Nelamangala: ಮುಸ್ಲಿಂ ಮದುವೆಯಲ್ಲಿ ತಿಲಕ ಇಟ್ಟು ಊಟಕ್ಕೆ ಕುಳಿತಿದ್ದ ಹಿಂದೂ ವ್ಯಕ್ತಿ – ಊಟದ ಪಂಕ್ತಿಯಿಂದ ಎಬ್ಬಿಸಿ ಕಳಿಸಿದ ಕುಟುಂಬ


Nelamangala: ಮದುವೆಗೆ ಆಮಂತ್ರಣವಿದ್ದ ಕಾರಣ ಮುಸ್ಲಿಂ ಮದುವೆಗೆ ತಿಲಕ ಇಟ್ಟುಕೊಂಡು ಹಿಂದೂ ವ್ಯಕ್ತಿಯೊಬ್ಬರು ಬಂದಾಗ ತಿಲಕ ಇಟ್ಟುಕೊಂಡು ಬದಿದ್ದಾನೆ ಎನ್ನುವ ಕಾರಣಕ್ಕೆ ಹಿಂದೂಗಳಿಗೆ ಊಟ ಹಾಕಲ್ಲ ಎಂದು ಹೋಗಿ ಎಂದು ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ ಇದೀಗ ವರದಿಯಾಗಿದೆ.
ನೆಲಮಂಗಲದ ಇಸ್ಲಾಂಪುರದ ನಿವಾಸಿ ಸಮಿವುಲ್ಲಾ ಕುಟುಂಬದ ಮದುವೆ ಕಾರ್ಯಕ್ರಮಕ್ಕೆ ರಾಜು ಎಂಬುವರನ್ನು ಆಹ್ವಾನಿಸಲಾಗಿತ್ತು. ನೆಲಮಂಗದಲ ಖಾಸಗಿ ಕಲ್ಯಾಣ ಮಂಟಪದಲ್ಲಿ ಮುಜಾಮಿಲ್ ಪಾಷ ಹಾಗೂ ಸಾನಿಯಾ ಜೋಡಿ ಮದುವೆ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಆಹ್ವಾನ ನೀಡಿದ್ದ ಕಾರಣ ಕ್ಷೌರಿಕ ಕೆಲಸವನ್ನು ಬೇಗನೆ ಮುಗಿಸಿ ಶಾಪ್ ಕ್ಲೋಸ್ ಮಾಡಿದ ರಾಜು ಮದುವೆಗೆ ತೆರಳಿದ್ದರು. ಮುಸ್ಲಿಮ್ ಕುಟುಂಬದ ಮದುವೆಗೆ ತೆರಳಿದಾ ರಾಜು, ಎಲ್ಲಾ ಮದುವೆಯಂದ ನವ ಜೋಡಿಗಳಿಗೆ ಶುಭ ಕೋರಿದ್ದರು. ಬಳಿಕ ಎಲ್ಲರೊಂದಿಗೆ ಊಟಕ್ಕೆ ಕುಳಿತಿದ್ದರು. ಈ ವೇಳೆ ಕುಟುಂಬಸ್ಥರು ನೋಡಿ ನಿಮ್ಮನ್ನು ಇಲ್ಲಿ ಯಾರು ಕರೆದಿದ್ದು ಹಿಂದೂಗಳಿಗೆ ನಾವು ಊಟ ಹಾಕುವುದಿಲ್ಲ ಇದರಿಂದ ಎದ್ದು ಹೋಗಿ ಅಂತ ರಾಜುವನ್ನು ಕಳುಹಿಸಿದ್ದಾರೆ.
ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಇನ್ನು ವಿಡಿಯೋ ಒಂದರಲ್ಲಿ ವ್ಯಕ್ತಿಯೊಬ್ಬರು ಮಾತನಾಡಿರುವ ವಿಡಿಯೋ ವೈರಲ್ ಆಗಿದ್ದು ಬರ್ರಿ ಅವರು ಹಿಂದೂ ಜನಗಳಿಗೆ ಊಟ ಹಾಕಲ್ವಂತೆ ಬರ್ರಿ ಇನ್ವೈಟ್ ಮಾಡಬಾರದು ಸಾಹೇಬ್ರೆ ಹಂಗೆಲ್ಲ ಮಾಡಬಾರದು ಊಟಕ್ಕೆ ಕುಳಿತಾಗ ಎಬ್ಬಿಸಬಾರದು ನೀವು ಮಾಡುತ್ತಿರುವುದು ಅಧರ್ಮ ತಪ್ಪು ಯಾರು ಬಂದಿರುತ್ತಾರೆ. ಹಣೆಗೆ ಕುಂಕುಮ ಇಟ್ಟುಕೊಂಡು ಬಂದಿದ್ದಕ್ಕೆ ಊಟ ಹಾಕಲ್ವಂತೆ ಇವರು ಎಂದು ವ್ಯಕ್ತಿಯೊಬ್ಬರು ಆಕ್ರೋಶದಲ್ಲಿ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
Comments are closed.