Pension : ಪಿಂಚಣಿದಾರರಿಗೆ ಬಂಪರ್ ಲಾಟ್ರಿ- ಮಾಸಿಕ ಪಿಂಚಣಿ 1 ಸಾವಿರದಿಂದ ₹7,500ಕ್ಕೆ ಏರಿಕೆ..!

Share the Article

Pension : ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ತನ್ನ ನೌಕರರ ಪಿಂಚಣಿ ಯೋಜನೆ (ಇಪಿಎಸ್) ಅಡಿಯಲ್ಲಿ ಕನಿಷ್ಠ ಮಾಸಿಕ ಪಿಂಚಣಿ ಮೊತ್ತವನ್ನು ₹1,000ರಿಂದ ₹7,500ಕ್ಕೆ ಹೆಚ್ಚಿಸುವ ಕುರಿತು ಚಿಂತನೆ ನಡೆಸುತ್ತಿದೆ.

ಹೌದು, ದಿನೇ ದಿನೇ ಹೆಚ್ಚುತ್ತಿರುವ ಹಣದುಬ್ಬರದಿಂದ ತತ್ತರಿಸಿರುವ ಪಿಂಚಣಿದಾರರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಪಿಂಚಣಿ ದಾರರ ಕನಿಷ್ಠ ಮಾಸಿಕ ಪಿಂಚಣಿಯ ಹಣವನ್ನು ಹೆಚ್ಚಿಸಲು ನಿರ್ಧಾರ ಮಾಡಿದೆ. ಹೀಗಾಗಿ ಪಿಂಚಣಿದಾರರ ಬೇಡಿಕೆ ಮತ್ತು ಹಣದುಬ್ಬರದ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳುವ ಬಗ್ಗೆ ಸಮಾಲೋಚನೆ ನಡೆದಿದೆ.

ಪರಿಷ್ಕೃತ ಪಿಂಚಣಿ ಮೊತ್ತದ ಪ್ರಸ್ತಾವಿತ ಪಟ್ಟಿ
ಲಭ್ಯವಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ನೌಕರರು ತಮ್ಮ ಸೇವಾವಧಿ ಮತ್ತು ಕೊಡುಗೆ ಮೊತ್ತದ ಆಧಾರದ ಮೇಲೆ ಹೊಸ ಪಿಂಚಣಿಯನ್ನು ಪಡೆಯುವ ಸಾಧ್ಯತೆ ಇದೆ.
₹1,800 20 ವರ್ಷ ₹7,500
₹3,600 25 ವರ್ಷ ₹10,500
₹4,500 30 ವರ್ಷ ₹12,500
₹5,000 ಮತ್ತು ಹೆಚ್ಚು 35 ವರ್ಷ + ₹15,000

ಯಾರಿಗೆ ಲಾಭ?
ಸರ್ಕಾರದ ನಿಯಮಾನುಸಾರ, ಪಿಂಚಣಿ ಮಿತಿಯ ಸೇವಾವಧಿಯನ್ನು ಪೂರ್ಣಗೊಳಿಸಿರುವ ಎಲ್ಲಾ ಇಪಿಎಸ್ ಸದಸ್ಯರು (EPS Members) ಈ ಪರಿಷ್ಕೃತ ಪಿಂಚಣಿಯ ಪ್ರಯೋಜನ ಪಡೆಯಲು ಅರ್ಹರಾಗಿದ್ದಾರೆ.

Comments are closed.