Amazon: ‘ಅಮೆಜಾನ್’ ಉದ್ಯೋಗಿಗಳಿಗೆ ಬಿಗ್ ಶಾಕ್: 30,000 ನೌಕರರನ್ನು ವಜಾಗೊಳಿಸಲು ಸಿದ್ಧತೆ

Share the Article

Amazon: ಆನ್ ಲೈನ್ ಚಿಲ್ಲರೆ ವ್ಯಾಪಾರ ಸಂಸ್ಥೆ ಅಮೆಜಾನ್ (Amazon) 30 ಸಾವಿರ ನೌಕರರನ್ನು ವಜಾಗೊಳಿಸಲು ಮುಂದಾಗಿದೆ. ಕೋವಿಡ್ ಸಮಯದಲ್ಲಿ ಆದ ಹೆಚ್ಚಿನ ನೌಕರರ ನೇಮಕದಿಂದ ಆದ ವೆಚ್ಚಗಳನ್ನು ಸರಿದೂಗಿಸಲು ಸಂಸ್ಥೆ ಈಗ ಈ ಕ್ರಮ ಕೈಗೊಳ್ಳಲು ನಿರ್ಧರಿಸಿದೆ ಎಂದು ವರದಿಗಳು ಹೇಳಿವೆ.

ಅಮೆಜಾನ್ ನ ಒಟ್ಟು ನೌಕರರ ಪೈಕಿ ಸುಮಾರು ಶೇ. 10 ರಷ್ಟು ಮಂದಿಯನ್ನು ವಜಾಗೊಳಿಸಲಾಗುತ್ತಿದೆ. ಜಾಗತಿಕವಾಗಿ ಅಮೆಜಾನ್ ನಲ್ಲಿ ಸುಮಾರು 15 ಲಕ್ಷ ನೌಕರರಿದ್ದಾರೆ.

ಕಳೆದ ವರ್ಷ ಅಮೆಜಾನ್ ಅಮೆರಿಕ ಸರ್ಕಾರಕ್ಕೆ ಸಲ್ಲಿಸಿದ ಅಂಕಿಅಂಶಗಳ ಪ್ರಕಾರ, ಕಂಪನಿಯಲ್ಲಿ ಸುಮಾರು 3.5 ಲಕ್ಷ ಕಾರ್ಪೊರೇಟ್ ಉದ್ಯೋಗಿಗಳಿದ್ದಾರೆ. ಇದರಲ್ಲಿ ಕಾರ್ಯನಿರ್ವಾಹಕ, ವ್ಯವಸ್ಥಾಪಕ ಮತ್ತು ಮಾರಾಟ ಹುದ್ದೆಗಳಲ್ಲಿ ಇರುವವರು ಸೇರಿದ್ದಾರೆ.

2022 ರ ಅಂತ್ಯದ ನಂತರ ಅಮೆಜಾನ್‌ನ ಅತಿದೊಡ್ಡ ಉದ್ಯೋಗ ಕಡಿತಕ್ಕೆ ಮುಂದಾಗಿದೆ. 2022ರಲ್ಲಿ 27,000 ನೌಕರರನ್ನು ಮನೆಗೆ ಕಳುಹಿಸಿತ್ತು. ಆದರೆ ಈ ಬಗ್ಗೆ ಮಾಹಿತಿ ನೀಡಲು ಸಂಸ್ಥೆ ನಿರಾಕರಿಸಿದೆ. ಅಮೆಜಾನ್ ಕಳೆದ ಎರಡು ವರ್ಷಗಳಿಂದ ಸಾಧನಗಳು, ಸಂವಹನಗಳು ಮತ್ತು ಪಾಡ್‌ಕಾಸ್ಟಿಂಗ್ ಸೇರಿದಂತೆ ಅನೇಕ ವಿಭಾಗಗಳಲ್ಲಿ ಉದ್ಯೋಗ ಕಡಿತ ಮಾಡುತ್ತಿದೆ. ಇದನ್ನು ಪೀಪಲ್ ಎಕ್ಸ್ಪೀರಿಯನ್ಸ್ ಮತ್ತು ಟೆಕ್ನಾಲಜಿ ಅಥವಾ PXT ಎಂದು ಕರೆಯಲಾಗುತ್ತದೆ. ಕಂಪನಿ ಮಂಗಳವಾರ ಇದನ್ನು ಘೋಷಿಸಿದೆ.

Comments are closed.