

Bank locker: ಬ್ಯಾಂಕ್ ಲಾಕರ್‌ನಲ್ಲಿ ಬಂಗಾರ ಇಡುವ ಕುರಿತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಕೆಲವು ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿದೆ.
ಮನೆಯಲ್ಲಿರುವ ಬಂಗಾರದ ಮಿತಿ ಹೀಗಿದೆ.
ವಿವಾಹಿತ ಮಹಿಳೆ: ಗರಿಷ್ಠ 500 ಗ್ರಾಂ
ಅವಿವಾಹಿತ ಮಹಿಳೆ: ಗರಿಷ್ಠ 250 ಗ್ರಾಂ
ಪುರುಷರು: ಕೇವಲ 100 ಗ್ರಾಂ
ಅಂದರೆ ಒಟ್ಟು ಪತಿಯು ಮತ್ತು ಪತ್ನಿಯು ಸೇರಿ 600 ಗ್ರಾಂ ವರೆಗೆ ಬಂಗಾರವನ್ನು ಕಾನೂನುಬದ್ಧವಾಗಿ ಹೊಂದಿರಬಹುದು.
ಈ ನಿಯಮಗಳು ತೆರಿಗೆ ತಪ್ಪಿಸುವ ಪ್ರಯತ್ನಗಳು ಹಾಗೂ ಅಕ್ರಮ ಬಂಗಾರ ಸಂಗ್ರಹವನ್ನು ತಡೆಗಟ್ಟುವ ಉದ್ದೇಶದಿಂದ ಜಾರಿಯಲ್ಲಿವೆ.
ಇನ್ನು ಬ್ಯಾಂಕ್ ಲಾಕರ್‌ನಲ್ಲಿ (Bank locker) ಎಷ್ಟು ಬಂಗಾರ ಇಡಬಹುದು?
RBI ಯಾವುದೇ ಮಿತಿಯನ್ನು ಬ್ಯಾಂಕ್ ಲಾಕರ್‌ನಲ್ಲಿರುವ ಬಂಗಾರಕ್ಕೆ ನಿಗದಿಪಡಿಸಿಲ್ಲ.
ಅಂದರೆ ಗ್ರಾಹಕರು ತಮ್ಮ ಅಗತ್ಯಕ್ಕೆ ತಕ್ಕಂತೆ ಎಷ್ಟು ಬೇಕಾದರೂ ಬಂಗಾರ ಅಥವಾ ಅಮೂಲ್ಯ ವಸ್ತುಗಳನ್ನು ಲಾಕರ್‌ನಲ್ಲಿ ಇಟ್ಟುಕೊಳ್ಳಬಹುದು.
ಆದರೆ ಬ್ಯಾಂಕ್‌ಗಳು ಅಗತ್ಯವಿದ್ದಲ್ಲಿ ಆ ಬಂಗಾರ ಕಾನೂನುಬದ್ಧವಾಗಿ ಖರೀದಿಸಲಾಗಿದೆ ಎಂಬುದನ್ನು ಪರಿಶೀಲಿಸಬಹುದು.
ಅದಕ್ಕಾಗಿ ಖರೀದಿ ಬಿಲ್‌ಗಳು, ರಸೀದೆಗಳು ಅಥವಾ ಕಾನೂನುಬದ್ಧ ದಾಖಲೆಗಳು ಇರಬೇಕು.
ಬ್ಯಾಂಕ್‌ಗಳು ಈ ಸೇವೆಗಾಗಿ ವಾರ್ಷಿಕ ಅಥವಾ ಮಾಸಿಕ ಕಡಿಮೆ ಪ್ರಮಾಣದ ಶುಲ್ಕ ವಸೂಲಿ ಮಾಡುತ್ತವೆ.
ಆದರೆ ಲಾಕರ್‌ನೊಳಗಿನ ವಸ್ತುಗಳ ಕುರಿತು ಬ್ಯಾಂಕ್ ಯಾವುದೇ ಹೊಣೆ ಹೊತ್ತಿರೋದಿಲ್ಲ. ಅಂದರೆ ಲಾಕರ್‌ನಲ್ಲಿ ಏನಿದೆ ಎಂಬುದನ್ನು ಬ್ಯಾಂಕ್ ನೋಡಲು ಹಕ್ಕಿಲ್ಲ.
ಗ್ರಾಹಕರು ಗಮನಿಸಬೇಕಾದ ಕೆಲವು ಮುಖ್ಯ ಅಂಶಗಳು:
ಲಾಕರ್ ತೆರೆಯುವಾಗ ಖಾತೆದಾರರ ಗುರುತಿನ ದಾಖಲೆ ಮತ್ತು ಪ್ಯಾನ್ ಕಾರ್ಡ್ ಅಗತ್ಯ.
ಲಾಕರ್‌ನಲ್ಲಿ ಇಡುವ ವಸ್ತುಗಳ ಕಾನೂನುಬದ್ಧ ದಾಖಲೆಗಳು ಇರಬೇಕು.
ಲಾಕರ್ ಒಪ್ಪಂದವನ್ನು ಪ್ರತಿವರ್ಷ ನವೀಕರಿಸಬೇಕು.
ನಾಮಿನಿ ವಿವರಗಳನ್ನು ಸರಿಯಾಗಿ ನವೀಕರಿಸದಿದ್ದರೆ ಮುಂದಿನ ವೇಳೆ ತೊಂದರೆ ಎದುರಿಸಬಹುದು.
ಲಾಕರ್ ಶುಲ್ಕವನ್ನು ಸಮಯಕ್ಕೆ ಪಾವತಿಸದಿದ್ದರೆ ಬ್ಯಾಂಕ್ ಲಾಕರ್ ಅನ್ನು ಮುಚ್ಚುವ ಅಥವಾ ತೆರೆಯುವ ಅಧಿಕಾರ ಹೊಂದಿದೆ.
ಮನೆಯಲ್ಲಿನ ಬಂಗಾರದ ಮೇಲೆ ಮಿತಿಯಿದ್ದರೂ, ಬ್ಯಾಂಕ್ ಲಾಕರ್‌ನಲ್ಲಿ ಬಂಗಾರ ಇಡುವುದಕ್ಕೆ ಯಾವುದೇ ಮಿತಿ ಇಲ್ಲ.
ಆದರೆ ಆ ಬಂಗಾರ ಕಾನೂನುಬದ್ಧವಾಗಿ ಖರೀದಿಸಿದ ಪುರಾವೆಗಳೊಂದಿಗೆ ಇರಬೇಕು.
ಲಾಕರ್ ಸೇವೆಯು ನಿಮ್ಮ ಬಂಗಾರ ಮತ್ತು ಅಮೂಲ್ಯ ವಸ್ತುಗಳಿಗೆ ಅತ್ಯಂತ ಸುರಕ್ಷಿತ ಆಯ್ಕೆ. ಆದ್ರೆ ನಾಮಿನಿ ವಿವರ ಮತ್ತು ದಾಖಲೆಗಳನ್ನು ಸರಿಯಾಗಿ ಇರಿಸಿಕೊಳ್ಳಿ.












