Darshan : ನಟ ದರ್ಶನ್ ಗೆ ಪವಿತ್ರ ಗೌಡ ಜೊತೆ ಆಗಿದ್ಯಾ ಮದುವೆ? 10 ವರ್ಷ ಹಿಂದಿನ ಫೋಟೋಗಳು ವೈರಲ್

Share the Article

Darshan : ರೇಣುಕಾ ಸ್ವಾಮಿ ಕೊಲೆ ಪ್ರಕರಣದಡಿ ಆರೋಪಿಯಾಗಿ ನಟ ದರ್ಶನ್ ಅವರು ಇದೀಗ ಜೈಲುವಾಸ ಅನುಭವಿಸುತ್ತಿದ್ದಾರೆ. ದರ್ಶನ್ ಅವರು ಈ ಪ್ರಕರಣದಲ್ಲಿ ಭಾಗಿಯಾಗಲು ಪ್ರಮುಖ ಕಾರಣ ಅವರ ಪ್ರೇಯಸಿ ಪವಿತ್ರ ಗೌಡ ಎನ್ನಲಾಗುತ್ತಿದೆ. ಇದುವರೆಗೂ ಪವಿತ್ರ ಅವರು ದರ್ಶನ್ ಅವರ ಸ್ನೇಹಿತೆ, ಪ್ರಿಯತಮೆ ಎಂದೆಲ್ಲ ವಿಶ್ಲೇಷಿಸಲಾಗುತ್ತಿತ್ತೇ ವಿನಹ ಅವರಿಬ್ಬರು ಮದುವೆಯಾಗಿದ್ದಾರೆ ಎಂದು ಎಲ್ಲಿಯೂ ಹೇಳಲಾಗಿರಲಿಲ್ಲ. ಮಾದರಿ ಇದೀಗ 10 ವರ್ಷದ ಹಳೆಯ ಫೋಟೋಗಳು ವೈರಲಾಗುತ್ತಿದ್ದು ದರ್ಶನ್ ಮತ್ತು ಪವಿತ್ರ ಗೌಡ ಮದುವೆಯಾಗಿದ್ದಾರೆ.

ದರ್ಶನ್ ಮತ್ತು ಪವಿತ್ರ ಗೌಡ ಮದುವೆ ಆಗಿದ್ದಾರಾ ಎನ್ನುವ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಒಂದು ಬಾರಿ ವೈರಲ್ ಆಗಿದೆ. ಪವಿತ್ರ ಕುತ್ತಿಗೆಯಲ್ಲಿ ಅರಿಶಿನದ ದಾರ ಇರುವ ತಾಳಿ ಹಾಕಿಕೊಂಡಿದ್ದು, ಮದುವೆ ಡ್ರೆಸ್ ನಲ್ಲಿ ದರ್ಶನ್ ಮತ್ತು ಪವಿತ್ರ ಅದರಲ್ಲಿ ಇರುವುದನ್ನು ಕಾಣಬಹುದು.

ಅಲ್ಲದೆ ದರ್ಶನಗೆ ಪವಿತ್ರ ಊಟ ಮಾಡಿಸುತ್ತಿರುವ ಫೋಟೋ ಕೂಡ ವೈರಲ್ ಆಗಿದೆ. ಹಾಗಾಗಿ ಈ ಒಂದು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದ್ದು ದರ್ಶನ್ ಮತ್ತು ಪವಿತ್ರ ಮದುವೆಯಾಗಿದ್ದರು ಎನ್ನುವ ಅನುಮಾನ ಹುಟ್ಟಿಕೊಂಡಿದೆ.

Comments are closed.