ಕ್ಕೆ ಇನ್ನೂ ಏರಿಕೆ ಆಗುತ್ತಾ ಚಿನ್ನದ ದರ? ತಜ್ಞರು ಹೇಳೋದೇನು?

Gold Price: ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಆದರೆ ಚಿನ್ನದ ದರ ಎಷ್ಟೇ ಏರಿಕೆ ಕಂಡರೂ ಕೂಡ ಅದನ್ನು ಕೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಇದೆಯೇ ಹೊರತು ಕಡಿಮೆಯಾಗುತ್ತಿಲ್ಲ. ಇದರ ನಡುವೆ ಭವಿಷ್ಯದಲ್ಲಿ ಚಿನ್ನದ ದರ ಏನಾಗಬಹುದು ಎಂಬ ಚರ್ಚೆಗಳು ಕೂಡ ಹುಟ್ಟಿಕೊಂಡಿವೆ. ಅಂತೆಯೇ ಇದೀಗ 2025ರಲ್ಲಿ ಚಿನ್ನದ ದರ ಗಣನೀಯವಾಗಿ ಏರಿಕೆ ಕಂಡಿದ್ದು 2020ರಕ್ಕೆ ಇನ್ನೂ ಏರಿಕೆಯಾಗುತ್ತದೆಯೇ ಎಂಬ ದುಗುಡ ಹೆಚ್ಚಾಗಿದೆ. ಹಾಗಿದ್ದರೆ ಈ ಕುರಿತು ತಜ್ಞರು ಹೇಳುವುದೇನು? ನೋಡೋಣ ಬನ್ನಿ

2026ರಲ್ಲಿ ಚಿನ್ನದ ಬೆಲೆ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ತಜ್ಞರು ಹೇಳುತ್ತಾರೆ. ವಿಶ್ವಾದ್ಯಂತ ಕೇಂದ್ರ ಬ್ಯಾಂಕ್ಗಳಿಂದ ಹೆಚ್ಚುತ್ತಿರುವ ಖರೀದಿ, ಹೂಡಿಕೆ ಮತ್ತು ಅಮೆರಿಕದ ಕೇಂದ್ರ ಬ್ಯಾಂಕ್ ಬಡ್ಡಿ ದರ ಕಡಿತಗೊಳಿಸುವ ನಿರ್ಧಾರಗಳು ಚಿನ್ನದ ಬೆಲೆ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ 2026ರಲ್ಲಿ ಚಿನ್ನದ ಬೆಲೆ 126,000 ರೂ.ನಿಂದ 156,000 ರೂ.ವರೆಗೆ ಏರಿಕೆ ಕಾಣಬಹುದು ಎಂದು ಚಿನ್ನದ ಬೆಲೆ ಬಗ್ಗೆ ವಿಶ್ಲೇಷಣೆ ಮಾಡುವ ತಜ್ಞರು ಅಂದಾಜಿಸಿದ್ದಾರೆ.
ಬ್ರೋಕರೇಜ್ ಹೌಸ್ ಎಚ್ಎಸ್ಬಿಸಿ, 10 ಗ್ರಾಂ ಚಿನ್ನದ ದರ 144,068 ರೂ. ತಲುಪುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಿದೆ. ಅದೇ ರೀತಿ ಗೋಲ್ಡ್ಮನ್ ಸ್ಯಾಚ್ಸ್ ಪ್ರಕಾರ, ಚಿನ್ನದ ಬೆಲೆ ಪ್ರತಿ ಔನ್ಸ್ಗೆ 4900 ಡಾಲರ್ ಅಥವಾ ಸುಮಾರು 153,000 ರೂ.ಗೆ ಏರಬಹುದು ಅಂದಾಜಿಸಿದೆ.
Comments are closed.