ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಸುಳ್ಯ – ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿಶೇಷ ಶಿಬಿರ ಉದ್ಘಾಟನೆ

Share the Article

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ನಡೆಯಲಿರುವ ಒಂದು ವಾರದ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಅ. 26 ರಂದು ಆಲೆಟ್ಟಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.

ಶಿಬಿರದ ಮೊದಲನೇ ದಿನದ ಧ್ವಜಾರೋಹಣವನ್ನು AOLE (ರಿ). ಸುಳ್ಯ ಇದರ ಅಧ್ಯಕ್ಷರಾದ ಡಾ. ಕೆ ವಿ ಚಿದಾನಂದ ಇವರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಎನ್ ಎಸ್ ಎಸ್ ವಿಧ್ಯಾರ್ಥಿಗಳಿಗೆ ಶುಭಹಾರೈಸಿದರು.
ಕಾಲೇಜಿನ ಪ್ರಾಂಶುಪಾಲಾರದ ಡಾ. ಲೀಲಾಧರ್ ಡಿ ವಿ ಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭಹಾರೈಸಿದರು.

ವೇದಿಕೆಯಲ್ಲಿ ಆಲೆಟ್ಟಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಜಯಪ್ರಕಾಶ್ ಕುಂಚಡ್ಕ, ಆಲೆಟ್ಟಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀಮತಿ ವೀಣಾ ವಸಂತ್, ಆಲೆಟ್ಟಿ ಸದಾಶಿವ ದೇವಸ್ಥಾನದ ಆಡಳಿತಾಧಿಕಾರಿ ಶ್ರೀ ಶರತ್ ಎಸ್ ಹಾಗೂ ಆಲೆಟ್ಟಿ ಸದಾಶಿವ ದೇವಸ್ಥಾನದ ಸೇವಾ ಸಮಿತಿಯ ಕಾರ್ಯದರ್ಶಿ ಶ್ರೀ ರಾಮಚಂದ್ರ , ಕೆವಿಜಿ ಆಯುರ್ವೇದ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿಯಾದ ಡಾ ವಿನಯ್ ಶಂಕರ್ ಭಾರಧ್ವಾಜ್, ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿಯಾದ ಡಾ. ಪ್ರಮೋದ ಪಿ ಎ, ಎನ್ ಎಸ್ ಎಸ್ ಘಟಕದ ನಾಯಕರುಗಳಾದ ಮಿ.ರೋಹನ್ ಎಸ್ ಪಿ ಗೌಡ ಹಾಗೂ ಕು. ಸ್ಪಂದಾ ಎಂ ವಿ ಉಪಸ್ಥಿತರಿದ್ದರು.

ಶಿಭಿರಾರ್ಥಿಗಳಾದ ಕು. ವೈಶಾಲಿ ಪಿ ಜೆ, ಬಿ ಎಸ್ ಪ್ರಸನ್ನ ಹಾಗೂ ರಾಹುಲ್ ರಾಜನ್ ಪ್ರಾರ್ಥಿಸಿ, ಹೇಮಪ್ರಸಾದ್ ಎಂ ಪಿ ಸ್ವಾಗತಿಸಿ, ಕು. ಶಾಂಭವಿ ಎಚ್ ಡಿ ಹಾಗೂ ಕು. ವೀಣಾ ಎಸ್ ಗೌಡರ್ ಇವರು ಕಾರ್ಯಕ್ರಮವನ್ನು ನಿರೂಪಿಸಿ ಕು. ಹರ್ಷಿತಾ ಎಂ ವಂದಿಸಿದರು .

ಶಿಬಿರವು 26-10-2025 ರಿಂದ 01-11-2025ರ ತನಕ ಜರುಗಲಿರುವುದು. ಈ ಶಿಬಿರದಲ್ಲಿ ಗ್ರಾಮದ ವಿವಿಧ ಶಾಲೆಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ, ಆರೋಗ್ಯ ಸಮೀಕ್ಷೆಯನ್ನು ನಡೆಸಲಾಗುವುದು.

Comments are closed.