TRAI: ಅನ್ನೋನ್ ನಂಬರ್ ಫೋನ್ ಬಂದ್ರೆ ಡೋಂಟ್ ವರಿ – ಮೊಬೈಲ್ ಡಿಸ್‌ಪ್ಲೇಯಲ್ಲಿ ಹೆಸರು ಬರುವಂತೆ ಮಾಡಲು ಸರ್ಕಾರ ಹೊಸ ಪ್ಲಾನ್

Share the Article

TRAI: ಅಪರಿಚಿತ ನಂಬರ್ ಗಳಿಂದ ಕರೆ ಮಾಡಿ ವಂಚಿಸುವರ ಜಾಲ ಮಿತಿಮೀರುತ್ತಿದೆ. ಯಾವುದೋ ಅನ್ನೋನ್ ನಂಬರ್ ಇಂದ ಫೋನ್ ಬಂದಾಗ ಗೊತ್ತಿಲ್ಲದೆ ನಾವು ಅದನ್ನು ರಿಸೀವ್ ಮಾಡಿ ಅದರಿಂದ ಲಕ್ಷ ಹಣವನ್ನು ಕಳೆದುಕೊಳ್ಳುತ್ತಿದ್ದೇವೆ. ಆದರೆ ಇದೀಗ ಈ ಎಲ್ಲಾ ರೀತಿಯ ವಂಚನೆಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ಸರ್ಕಾರವು ಬೈಲ್ ಡಿಸ್‌ಪ್ಲೇ ಮೇಲೆ ಕರೆ ಮಾಡಿರುವವರ (Calling Name Presentation (CNAP) ಗುರುತು ತೋರಿಸುವ ದೂರಸಂಪರ್ಕ ಇಲಾಖೆಯ (DoT) ಪ್ರಸ್ತಾವನೆಯನ್ನು ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (TRAI) ಅನುಮೋದಿಸಿದೆ.

ಹೌದು, ಭಾರತದ ಟೆಲಿಕಾಂ ನಿಯಂತ್ರಕ, ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI), ಇತ್ತೀಚೆಗೆ ದೇಶಾದ್ಯಂತ ಮೊಬೈಲ್ ಫೋನ್‌’ಗಳಲ್ಲಿ ಒಳಬರುವ ಕರೆಗಳನ್ನ ಹೇಗೆ ಪ್ರದರ್ಶಿಸಲಾಗುತ್ತದೆ ಎಂಬುದನ್ನ ಪರಿವರ್ತಿಸುವ ಯೋಜನೆಗಳನ್ನು ಅನಾವರಣಗೊಳಿಸಿದೆ. ಇದರಿಂದ ಯಾರದ್ದಾದರೂ ಕರೆ ಬಂದಾಗ ಯಾರು ಫೋನ್‌ ಮಾಡುತ್ತಿದ್ದಾರೆ ಎಂಬ ನಿಜವಾದ ಹೆಸರನ್ನ ತಿಳಿದುಕೊಳ್ಳಬಹುದಾಗಿದೆ. ಇದೊಂದು ಹೊಸ ವ್ಯವಸ್ಥೆ ಆಗಿದ್ದು, ದೂರಸಂಪರ್ಕ ಇಲಾಖೆಯ (DoT) ಈ ಪ್ರಸ್ತಾವನೆಗೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಅನುಮೋದನೆ ನೀಡಿದೆ. ಕರೆ ಮಾಡುವವರ ಹೆಸರು ಪ್ರಸ್ತುತಿ (CNAP) ಎಂದು ಕರೆಯಲ್ಪಡುವ ಈ ಸೇವೆಯು ಕಾಲ್‌ ಅನ್ನು ಉತ್ತರಿಸುವ ಮೊದಲು ನಂಬರ್‌ ಸೇವ್‌ ಇಲ್ಲದಿದ್ದರೆ, ಯಾರಿಂದ ಕಾಲ್‌ ಬರುತ್ತಿದೆ ಎಂಬುದನ್ನ ತಿಳಿದುಕೊಂಡು, ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ ಎನ್ನಲಾಗಿದೆ.

ಏನಿದು CNAP (Calling Name Presentation)?
CNAP ಒಂದು ಹೊಸ ತಂತ್ರಜ್ಞಾನ ಸೇವೆಯಾಗಿದ್ದು, ಸಿಮ್ ಕಾರ್ಡ್ ಪಡೆಯುವ ವೇಳೆ ಸಲ್ಲಿಸಿದ ಅಧಿಕೃತ ಗುರುತಿನ ಆಧಾರದಲ್ಲಿ ಕಾರ್ಯನಿರ್ವಹಿಸುತ್ತದೆ. ಇದರ ಅರ್ಥ ನಿಮ್ಮ ಸಿಮ್ ನೋಂದಣಿಯ ಸಮಯದಲ್ಲಿ ನೀಡಿದ ಹೆಸರು, ಮುಂದೆ ನೀವು ಯಾರಿಗಾದರೂ ಕರೆ ಮಾಡಿದಾಗ ಅವರ ಡಿಸ್‌ಪ್ಲೇ ಮೇಲೆ ತೋರಿಸಲ್ಪಡುತ್ತದೆ. ಇದಕ್ಕಾಗಿ Truecaller ಸೇರಿದಂತೆ ಇತರೆ ಯಾವುದೇ ಥರ್ಡ್-ಪಾರ್ಟಿ ಅಪ್ಲಿಕೇಶನ್‌ಗಳು ಅಗತ್ಯವಿಲ್ಲ. TRAI ಪ್ರಕಾರ, ಭಾರತದ ಎಲ್ಲಾ ಟೆಲಿಕಾಂ ಚಂದಾದಾರರಿಗೆ CNAP ಸೇವೆಯನ್ನು ಪೂರ್ವನಿಯೋಜಿತವಾಗಿ ಸಕ್ರಿಯಗೊಳಿಸಲಾಗುತ್ತದೆ.

Comments are closed.