Home Crime Actor Darshan: ಜೈಲಿನಲ್ಲಿರೋ ನಟ ದರ್ಶನ್ ಎಷ್ಟು ಕೆಜಿ ತೂಕ ಕಳೆದುಕೊಂಡಿದ್ದಾರೆ?

Actor Darshan: ಜೈಲಿನಲ್ಲಿರೋ ನಟ ದರ್ಶನ್ ಎಷ್ಟು ಕೆಜಿ ತೂಕ ಕಳೆದುಕೊಂಡಿದ್ದಾರೆ?

Hindu neighbor gifts plot of land

Hindu neighbour gifts land to Muslim journalist

Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ರದ್ದಾದ ಬಳಿಕ ಆಗಸ್ಟ್ 14ರಂದು ಮತ್ತೆ ಜೈಲು ಸೇರಿರುವ ನಟ ದರ್ಶನ್ ಕಳೆದ ಎರಡೂವರೆ ತಿಂಗಳಿನಲ್ಲಿ 13 ಕೆಜಿ ದೇಹದ ತೂಕ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ದರ್ಶನ್ ಅವರು ಸದ್ಯ ಕ್ವಾರಂಟೈನ್‌ ಸೆಲ್‌ನಲ್ಲಿದ್ದು, ದಿನಕ್ಕೆ ಒಮ್ಮೆ ಮಾತ್ರ ಊಟ ಮಾಡುತ್ತಿದ್ದಾರೆ ಎಂದು ವರದಿ ತಿಳಿಸಿದೆ.

 

ದರ್ಶನ್ ಇರುವ ಸೆಲ್‌ನಲ್ಲಿ ಯಾವುದೇ ಟಿವಿ ಇಲ್ಲ, ಸೆಲ್‌ಗೆ ಭದ್ರತಾ ದೃಷ್ಟಿಯಿಂದ ಎರಡು ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ ಎಂದು ವರದಿ ಹೇಳಿದೆ. ಸದ್ಯ ಅವರ ಜೊತೆ ಇದೇ ಪ್ರಕರಣದ  ಸಹ ಆರೋಪಿಗಳಾದ ಅನು, ಜಗದೀಶ್, ಪ್ರದೋಶ್, ನಾಗರಾಜ್ ಹಾಗೂ ಲಕ್ಷ್ಮಣ್ ಇದ್ದಾರೆ. ದರ್ಶನ್‌ ಕೆಲ ಕಾಲ ಜೈಲಿನಿಂದ ಹೊರಗೆ ಬಂದಾಗ ಅವರ ದೇಹಕ್ಕೆ ಬೇಕಾದ ರೀತಿಯಲ್ಲಿ ಸರಿಯಾದ  ಡಯಟ್ ಫಾಲೋ ಮಾಡುತ್ತಿದ್ರು. ಆದರೆ, ಇದೀಗ ಜೈಲಿನಲ್ಲಿ ವ್ಯಾಯಾಮ ಮಾಡಲುಸರಿಯಾದ ಯಾವ ವ್ಯವಸ್ಥೆಯೂ ಅವರಿಗೆ ಲಭ್ಯವಿಲ್ಲ. ಆದ್ದರಿಂದ ಅವರು ದಿನಕ್ಕೆ ಒಂದು ಹೊತ್ತು ಮಾತ್ರ ಊಟ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದರಿಂದ ಅವರ ದೇಹದ ತೂಕದಲ್ಲಿ ಇಳಿಕೆ ಕಂಡಿದೆ.

ದರ್ಶನ್ ಮತ್ತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಮರಳಿದ ನಂತರ, ಅವರು ಮಾಡಿದ್ದ ಹೆಚ್ಚುವರಿ ಹಾಸಿಗೆ ಮತ್ತು ದಿಂಬಿನಂತಹ ಹೆಚ್ಚುವರಿ ಸೌಲಭ್ಯಗಳಿಗಾಗಿ ಅವರ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು. ಆದರೆ ಅವರ ಕುಟುಂಬದಿಂದ ಮಾಸಿಕವಾಗಿ ಹೊಸ ಬಟ್ಟೆ ಮತ್ತು ಕಂಬಳಿಗಳನ್ನು ಪಡೆಯಲು ಅವಕಾಶ ಮಾಡಿಕೊಟ್ಟಿದೆ. ಅಕ್ಟೋಬರ್ 31, 2025 ರಂದು ಅವರ ಮತ್ತು ಇತರ ಸಹ-ಆರೋಪಿಗಳ ವಿರುದ್ಧ ಆರೋಪ ಪಟ್ಟಿಗಳನ್ನು ಸಲ್ಲಿಸಲಾಗುವುದು ಎಂದು ನ್ಯಾಯಾಲಯವು ದೃಢಪಡಿಸಿದೆ.