Suicide: ಮೂಲ್ಕಿ ಇಂದಿರಾನಗರ ರೈಲ್ವೆ ಪಟ್ಟೆಯಲ್ಲಿ ವ್ಯಕ್ತಿಯ ಆತ್ಮಹತ್ಯೆ!

Suicide: ಮೂಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯ ಹಳೆಯಂಗಡಿ ಇಂದಿರಾನಗರ ಪ್ರದೇಶದಲ್ಲಿ ಕಾರ್ಕಳ ಬೈಲೂರಿನ ನಿವಾಸಿ, 55 ವರ್ಷದ ಪ್ರಭಾಕರ ಶೆಟ್ಟಿ ಎಂಬವರು ರೈಲ್ವೆ ಪಟ್ಟೆಯ ಬಳಿ ಆತ್ಮಹತ್ಯೆ (,Suicide) ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ದೊರಕಿದೆ.

ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಮೂಲ್ಕಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಜೀವ ರಕ್ಷಕ ತಂಡದ ದಾವೂದ್, ಪ್ರಸಾದ್ ಹಾಗೂ ಮಹೇಶ್ ತಕ್ಷಣ ಸ್ಥಳಕ್ಕೆ ಧಾವಿಸಿ, ಮೃತದೇಹವನ್ನು ಜೀವ ರಕ್ಷಕ ಆಂಬುಲೆನ್ಸ್ ಮೂಲಕ ಮೂಲ್ಕಿ ಶವಾಗಾರಕ್ಕೆ ರವಾನೆ ಮಾಡಿದ್ದಾರೆ.
Comments are closed.