Job: ನೀವು SSLC ಪಾಸ್ ಆಗಿದ್ದೀರಾ? ಹಾಗಿದ್ರೆ ಸರ್ಕಾರದ ಯಾವೆಲ್ಲಾ ಹುದ್ದೆಗಳಿಗೆ ಅಪ್ಲೈ ಮಾಡಬಹುದು ಗೊತ್ತಾ?


Job: SSLC ಎಂಬುದು ವಿದ್ಯಾರ್ಥಿ ಜೀವನದಲ್ಲಿ ಮಾತ್ರವಲ್ಲದೆ ಬದುಕಿನ ಹಂತದಲ್ಲಿಯೂ ಅತ್ಯಂತ ಪ್ರಮುಖವಾದ ಘಟ್ಟ. ಹತ್ತನೇ ತರಗತಿ ಪಾಸಾಗಿದೆ ಎಂದರೆ ಆ ವ್ಯಕ್ತಿಯನ್ನು ನೋಡುವ ರೀತಿಯೇ ಬೇರೆ. ಅಲ್ಲದೆ ಸರ್ಕಾರದ ಸಣ್ಣಪುಟ್ಟ ಹುದ್ದೆಗಳನ್ನು ಗಿಟ್ಟಿಸಿಕೊಳ್ಳಲು ಕೂಡ ಎಸ್ ಎಸ್ ಎಲ್ ಸಿ ಪಾಸ್ ಆಗಿರಲೇಬೇಕು. ನೀವು ಎಸ್ ಎಸ್ ಎಲ್ ಸಿ ಪಾಸಾಗಿದ್ದೀರಾ? ಹಾಗಿದ್ದರೆ ಸರ್ಕಾರದ ಯಾವೆಲ್ಲ ಹುದ್ದೆಗಳಿಗೆ ಅಪ್ಲೈ ಮಾಡಬಹುದು ಗೊತ್ತಾ? ಇಲ್ಲಿದೆ ನೋಡಿ ಡೀಟೇಲ್ಸ್.
ಸೇವಕರು (Peon)
ಎಲ್ಲಾ ನ್ಯಾಯಾಲಯಗಳಲ್ಲಿ ಸೇವಕರ ಹುದ್ದೆಗಳು.
ನೇಮಕಾತಿ: ಪ್ರತಿ ವರ್ಷ ಜಿಲ್ಲಾ, ತಾಲ್ಲೂಕು, ಹೈಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳಲ್ಲಿ ನೇಮಕ.
ಆದೇಶ ಜಾರಿಕಾರರು (Orderly)
ನ್ಯಾಯಾಲಯಗಳಲ್ಲಿ ಆದೇಶ ಜಾರಿಸುವ ಕೆಲಸ.
ಹೆಚ್ಚಿನ ಮಾಹಿತಿ: ವಾಹನ ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್) ಇದ್ದವರಿಗೆ ಪ್ರಾಧಾನ್ಯತೆ.
ವಯೋಮಿತಿ: 18-35 ವರ್ಷ, ಜಾತಿ ಪ್ರಕಾರ ಸಡಿಲಿಕೆ (ಒಬಿಸಿ 38 ವರ್ಷ, ಎಸ್‌ಸಿ/ಎಸ್‌ಟಿ 40 ವರ್ಷ).
ಅರಣ್ಯ ವೀಕ್ಷಕರು (Forest Watchers)
ಅರಣ್ಯ ಇಲಾಖೆಯಲ್ಲಿ ಫಾರೆಸ್ಟ್ ವಾಚರ್ ಹುದ್ದೆ.
ಆಯ್ಕೆ ಪ್ರಕ್ರಿಯೆ: ಲಿಖಿತ, ದೈಹಿಕ ಹಾಗೂ ಸಹಿಷ್ಣುತೆ ಪರೀಕ್ಷೆ.
ಡಾಟಾ ಎಂಟ್ರಿ ಆಪರೇಟರ್
ಗ್ರಾಮಪಂಚಾಯಿತಿ, ತಾಲ್ಲೂಕು, ನಾಡಕಛೇರಿ ಹಾಗೂ ವಿವಿಧ ಸರ್ಕಾರಿ ಇಲಾಖೆಯಲ್ಲಿ ಡಾಟಾ ಎಂಟ್ರಿ.
ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ ಪಾಸ್ + ಸರಕಾರಿ ಮಾನ್ಯತೆ ಪಡೆದ ಕಂಪ್ಯೂಟರ್ ತರಬೇತಿ ಪ್ರಮಾಣಪತ್ರ.
ನೇಮಕಾತಿ: ಸಾಮಾನ್ಯವಾಗಿ ತಾತ್ಕಾಲಿಕ / ಗುತ್ತಿಗೆ ಆಧಾರ.
ಮೀಸಲು ಪೊಲೀಸ್ ಕಾನ್ಸ್‌ಟೇಬಲ್
ಕರ್ನಾಟಕ ಮೀಸಲು ಪೊಲೀಸ್ ಪಡೆ (ಕೆಎಸ್‌ಆರ್‌ಪಿ) ಮತ್ತು ಕೈಗಾರಿಕಾ ಭದ್ರತಾ ಪಡೆ.
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ.
ನೇಮಕಾತಿ: ಶೀಘ್ರದಲ್ಲೇ 1500 ಹುದ್ದೆಗಳ ಅರ್ಜಿ ಆಹ್ವಾನ ಸಾಧ್ಯತೆ.
ಕೆಎಸ್‌ಆರ್‌ಟಿಸಿ ಬಸ್ ಚಾಲಕ
ಹುದ್ದೆ ವಿವರ: ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸೇರಿದಂತೆ ಸರ್ಕಾರಿ ಸಾರಿಗೆ ಸಂಸ್ಥೆಗಳ ಬಸ್ ಚಾಲಕ ಹುದ್ದೆ.
ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ ಪಾಸ್ + ಚಾಲನಾ ಪರವಾನಗಿ.
ಗ್ರೂಪ್ ಡಿ ಹುದ್ದೆಗಳು
ಹುದ್ದೆ ವಿವರ: ಸರ್ಕಾರಿ ಕಚೇರಿ ಸಹಾಯಕ, ಕಚೇರಿ ಸಹಾಯಕ ಹುದ್ದೆಗಳು.
ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ ಪಾಸ್.
Comments are closed.