Home Entertainment Bigg Boss Mallamma: ಬಿಗ್‌ಬಾಸ್‌ನಿಂದ ಮಲ್ಲಮ್ಮ ಹೊರಕ್ಕೆ: ಸುಳ್ಳು ಸುದ್ದಿಗೆ ಅಧಿಕೃತ ಬ್ರೇಕ್

Bigg Boss Mallamma: ಬಿಗ್‌ಬಾಸ್‌ನಿಂದ ಮಲ್ಲಮ್ಮ ಹೊರಕ್ಕೆ: ಸುಳ್ಳು ಸುದ್ದಿಗೆ ಅಧಿಕೃತ ಬ್ರೇಕ್

Hindu neighbor gifts plot of land

Hindu neighbour gifts land to Muslim journalist

Bigg Boss Mallamma: ಬಿಗ್ ಬಾಸ್ ಮನೆಯಿಂದ ಮಲ್ಲಮ್ಮ ಔಟ್ ಎಂಬ ಸುದ್ದಿ ಎಲ್ಲೆಡೆ ಹಬ್ಬಿದೆ. ಆದ್ರೆ ಮಲ್ಲಮ್ಮ ಬಿಗ್ ಬಾಸ್ ಮನೆಯಿಂದ ಹೊರಗೆ ನಡೆದಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ.

ಬಿಗ್ ಬಾಸ್ 12 (Bigg Boss 12)ರ ಸ್ಪರ್ಧಿ ಮಲ್ಲಮ್ಮ, ವೈಯಕ್ತಿಕ ಕಾರಣದಿಂದ ಮನೆಯಿಂದ ಹೊರಗೆ ಬಂದಿದ್ದಾರೆ ಎನ್ನುವ ಚರ್ಚೆ ಜೋರಾಗಿದೆ. ಆದ್ರೆ ಮಲ್ಲಮ್ಮ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿಲ್ಲ. ತಮ್ಮ ಆಟವನ್ನು ಮುಂದುವರೆಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ಮನೆಯಿಂದ ಮಲ್ಲಮ್ಮ ಔಟ್ ಎನ್ನುವ ವಿಷ್ಯ ಚರ್ಚೆ ಆಗ್ತಿದ್ದಂತೆ ಮಲ್ಲಮ್ಮ ಅವರ ಅಧಿಕೃತ ಇನ್ಸ್ಟಾಖಾತೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಲಾಗಿದೆ. ಮಲ್ಲಮ್ಮ (Mallamma), ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಿಲ್ಲ, ವೋಟ್ ಮಾಡ್ತಿರಿ ಎನ್ನುವ ಸಂದೇಶ ರವಾನೆ ಮಾಡಲಾಗಿದೆ.

ಬಿಗ್ ಬಾಸ್ ಮನೆಯಲ್ಲಿ ಈಗ ಕಾಲೇಜ್ ಟಾಸ್ಕ್ ನಡೀತಿದೆ. ಇದ್ರಲ್ಲಿ ರೆಡ್ ಹೌಸ್ ಮತ್ತು ಬ್ಲೂ ಹೌಸ್ ಅಂತ ಎರಡು ತಂಡಗಳನ್ನು ಮಾಡಲಾಗಿದೆ. ಎದುರಾಳಿಗಿಂತ ನಾನು ಬಿಗ್ ಬಾಸ್ ಮನೆಯಲ್ಲಿರೋಕೆ ಏಕೆ ಅರ್ಹ ಎನ್ನುವ ಕುರಿತು ಚರ್ಚಾ ಸ್ಪರ್ಧೆ ನಡೆದಿದೆ. ಅದ್ರಲ್ಲಿ ಗೆದ್ದವರು ಯಾರು ಎಂಬುದನ್ನು ಬಿಬಿ ಕಾಲೇಜ್ ಪ್ರಿನ್ಸಿಪಾಲರು ಘೋಷನೆ ಮಾಡಿದ್ದಾರೆ. ಮಲ್ಲಮ್ಮ ಹಾಗೂ ಸ್ಪಂದನಾ ಮಧ್ಯೆ ಚರ್ಚಾ ಸ್ಪರ್ಧೆ ನಡೆದಿತ್ತು. ಸ್ಪಂದನಾ, ಸ್ಪರ್ಧೆಯಲ್ಲಿ ಗೆದ್ರು. ಹಾಗಾಗಿ ಮಲ್ಲಮ್ಮ ಈ ಬಾರಿ ನಾಮಿನೇಟ್ ಆಗಿದ್ದಾರೆ.

ಈಗಾಗಲೇ ಟಾಸ್ಕ್ ನಿಯಮದಂತೆ ಮಲ್ಲಮ್ಮ ಕೆಲ್ಸ ಮಾಡ್ತಿರುವ ಬೋಟಿಕ್ ಓನರ್ ಪಲ್ಲವಿ, ಪ್ರಿನ್ಸಿಪಾಲ್ ರಘು ಜೊತೆ ಮಾತನಾಡಿದ್ದಾರೆ. ಮಲ್ಲಮ್ಮ ಚೆನ್ನಾಗಿ ಆಟ ಆಡ್ತಿದ್ದಾರೆ, ಮುಂದೆ ಆಡ್ತಾರೆ ಅಂತ ಮಲ್ಲಮ್ಮಗೆ ಧೈರ್ಯ ತುಂಬಿದ್ದಾರೆ. ಮಲ್ಲಮ್ಮ ನಾಮಿನೇಟ್ ಆಗಿರೋದ್ರಿಂದ ಅವ್ರಿಗೆ ವೋಟು ಮಾಡಿ ಗೆಲ್ಲಿಸೋದು ವೀಕ್ಷಕರ ಜವಾಬ್ದಾರಿ. ಸದ್ಯ ಮಲ್ಲಮ್ಮ ಪೇಜ್ ನೋಡಿಕೊಳ್ತಿರುವ ಪಲ್ಲವಿ ಹಾಗೂ ಮನೋಜ್, ಇನ್ಸ್ಟಾಗ್ರಾಮ್ ನಲ್ಲಿ ಮಲ್ಲಮ್ಮ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿಲ್ಲ, ವೋಟ್ ಮಾಡಿ ಅಂತ ಪೋಸ್ಟ್ ಹಂಚಿಕೊಂಡಿದ್ದಾರೆ.