Karnataka: ‘ಅಡುಗೆ ಸಿಬ್ಬಂದಿಗಳಿಗೆ’ 1000 ರೂ. ಹೆಚ್ಚಳ ಮತ್ತು ‘ಗೌರವಧನ’ ಬಿಡುಗಡೆ

Share the Article

 

Karnataka: 2025-26ಸಾಲಿನಲ್ಲಿ ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆಯಡಿ (ಮಧ್ಯಾಹ್ನ ಉಪಹಾರ ಯೋಜನೆ) ಕರ್ತವ್ಯ ನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಗಳಿಗೆ ಆಗಸ್ಟ್-2025 ರಿಂದ ಅಕ್ಟೋಬರ್-2025ರ ವರೆಗೆ 03 ತಿಂಗಳ ಅವಧಿಯ ಗೌರವ ಸಂಭಾವನೆ ಮೊತ್ತವನ್ನು ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಮೇಲೆ ಓದಲಾದ ಕ್ರಮಾಂಕ (1)ರ 2025-26ನೇ ಸಾಲಿನಲ್ಲಿ ಪಂಚಾಯತ್ಗಳಿಗೆ ಒದಗಿಸಿರುವ ಆಯವ್ಯಯದ ವಿವರಗಳಿಗೆ (ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯತಿ ಕಾರ್ಯಕ್ರಮಗಳಿಗೆ) ಸಂಬಂಧಿಸಿದ ಸಂಪುಟ-1,2,3&4ರಲ್ಲಿ ರಾಜ್ಯ ಯೋಜನೆ ಕ್ಷೀರಭಾಗ್ಯ (ಎಂ.ಡಿ.ಎಂ) ಕಾರ್ಯಕ್ರಮದ ಲೆಕ್ಕ ಶೀರ್ಷಿಕೆ: 2202-00-101-0-18 (2202-01-196-1-02-300) F-32408 2025-26 ಒಟ್ಟಾರೆಯಾಗಿ ರೂ.41206.31 ಲಕ್ಷಗಳನ್ನು ನಿಗದಿಪಡಿಸಲಾಗಿದೆ.

ಕ್ರಮಾಂಕ (2)ರ ಆರ್ಥಿಕ ಅಧಿಕೃತ ಜ್ಞಾಪನದಲ್ಲಿ ಕಾಲಕಾಲಕ್ಕೆ ಜಾರಿಯಲ್ಲಿರುವ ಮಿತವ್ಯಯದ ಸೂಚನೆಗಳನ್ನು ಮತ್ತು ಸಾಮಾನ್ಯ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ವಿಧಾನ ಮಂಡಲವು ಅನುಮೋದಿಸಿರುವ ಕರ್ನಾಟಕ ಧನವಿನಿಯೋಗ (ಲೇಖಾನುದಾನ) ವಿಧೇಯಕದನ್ವಯ 2025-26ನೇ ಸಾಲಿನ ವಿವಿಧ ಯೋಜನೆ/ಕಾರ್ಯಕ್ರಮಗಳಿಗೆ ದಿನಾಂಕ: 1ನೇ ಏಪ್ರಿಲ್ 2025 ರಿಂದ 31ನೇ ಮಾರ್ಚ್ 2026ರ ವರೆಗಿನ ಅವಧಿಯ ವೆಚ್ಚವನ್ನು ಭರಿಸಲು ಏ ಇಲಾಖಾ ಮುಖ್ಯಸ್ಥರು ಮತ್ತು ಅಂದಾಜು ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿರುತ್ತದೆ.

ಮೇಲೆ ಓದಲಾದ ಕ್ರಮಾಂಕ (3)ರ ಸರ್ಕಾರದ ಆದೇಶಲ್ಲಿ 2025-26ನೇ ಸಾಲಿನ ಆಯವ್ಯಯ ಭಾಷಣದಲ್ಲಿನ ಕಂಡಿಕೆ-109ರ ಘೋಷಣೆಯ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಮಧ್ಯಾಹ್ನ ಉಪಹಾರ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಅಡುಗೆಯವರು ಹಾಗೂ ಸಹಾಯಕ ಅಡುಗೆಯವರಿಗೆ ನೀಡಲಾಗುವ ಮಾಸಿಕ ಗೌರವ ಸಂಭಾವನೆಯನ್ನು ದಿನಾಂಕ: 01.06.2025 ಜಾರಿಗೆ ಬರುವಂತೆ ತಲಾ ರೂ.1000/- (ಒಂದು ಸಾವಿರ ರೂಪಾಯಿಗಳು ಮಾತ್ರ) ಗಳಷ್ಟು ಹೆಚ್ಚಿಸಿ ಪಾವತಿಸಲು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರಿಗೆ ಅನುಮತಿ ನೀಡಿ ಆದೇಶಿಸಿದೆ.

Comments are closed.