Film Chamber: ಫಿಲ್ಮ್ ಚೇಂಬರ್ ಎಲೆಕ್ಷನ್‌ಗೆ ದಿನಾಂಕ ಫಿಕ್ಸ್

Share the Article

 

Film Chamber: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (Karnataka Film Chamber of Commerce) ಚುನಾವಣೆಗೆ (Election) ಡೇಟ್ ಫಿಕ್ಸ್ ಮಾಡಲಾಗಿದೆ ಅನ್ನೋ ಮಾಹಿತಿ ಹೊರಬಿದ್ದಿದೆ. ಪ್ರತಿವರ್ಷದಂತೆ ಈ ವರ್ಷದ ಚುನಾವಣೆಗೆ ದಿನಾಂಕ ನಿಗದಿ ಮಾಡಲಾಗಿದೆಯಂತೆ. ಅ.30 ರಂದು ನಡೆದ ಕಾರ್ಯಕಾರ್ಯಿಣಿ ಸಭೆಯಲ್ಲಿ ಚುನಾವಣೆ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಚುನಾವಣೆಯನ್ನ ಡಿಸೆಂಬರ್‌ನಲ್ಲಿ ನಡೆಸಲು ತೀರ್ಮಾನ ಮಾಡಲಾಗಿ.

ಅಧ್ಯಕ್ಷಸ್ಥಾನ, ಉಪಾಧ್ಯಕ್ಷ ಸ್ಥಾನ, ವಿತರಕ ವಲಯ, ಪ್ರದರ್ಶಕರ ವಲಯ, ಕಾರ್ಯದರ್ಶಿ ಹಾಗೂ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಈ ಬಾರಿ ನಿರ್ಮಾಪಕ ಸಂಘದಿಂದ ಅಧ್ಯಕ್ಷರಾಗಲು ಅವಕಾಶವಿರುವ ಕಾರಣ ಸಾರಾ ಗೋವಿಂದು ಸೇರಿದಂತೆ ಹಲವರು ಸ್ಪರ್ಧೆಗಳಿಯಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಕಳೆದ ವರ್ಷ ಡಿ.14ರಂದು ಚುನಾವಣೆ ನಡೆದಿತ್ತು. ಪ್ರದರ್ಶಕ ವಲಯದಿಂದ ಅಧ್ಯಕ್ಷರಾಗಿ ಎಂ.ನರಸಿಂಹಲು ಆಯ್ಕೆ ಆಗಿದ್ದರು. ಈ ವರ್ಷ ಡಿಸೆಂಬರ್ 20ರಂದು ಚುನಾವಣೆಗೆ ದಿನಾಂಕ ನಿಗಧಿ ಮಾಡಲಾಗಿದೆಯಂತೆ. ಈ ಬಗ್ಗೆ ಕಾರ್ಯಕಾರ್ಯಿಣಿ ಸಭೆಯಲ್ಲಿ ಮಾತುಕತೆಯಾಗಿದೆ ಎನ್ನಲಾಗ್ತಿದೆ.

Comments are closed.