Child Trafficking: ಮಕ್ಕಳ ಮಾರಾಟ-ಕೊಳ್ಳುವಿಕೆ ಮಾಡಿದ್ರೆ ಕಠಿಣ ಶಿಕ್ಷೆ ಜೊತೆಗೆ ದುಬಾರಿ ದಂಡ


Child Trafficking: ಮಕ್ಕಳನ್ನು ಮಾರಾಟ ಮಾಡುವುದು ಹಾಗೂ ಕೊಳ್ಳುವುದನ್ನ (Child Trafficking) ದೊಡ್ಡ ದಂಧೆಯಾಗಿ ಮಾಡಿಕೊಂಡಿದ್ದಾರೆ. ಆದರೆ ಈ ವಿಚಾರದಲ್ಲಿ ಕಾನೂನು ತುಂಬಾ ಕಠಿಣವಾಗಿದ್ದು, ಈ ರೀತಿ ಕೆಲಸಗಳನ್ನ ಮಾಡಿದರೆ ತೀವ್ರ ಶಿಕ್ಷೆಯನ್ನ ವಿಧಿಸಲಾಗುತ್ತದೆ.7 ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಬಾಲನ್ಯಾಯ ಕಾಯ್ದೆ -2015 ಸೆಕ್ಷನ್ 80 ಮತ್ತು 81ರ ಅನ್ವಯ ಯಾರಾದರೂ ಮಕ್ಕಳನ್ನ ಮಾರಾಟ ಮಾಡಿದರೆ ಹಾಗೂ ಕೊಂಡುಕೊಂಡರೆ ಅವರಿಗೆ ಸುಮಾರು 5 ವರ್ಷಗಳವರೆಗೂ ಸೆರೆಮನೆ ವಾಸ ಶಿಕ್ಷೆ ಹಾಗೂ 1 ಲಕ್ಷದವರೆಗೆ ದಂಡ ಹಾಕಲಾಗುತ್ತದೆ. ಹಾಗೆಯೇ, ಈ ಅಪರಾಧದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು ಶಾಮೀಲಾಗಿರುವುದು ಸಾಬೀತಾದರೆ ಅವರಿಗೆ ಸಹ 3 ವರ್ಷದಿಂದ 7 ವರ್ಷದ ವರೆಗೆ ಜೈಲು ಶಿಕ್ಷೆಯನ್ನ ವಿಧಿಸಲಾಗುತ್ತದೆ.
ಇನ್ನು ಸಾರ್ವಜನಿಕ ಜಾಗಗಳಲ್ಲಿ ಅನಾಥ ಮಕ್ಕಳು, ಯಾರಾದರೂ ಬಿಟ್ಟು ಹೋಗಿರುವವ ಮಕ್ಕಳು ಕಾಣಿಸಿಕೊಂಡರೆ, ಆ ಮಕ್ಕಳ ಮಾಹಿತಿಯನ್ನ ಆಯಾ ಜಿಲ್ಲೆಗಳಲ್ಲಿ ಇರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕವನ್ನ ಸಂಪರ್ಕ ಮಾಡಿ, ಕೊಡಬೇಕು. ಈ ರೀತಿ ಮಾಹಿತಿ ಕೊಟ್ಟರೆ, ಮಾಹಿತಿ ನೀಡಿದವರ ಹೆಸರನ್ನ ತುಂಬಾ ಗೌಪ್ಯವಾಗಿ ಇಲಾಖೆ ಕಾಪಾಡಲಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.