Nomination rules: ನ.1ರಿಂದ ಬ್ಯಾಂಕ್‌ಗಳ `ನಾಮಿನಿ ನಿಯಮ’ದಲ್ಲಿ ಬದಲಾವಣೆ

Nomination rules: ನವೆಂಬರ್ 1ರಿಂದ ಬ್ಯಾಂಕ್‌ಗಳ ನಾಮಿನಿ ನಿಯಮದಲ್ಲಿ (Nomination rules) ಬದಲಾವಣೆ ಆಗಲಿದ್ದು, ಬ್ಯಾಂಕ್ ಅಕೌಂಟ್, ಲಾಕರ್‌ಗಳಿಗೆ 1ಕ್ಕಿಂತ ಹೆಚ್ಚು ನಾಮಿನಿಗಳನ್ನು ಮಾಡಬಹುದು ಎಂದು ಕೇಂದ್ರ ಹಣಕಾಸು ಇಲಾಖೆ (Finance Department) ತಿಳಿಸಿದೆ.

ಈವರೆಗೆ 1 ಬ್ಯಾಂಕ್ ಖಾತೆ ಅಥವಾ ಲಾಕರ್‌ಗಳಿಗೆ ಇದ್ದ ಒಬ್ಬರು ನಾಮಿನಿ ಬದಲಿಗೆ ನಾಲ್ವರು ನಾಮಿನಿಗಳಿಗೆ ಅವಕಾಶ ಸಿಗಲಿದೆ. ಡೆಪಾಸಿಟ್ ವೇಳೆಯೇ ಖಾತೆದಾರರು 4 ನಾಮಿನಿಗಳನ್ನು ಆಯ್ಕೆ ಮಾಡಬಹುದು. ಠೇವಣಿದಾರರು ಮೃತರಾದ ನಂತರ ಇದರಲ್ಲಿ ಕ್ರಮಸಂಖ್ಯೆಗೆ ಅನುಗುಣವಾಗಿ ಖಾತೆದಾರರ ಹಣಕಾಸಿಗೆ ಉತ್ತರಾಧಿಕಾರಿಗಳಾಗಲಿದ್ದಾರೆ.
Comments are closed.