Ramalinga Reddy: ಎಚ್ಚೆತ್ತ ಸಾರಿಗೆ ಇಲಾಖೆ: ಬಸ್‌ಗಳಲ್ಲಿ ಈ ವಸ್ತುಗಳನ್ನ ಕೊಂಡೊಯ್ಯುವಂತಿಲ್ಲ

Ramalinga Reddy: ಕರ್ನೂಲ್ ಬಸ್ ದುರಂತದ (Karnool Bus Fire) ಬೆನ್ನಲ್ಲೇ ರಾಜ್ಯ ಸಾರಿಗೆ ಇಲಾಖೆ ಎಚ್ಚೆತ್ತುಕೊಂಡಿದೆ. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ 4 ಸಾರಿಗೆ ನಿಗಮಗಳ ಎಂಡಿಗಳಿಗೆ ಬಸ್‌ಗಳಲ್ಲಿ ಕೆಲ ನಿಯಮಗಳನ್ನ ಕಡ್ಡಾಯಗೊಳಿಸಲು ಸೂಚಿಸಿದ್ದಾರೆ.

ಇನ್ಮುಂದೆ ಬಸ್ ಗಳಲ್ಲಿ ಯಾವುದೇ ರೀತಿಯ ಸ್ಫೋಟಕ ವಸ್ತುಗಳನ್ನ ತೆಗೆದುಕೊಂಡು ಹೋಗಬಾರದು. ಎಲ್ಲಾ ಎಸಿ ಬಸ್‌ಗಳಲ್ಲಿ ಸುತ್ತಿಗೆ ಕಡ್ಡಾಯಗೊಳಿಸಿದ್ದು, ಇದರಿಂದ ತುರ್ತು ಸಂದರ್ಭಗಳಲ್ಲಿ ಕಿಟಕಿಗಳನ್ನು ಒಡೆಯಲು ಬಳಸಲು ಸಹಾಯವಾಗಲಿದೆ. ಅಲ್ಲದೇ ಲಗೇಜ್ ಸಾಗಿಸುವ ಜಾಗದಲ್ಲಿ ಯಾವುದೇ ವ್ಯಕ್ತಿ ಮಲಗಲು ಅವಕಾಶ ನೀಡಬಾರದು. ಬಸ್ಸುಗಳ ನವೀಕರಣ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಿದ್ದಾರೆ.
ಜೊತೆಗೆ ಬಸ್ಸುಗಳಲ್ಲಿನ ಸುರಕ್ಷತಾ ಆಡಿಟ್ ಪರಿಶೀಲನೆಗೆ ತಂಡಗಳನ್ನು ರಚಿಸಿ, ಬಸ್ ಗಳಲ್ಲಿ ಯಾವುದೇ ನೂನ್ಯತೆ ಕಂಡುಬಂದರೂ ಕಠಿಣ ಕ್ರಮಕ್ಕೆ ಆದೇಶಕ್ಕೆ ಸೂಚಿಸಿದ್ದಾರೆ.
Comments are closed.