Maize Price : ದಿಢೀರ್ ಕುಸಿತ ಕಂಡ ಮೆಕ್ಕೆಜೋಳದ ಬೆಲೆ – ರೈತರು ಕಂಗಾಲು

Share the Article

Maize Price : ಬಿತ್ತನೆ ಸಮಸ್ಯೆ ಹಾಗೂ ಮಳೆಯ ಕಾರಣಗಳಿಂದಾಗಿ ಮೆಕ್ಕೆಜೋಳದ ಬೆಲೆ ಕುಸಿತ ಕಂಡಿದ್ದು ರೈತರು ಕಂಗಾಲಾಗುವಂತೆ ಮಾಡಿದೆ.

ಹೌದು, ಮೆಕ್ಕೆ ಜೋಳ ಕ್ವಿಂಟಾಲ್‌ ಗೆ 1500 ರಿಂದ 1600, 1700 ರೂ. ವರೆಗೆ ದರ ಕುಸಿತವಾಗಿದೆ. ಇದು ಕಟಾವು ಆರಂಭಿಸಿ ಮಾರಾಟ ಮಾಡಲು ಮುಂದಾಗುತ್ತಿರುವ ಬೆಳೆಗಾರರಿಗೆ ಧಾರಣೆ ಕುಸಿತ ಶಾಕ್‌ ನೀಡಿದೆ.

ಕಳೆದ ವರ್ಷ 2200 ರೂ. ದರ: ಕಳೆದ ವರ್ಷ ಇದೇ ವೇಳೆ 2000, 2200 ರೂ. ಆಸುಪಾಸಿನಲ್ಲಿ ಇದ್ದ ದರಕ್ಕೆ ಕೆಲ ರೈತರು ಜೋಳ ಮಾರಾಟ ಮಾಡಿ ದೀಪಾವಳಿ ಆಚರಿಸಿದ್ದರು. ಈ ಬಾರಿ ಜೋಳದ ದರ ಕುಸಿತ ಕಾರಣ ರೈತರು ಜೋಳ ಕೊಯ್ಲಿಗೂ ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಮೆಕ್ಕೆಜೋಳ ಬೆಳೆಯಲು ಪ್ರತಿ ಎಕರೆಗೆ ಬಿತ್ತನೆ ಬೀಜ, ಗೊಬ್ಬರ , ಕಳೆ, ಮೇಲು ಗೊಬ್ಬರ, ಕಟಾವು ಇತರೆ ಕೆಲಸಗಳು ಸೇರಿ ಅಂದಾಜು 20ರಿಂದ 30 ಸಾವಿರ ಖರ್ಚಾಗುತ್ತದೆ. ಇದರ ನಡುವೆ ಸಣ್ಣ ರೈತರಿಗಂತೂ ಈಗಿನ ಜೋಳದ ದರ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

Comments are closed.