Pratap Simha : ಪ್ರಾಯದಲ್ಲಿ ನಮ್ಮಪ್ಪ ಚಿಕ್ಕಬಳ್ಳಾಪುರಕ್ಕೆ ಬಂದಿದ್ದರೆ ನೀನು ಸುಂದರವಾಗಿ ಹುಟ್ಟುತ್ತಿದೆ – ಪ್ರದೀಪ್ ಈಶ್ವರಗೆ ಪ್ರತಾಪ್ ಸಿಂಹ ಟಾಂಗ್

Share the Article

 

Pratap Simha : ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರ ನಡುವಿನ ಹೇಳಿಕೆಗಳ ಗುದ್ದಾಟ ಬರೆಯುತ್ತದ ಹಂತ ತಲುಪಿದೆ. ಇದೀಗ ಪ್ರತಾಪ್ ಸಿಂಹ ಅವರು ಪ್ರಾಯದಲ್ಲಿ ನಮ್ಮಪ್ಪ ಚಿಕ್ಕಬಳ್ಳಾಪುರಕ್ಕೆ ಬಂದಿದ್ದರೆ ನೀನು ಸುಂದರವಾಗಿ ಹುಟ್ಟುತ್ತಿದ್ದೇನೆ ಎಂದು ಪ್ರದೀಪ ಈಶ್ವರಗೆ ಟಾಂಗ್ ನೀಡಿದ್ದಾರೆ.

 

ಹೌದು, ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವೈಯಕ್ತಿಕ ಟೀಕೆ ಹಾಗೂ ಅವಾಚ್ಯ ಪದಗಳನ್ನು ಬಳಸಿದ ಸಿಂಹ, ತಮ್ಮ ತಾಯಿಯ ಬಗ್ಗೆ ಅವಹೇಳನ ಮಾಡಿದ್ದಕ್ಕೆ ಈ ರೀತಿ ಉತ್ತರಿಸಬೇಕಾಯಿತು ಎಂದು ಹೇಳಿದ್ದಾರೆ.

 

ಶಾಸಕ ಪ್ರದೀಪ್ ಈಶ್ವರ್ ತಮ್ಮ ತಾಯಿ ಬಗ್ಗೆ ಅವಹೇಳನಕಾರಿಯಾಗಿ ಮತಾನಾಡಿರುವದನ್ನುಉಲ್ಲೇಖಿಸಿ ಮೈಸೂರಿನಲ್ಲಿ ಮಾತನಾಡಿದ ಅವರು, “ಪ್ರದೀಪ್ ಈಶ್ವರ್ ಕತ್ತಲಲ್ಲಿ ಕಾಣಲ್ಲ, ಬೆಳಕಲ್ಲಿ ಹೊಳೆಯಲ್ಲ. ರಾಜ್ಯದಲ್ಲಿ ಏಕೈಕ ಕಾಮಿಡಿ ಪ್ಲೀಸ್ ಎಂಎಲ್ಎ ಅಂದರೆ ಅದು ಪ್ರದೀಪ ಈಶ್ವರ್. ಮುಳ್ಳು ಹಂದಿ ಮುಖದವನು. ನೀನು ನನ್ನ ವೈಯಕ್ತಿಕ ವಿಚಾರ ಹಾಗೂ ತಾಯಿಯ ಬಗ್ಗೆ ಮಾತನಾಡಿದಕ್ಕೆ ನಾನು ಈ ವಿಚಾರವನ್ನು ಹೇಳುತ್ತೇನೆ ಎಂದು ಹೇಳಿ ಮಾತನಾಡಿದ ಅವರು ನನ್ನ ತಂದೆ ಪ್ರಾಯದಲ್ಲಿರುವಾಗ ಚಿಕ್ಕಬಳ್ಳಾಪುರಕ್ಕೆ ಬಂದಿದ್ದರೆ ನೀನು ಸುಂದರವಾಗಿ ಹುಟ್ಟುತ್ತಿದ್ದೆ ಎಂದು ಹೇಳಿ ಇನ್ನೊಂದು ಬಾರಿ ನನ್ನ ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ ಮಗನೇ. ಅವನಿಗೆ ಅವನ ಭಾಷೆಯಲ್ಲೇ ಉತ್ತರ ಕೊಡುತ್ತಾ ಕರ್ನಾಟಕದ ಜನರ ಕ್ಷಮೆ ಕೇಳುತ್ತೇನೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

 

ಅಲ್ಲದೆ ನನ್ನ ತಾಯಿ ಬಗ್ಗೆ ಪ್ರದೀಪ್ ಈಶ್ವರ್ ಅವಹೇಳನವಾಗಿ ಮಾತಾಡಿದ್ದಾನೆ. ಇನ್ನೊಂದು ಬಾರಿ ಎಚ್ಚರಿಕೆ ಇರಲಿ.  ರಾಜಕೀಯವಾಗಿ, ಚಿಕ್ಕಬಳ್ಳಾಪುರದ ಗೌಡರ ಸಣ್ಣ ಮುನಿಸಿನ ಕಾರಣದಿಂದಾಗಿ ಪ್ರದೀಪ್ ಈಶ್ವರ್ ಗೆದ್ದಿದ್ದಾರೆ ಅಷ್ಟೇ ಎಂದು ಗೆಲುವಿನ ಬಗ್ಗೆಯೂ ಟೀಕಿಸಿದರು.

Comments are closed.