Chitradurga : ಮುಂದಿನ DCM ಜಮೀರ್ ಎಂದು ಕೂಗಿದ ಅಭಿಮಾನಿ – ತಬ್ಬಿ ಮುತ್ತಿಟ್ಟ ಸಚಿವ!!

Chitradurga : ರಾಜ್ಯ ರಾಜಕೀಯದಲ್ಲಿ ನವೆಂಬರ್ ಕ್ರಾಂತಿಯ ಬಗ್ಗೆ ಸಾಕಷ್ಟು ಚರ್ಚೆಗಳ ನಡುವೆ ಸಿದ್ದರಾಮಯ್ಯ (Siddaramaiah) ಹಾಗೂ ಡಿಕೆ ಶಿವಕುಮಾರ್ (DK Shivakumar) ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಈ ನಡುವೆ ಅಭಿಮಾನಿ ಒಬ್ಬ ಜಮೀರ್ ಅಹಮದ್ ರವರು ಮುಂದಿನ ಡಿಸಿಎಂ ಆಗುತ್ತಾರೆ ಎಂದು ಘೋಷಣೆ ಕೂಗಿ ಅವರಿಂದ ಒಂದು ಕಿಸ್ ಪಡೆದಿದ್ದಾರೆ.

ಹೌದು, ಚಿತ್ರದುರ್ಗದ ಸಂತೇಪೇಟೆಯ ಬಳಿಯಲ್ಲಿರುವ ಸರ್ಕಲ್ ನಲ್ಲಿ ಸಚಿವರ ಅಭಿಮಾನಿಗಳು ಜಮೀರ್ ಅಹ್ಮದ್ ಖಾನ್ ಮುಂದಿನ ಡಿಸಿಎಂ ಎಂದು ಘೋಷಣೆ ಕೂಗಿದ್ದಾರೆ. ಬೈಕ್ ರ್ಯಾಲಿ ಮೂಲಕ ಜಮೀರ್ ಸ್ವಾಗತಿಸುವ ವೇಳೆ ಬೆಂಬಲಿಗರು, ಜಮೀರ್ ಮುಂದಿನ ಡಿಸಿಎಂ ಪ್ಲೇ ಕಾರ್ಡ್‌ಗಳನ್ನು ಪ್ರದರ್ಶಿಸಿದ್ದಾರೆ. ಇದೇ ಖುಷಿಯಲ್ಲಿ ಜಮೀರ್ ಅಭಿಮಾನಿಯೊಬ್ಬರಿಗೆ ಮುತ್ತುಕೊಟ್ಟಿದ್ದಾರೆ. ಈ ವೀಡಿಯೋ ಇದೀಗ ವೈರಲ್ ಆಗುತ್ತಿದೆ.
ಅಂದಹಾಗೆ ಜಮೀರ್ ಅವರು ಡಿಸಿಎಂ ಆದರೂ ಅಚ್ಚರಿ ಪಡಬೇಕಿಲ್ಲ ಎಂದೂ ಹೇಳಲಾಗುತ್ತಿದೆ. ಒಂದು ವೇಳೆ, ಈಗ ಡಿಸಿಎಂ ಆಗಿರುವ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾದರೆ ಅವರಿಂದ ತೆರವಾಗುವ ಡಿಸಿಎಂ ಹುದ್ದೆಗೆ ಸಿದ್ದರಾಮಯ್ಯನವರ ಬಣದ ಯಾರನ್ನಾದರೂ ಮಾಡಲೇಬೇಕಾಗುತ್ತದೆ. ಅದರಲ್ಲೂ ಮುಂದಿನ ಚುನಾವಣಾ ದೃಷ್ಟಿಯಿಂದ ಅಲ್ಪಸಂಖ್ಯಾತರಿಗೆ ಕೊಟ್ಟರೆ ಅಚ್ಚರಿಯೇನಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
Comments are closed.