BBK-12: ಬಿಗ್ ಬಾಸ್ ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್ ? ಸೂಟ್ಕೇಸ್ ಹಿಡಿದು ಹೊರ ನಡೆದ ಅಶ್ವಿನಿ ಗೌಡ!!

BBK-12 : ಬಿಗ್ ಬಾಸ್ ಕನ್ನಡ ಸೀಸನ್ 12 ನಲ್ಲಿ ಅಚ್ಚರಿಯ ಬೆಳವಣಿಗೆ ಒಂದು ನಡೆದಿದ್ದು ಮನೆಯಲ್ಲಿ ಸದಾ ಹೈಲೈಟ್ ಆಗುತ್ತಿದ್ದ ಅಶ್ವಿನಿ ಗೌಡ ಅವರು ಮಿಡ್ ವೀಕ್ ಎಲಿಮಿನೇಟ್ ಆಗಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿದೆ.

ಹೌದು, ಬಿಗ್ ಬಾಸ್ ಮನೆಯಲ್ಲಿ ನಿನ್ನಯ ಸಂಚಿಕೆಯಲ್ಲಿ ಮನೆಯವರಿಗೆ ಮಸಿ ಬೆಳೆಯುವ ಟಾಸ್ಕ್ ನೀಡಲಾಗಿತ್ತು. ಇದಾದ ಬಳಿಕ ಸೂಟ್‌ಕೇಸ್ ಜೊತೆ ಗಾರ್ಡನ್ ಏರಿಯಾಗೆ ಬರುವಂತೆ ಬಿಗ್‌ಬಾಸ್ ಸೂಚಿಸುತ್ತಾರೆ. ಎಲ್ಲಾ ಸ್ಪರ್ಧಿಗಳು ಬಟ್ಟೆಗಳನ್ನು ಪ್ಯಾಕ್ ಮಾಡಿಕೊಂಡು ಗಾರ್ಡನ್ ಏರಿಯಾಗೆ ಬರುತ್ತಾರೆ. ನಂತರ ಅಶ್ವಿನಿ ಅವರ ಹೆಸರನ್ನು ಬಿಗ್ ಬಾಸ್ ಸೂಚಿಸುತ್ತಿದ್ದಾರೆ. ಅಶ್ವಿನಿ ಅವರ ಹೆಸರು ಹೇಳುತ್ತಿದ್ದಂತೆ ಬಿಗ್ ಬಾಸ್ ಮುಖ್ಯದ್ವಾರ ತೆರೆದುಕೊಳ್ಳುತ್ತದೆ.
ಬಳಿಕ ಅನಿರೀಕ್ಷಿತವಾಗಿ ಅಶ್ವಿನಿ ಗೌಡ ಸೂಟ್‌ಕೇಸ್ ಹಿಡಿದುಕೊಂಡು ಮನೆಯಿಂದ ಹೊರಬಂದಿದ್ದಾರೆ. ಇದು ನಿಜವಾದ ಎಲಿಮಿನೇಷನ್ ಅಯ್ತಾ, ಅಥವಾ ಸೀಕ್ರೆಟ್ ರೂಮ್‌ಗೆ ಕಳುಹಿಸಿದ ಟ್ವಿಸ್ಟ್ ಅಯ್ತಾ?ಎಂಬುದೇ ವೀಕ್ಷಕರಲ್ಲಿ ಇರೋ ಕುತೂಹಲ. ಇನ್ನು ರಕ್ಷಿತಾ ಅವರನ್ನು ಮೊದಲ ವಾರ ಒಂದು ರೂಮ್‌ನಲ್ಲಿ ಇರಿಸಲಾಗಿತ್ತು. ಅದೇ ರೀತಿ ಅಶ್ವಿನಿ ಗೌಡ ಅವರನ್ನೂ ಮಾಡಿರಬಹುದು ಎಂದು ವೀಕ್ಷಕರು ಊಹಿಸುತ್ತಿದ್ದಾರೆ.
Comments are closed.