Car Wash: ಒಂದು ತಿಂಗಳಲ್ಲಿ ಕಾರನ್ನು ಎಷ್ಟು ಬಾರಿ ತೊಳೆಯಬೇಕು? ಯಾವ ಮಾಲೀಕರಿಗೂ ಗೊತ್ತಿಲ್ಲ ಈ ವಿಷ್ಯ

Share the Article

Car Wash: ಕಾರು ಮಾಲೀಕರು ತಮ್ಮ ಕಾರುಗಳನ್ನು ಕುಟುಂಬದ ಸದಸ್ಯರಂತೆ ಕಾಪಾಡಿಕೊಂಡು, ಅದನ್ನು ಕೇರ್ ಮಾಡಿಕೊಂಡು ಬರುತ್ತಾರೆ. ಪ್ರತಿದಿನ ಒರೆಸುವುದು, ಕೊಳೆಯಾದಾಗಲೆಲ್ಲ ತೊಳೆಯುವುದು ಸೇರಿದಂತೆ ಹಲವಾರು ರೀತಿ ಅದನ್ನು ಪೋಷಿಸಿಕೊಂಡು ಬರುತ್ತಾರೆ. ಕೆಲವರಂತೂ ಪ್ರತಿದಿನ ಕಾರನ್ನು ತೊಳೆಯುವುದುಂಟು. ಆದರೆ ಕಾರನ್ನು ಒಂದು ತಿಂಗಳಲ್ಲಿ ಎಷ್ಟು ಬಾರಿ ತೊಳೆಯಬೇಕು ಎಂಬುದು ಯಾರಿಗೂ ಗೊತ್ತಿಲ್ಲ. ಯಾವ ಮಾಲೀಕರು ಈ ವಿಚಾರವನ್ನು ತಿಳಿದಿಲ್ಲ. ಹಾಗಾದ್ರೆ ತಿಂಗಳಲ್ಲಿ ಎಷ್ಟು ಬಾರಿ ಕಾರನ್ನು ತೊಳೆಯಬೇಕು? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ವಿಚಾರ.

ತಜ್ಞರು ನಿಮ್ಮ ಕಾರನ್ನು ತಿಂಗಳಿಗೆ ಎರಡರಿಂದ ಮೂರು ಬಾರಿ ತೊಳೆಯಲು ಶಿಫಾರಸು ಮಾಡುತ್ತಾರೆ. ಇದರರ್ಥ ವಾರಕ್ಕೊಮ್ಮೆ ಅಥವಾ ಹದಿನೈದು ದಿನಗಳಿಗೊಮ್ಮೆ ತೊಳೆದರೆ ಉತ್ತಮ. ಇತರ ದಿನಗಳಲ್ಲಿ, ಸಂಗ್ರಹವಾದ ಧೂಳನ್ನು ತೆಗೆದುಹಾಕಲು ನೀವು ನಿಮ್ಮ ಕಾರನ್ನು ಒಣ, ಸ್ವಚ್ಛವಾದ ಬಟ್ಟೆಯಿಂದ ಒರೆಸಬಹುದು. ನೀವು ಪ್ರತಿದಿನ ನಿಮ್ಮ ಕಾರನ್ನು ತೊಳೆಯುವ ಅಗತ್ಯವಿಲ್ಲ. ಸಂಗ್ರಹವಾದ ಧೂಳನ್ನು ತೆಗೆದುಹಾಕಿದರೆ ಸಾಕು.

ಇನ್ನೂ ನೀವು ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ವಾಸಿಸುತ್ತಿದ್ದರೆ ಅಥವಾ ಚಾಲನೆ ಮಾಡುತ್ತಿದ್ದರೆ, ನಿಮ್ಮ ಕಾರನ್ನು ಶೆಡ್​ನಲ್ಲಿ ಇಡುವ ಮೊದಲು ಅದನ್ನು ತೊಳೆಯಬೇಕು. ಮಳೆ ಅಥವಾ ಪ್ರವಾಹಕ್ಕೆ ಸಿಲುಕಿದ ರಸ್ತೆಗಳಲ್ಲಿ ಚಾಲನೆ ಮಾಡುವುದರಿಂದ ನಿಮ್ಮ ಕಾರಿನ ಮಡ್‌ಗಾರ್ಡ್‌ಗಳು, ಡೋರ್ ಲೋವರ್‌ಗಳು ಮತ್ತು ವೀಲ್ ಆರ್ಚ್‌ಗಳ ಮೇಲೆ ಕೊಳಕು ಸಂಗ್ರಹವಾಗಬಹುದು. ತಕ್ಷಣ ತೆಗೆದುಹಾಕದಿದ್ದರೆ, ಅದು ನಿಮ್ಮ ಕಾರಿನ ಬಣ್ಣವನ್ನು ಹಾನಿಗೊಳಿಸುತ್ತದೆ.

ಅಲ್ಲದೆ ಒಳಭಾಗವನ್ನು ಸ್ವಚ್ಛಗೊಳಿಸುವುದು ಸಹ ಅತ್ಯಗತ್ಯ. ಜನರು ಇದನ್ನು ಹೆಚ್ಚಾಗಿ ಕಡೆಗಣಿಸುತ್ತಾರೆ. ಹೊರಭಾಗವನ್ನು ಸ್ವಚ್ಛಗೊಳಿಸುವುದರ ಜೊತೆಗೆ, ನೀವು ತಿಂಗಳಿಗೊಮ್ಮೆ ಕಾರಿನ ಒಳಭಾಗವನ್ನು ಸಹ ಸ್ವಚ್ಛಗೊಳಿಸಬೇಕು. ಡ್ಯಾಶ್‌ಬೋರ್ಡ್, ಸೀಟುಗಳು ಮತ್ತು ನೆಲದಿಂದ ಧೂಳು ಮತ್ತು ಕೊಳೆಯನ್ನು ತೆಗೆದುಹಾಕುವುದರಿಂದ ಕಾರು ಒಳಗಿನಿಂದ ಉತ್ತಮವಾಗಿ ಕಾಣುವುದಲ್ಲದೆ, ಒಳಾಂಗಣದ ಜೀವಿತಾವಧಿಯನ್ನು ಹೆಚ್ಚಿಸುತ್ತದೆ.

Comments are closed.