Flights Tickets: ಈ 6 ಕ್ರೆಡಿಟ್ ಕಾರ್ಡ್ ಇದ್ದೋರಿಗೆ ಸಿಗುತ್ತೆ ವಿಮಾನ ಟಿಕೆಟ್ ಆಫರ್

Flights Tickets: ಭಾರತೀಯ ಬ್ಯಾಂಕ್‌ಗಳು ಇದೀಗ ಪ್ರಯಾಣಿಕರಿಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುತ್ತಿವೆ. ಇವು ವಿಮಾನ ಟಿಕೆಟ್ ಬುಕ್ಕಿಂಗ್‌ನಲ್ಲೇ ಸೌಲಭ್ಯ ನೀಡುವುದಲ್ಲದೆ, ಪ್ರಯಾಣದ ಖರ್ಚಿನಲ್ಲಿ ಉಳಿತಾಯಕ್ಕೂ ಸಹಕಾರಿ ಆಗಿವೆ. ಪ್ರಯಾಣಿಕರಿಗೆ ವಿಮಾನ ಮೈಲೇಜ್ ಪಾಯಿಂಟ್‌ಗಳು, ವೋಚರ್‌ಗಳು ಹಾಗೂ ಕ್ಯಾಶ್‌ಬ್ಯಾಕ್ ನೀಡುವ ಮೂಲಕ ಈ ಕಾರ್ಡ್‌ಗಳು ಹೆಚ್ಚುವರಿ ಪ್ರಯೋಜನ ನೀಡುತ್ತವೆ.

ಯಾಕ್ಸಿಸ್ ಬ್ಯಾಂಕ್ ಅಟ್ಲಾಸ್ ಕಾರ್ಡ್: ಯಾವುದೇ ಏರ್‌ಲೈನ್‌ನಲ್ಲಿ ಪ್ರಯಾಣ ಮಾಡಿದರೂ ರೂ.1ಕ್ಕೆ ಸಮಾನ 5 ಎಡ್ಜ್ ಮೈಲ್ಸ್ ಪಾಯಿಂಟ್‌ಗಳನ್ನು ನೀಡುತ್ತದೆ. ಕಾರ್ಡ್ ಸಕ್ರಿಯಗೊಳಿಸಿದ ನಂತರ 37 ದಿನಗಳೊಳಗೆ ಮೊದಲ ಟ್ರಾನ್ಸಾಕ್ಷನ್ ಮಾಡಿದರೆ 2,500 ಮೈಲ್ಸ್ ಬೋನಸ್ ಸಿಗುತ್ತದೆ.
ಅಮೆರಿಕನ್ ಎಕ್ಸ್‌ಪ್ರೆಸ್ ಪ್ಲಾಟಿನಂ ಟ್ರಾವೆಲ್ ಕಾರ್ಡ್: ವಾರ್ಷಿಕ ರೂ.1.9 ಲಕ್ಷ ಖರ್ಚು ಮಾಡಿದರೆ 15,000 ಪಾಯಿಂಟ್‌ಗಳು ಹಾಗೂ ಹೆಚ್ಚು ಖರ್ಚಿಗೆ 25,000 ಪಾಯಿಂಟ್‌ಗಳವರೆಗೆ ರಿವಾರ್ಡ್ ನೀಡುತ್ತದೆ. ಈ ಪಾಯಿಂಟ್‌ಗಳನ್ನು ಟ್ರಾವೆಲ್ ಕಲಕ್ಷನ್ ಯೋಜನೆಗಳಲ್ಲಿ ಉಪಯೋಗಿಸಬಹುದು.
HDFC 6E ರಿವಾರ್ಡ್‌ಸ್ ಇಂಡಿಗೋ ಕಾರ್ಡ್ :ಇಂಡಿಗೋ ಪ್ರಯಾಣಿಕರಿಗೆ ವಿನ್ಯಾಸಗೊಳಿಸಲಾದ ಈ ಕಾರ್ಡ್‌ನಲ್ಲಿ ವೆಬ್‌ಸೈಟ್ ಅಥವಾ ಆಪ್ ಮೂಲಕ ಖರೀದಿಸಿದ ಪ್ರತಿ ₹100ಕ್ಕೆ 2.5 ರಿವಾರ್ಡ್ ಪಾಯಿಂಟ್‌ಗಳು ದೊರೆಯುತ್ತವೆ. ಜೊತೆಗೆ ರೂ.1,500 ಮೌಲ್ಯದ ಉಚಿತ ವಿಮಾನ ವೋಚರ್ ಸಿಗುತ್ತದೆ.
SBI ಮೈಲ್ಸ್ ಎಲೈಟ್ ಕಾರ್ಡ್: ಮೊದಲ ಸೈನ್-ಅಪ್ ವೇಳೆ 5,000 ಟ್ರಾವೆಲ್ ಕ್ರೆಡಿಟ್ ದೊರೆಯುತ್ತದೆ. ಪ್ರತಿ ₹200 ಖರ್ಚಿಗೆ 6 ಕ್ರೆಡಿಟ್ ಪಾಯಿಂಟ್‌ಗಳು ಸಿಗುತ್ತವೆ, ಅವುಗಳನ್ನು ಏರ್ ಮೈಲ್ಸ್ ಅಥವಾ ಹೋಟೆಲ್ ಬುಕ್ಕಿಂಗ್‌ಗಳಿಗೆ ಪರಿವರ್ತಿಸಬಹುದು.
ಯಾಕ್ಸಿಸ್ ಬ್ಯಾಂಕ್ ಹರೈಸನ್ ಕ್ರೆಡಿಟ್ ಕಾರ್ಡ್ : ಈ ಕಾರ್ಡ್‌ನಲ್ಲಿ ಏರ್‌ಲೈನ್ ವೆಬ್‌ಸೈಟ್‌ನಲ್ಲಿ ಮಾಡಿದ ಪ್ರತಿ ₹100 ಖರ್ಚಿಗೆ 5 ಎಡ್ಜ್ ಮೈಲ್ಸ್ ಸಿಗುತ್ತದೆ. ಮೊದಲ ₹1,000 ಖರ್ಚಿಗೆ 5,000 ಬೋನಸ್ ಮೈಲ್ಸ್ ಬೋನಸ್‌ವೂ ಇದೆ.
ICICI ಸ್ಕೈವಾರ್ಡ್ಸ್ ಎಮಿರೇಟ್ಸ್ ಕಾರ್ಡ್: ಎಮಿರೇಟ್ಸ್ ಪ್ರಯಾಣಿಕರಿಗೆ ಮಾತ್ರ ವಿನ್ಯಾಸಗೊಳಿಸಲಾದ ಈ ಕಾರ್ಡ್‌ನಲ್ಲಿ ಎಲ್ಲ ಖರ್ಚುಗಳ ಮೇಲೂ ಸ್ಕೈವಾರ್ಡ್ಸ್ ಮೈಲ್ಸ್ ಲಭ್ಯ. ಕಾರ್ಡ್‌ಗಳು ಎಮೆರಾಲ್ಡ್, ಸಫೈರ್, ರೂಬಿ ಎಂಬ ವಿಭಿನ್ನ ಆವೃತ್ತಿಗಳಲ್ಲಿ ದೊರೆಯುತ್ತವೆ.
Comments are closed.