Home News Gold Price: ದೀಪಾವಳಿ ಬೆನ್ನಲ್ಲೇ ಕುಸಿತ ಕಂಡ ಚಿನ್ನದ ದರ!!

Gold Price: ದೀಪಾವಳಿ ಬೆನ್ನಲ್ಲೇ ಕುಸಿತ ಕಂಡ ಚಿನ್ನದ ದರ!!

Hindu neighbor gifts plot of land

Hindu neighbour gifts land to Muslim journalist

 

Gold Price : ದೀಪಾವಳಿ ಹಬ್ಬಕ್ಕೂ ಮುನ್ನ ಚಿನ್ನದ ದರ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿತ್ತು. ಎರಡು ಮೂರು ತಿಂಗಳಲ್ಲಿ ಒಂದು ಗ್ರಾಂ ಚಿನ್ನದ ಬರೋಬ್ಬರಿ 2,000 ಕ್ಕಿಂತಲೂ ಹೆಚ್ಚು ಏರಿಕೆ ಕಂಡಿತ್ತು. ಆದರೆ ಇದೀಗ ದೀಪಾವಳಿ ಹಬ್ಬದ ಬೆನ್ನಲ್ಲೇ ಚಿನ್ನದ ದರ ದಿನದಿಂದ ದಿನಕ್ಕೆ ಕುಸಿತ ಕಾಣುತ್ತಿದೆ.

 

ಹೌದು, ಭಾರತದಲ್ಲಿ ಗುರುವಾರ ಚಿನ್ನದ ದರ 24 ಕ್ಯಾರೆಟ್ ಚಿನ್ನದ ಬೆಲೆ ಗಣನೀಯವಾಗಿ ಇಳಿದು ಪ್ರತಿ ಗ್ರಾಂಗೆ 12,506 ರೂ.ಗಳಿಗೆ ತಲುಪಿದೆ. ಅದೇ ರೀತಿ, ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 11,645 ರೂ.ಗಳಿಗೆ ಇಳಿದಿದೆ. ಏತನ್ಮಧ್ಯೆ, ಭಾರತದಲ್ಲಿ 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 9,381 ರೂ.ಗಳಿಗೆ ಇಳಿದಿದೆ. ಗುಡ್‌ರಿಟರ್ನ್ಸ್‌ನ ದತ್ತಾಂಶದ ಪ್ರಕಾರ, ಕಳೆದ ಏಳು ದಿನಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ ಸುಮಾರು 77,000 ರೂ.ಗಳಿಗೆ ಇಳಿದಿದೆ.

 

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,14,650 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,25,080 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 15,900 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,14,650 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 15,900 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 17,400 ರೂ ಇದೆ.