Bihar Election: ಮಹಾಘಟಬಂಧನ್‌ನ ಸಿಎಂ ಅಭ್ಯರ್ಥಿ ಘೋಷಣೆ; ತೇಜಸ್ವಿ ಯಾದವ್ ಆಯ್ಕೆ

Bihar Election: ಬಿಹಾರ ವಿಧಾನಸಭಾ ಚುನಾವಣೆ (Bihar Election) ಮಹತ್ತರ ಬೆಳವಣಿಗೆ ಆಗಿದ್ದು, ಇದೀಗ ಮಹಾಮೈತ್ರಿಕೂಟದ ಎಲ್ಲಾ ಪಕ್ಷಗಳ ಸಮ್ಮುಖದಲ್ಲಿ ತೇಜಸ್ವಿ ಯಾದವ್ (Tejsawi yadav) ಅವರನ್ನು ಬಿಹಾರದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಾಗಿದೆ.

ಪಾಟ್ನಾದಲ್ಲಿ ಇಂದು ನಡೆದ ಬಹುನಿರೀಕ್ಷಿತ ಮಹಾಘಟಬಂಧನ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅಧಿಕೃತವಾಗಿ ಘೋಷಣೆ ಮಾಡಲಾಗಿದ್ದು, ಮೈತ್ರಿಕೂಟವು “ಚಲೋ ಬಿಹಾರ… ಬದಲೇ ಬಿಹಾರ” ಘೋಷಣೆಯೊಂದಿಗೆ ಪ್ರಚಾರ ಮಾಡಲು ತೀರ್ಮಾನಿಸಿದೆ.
ಇನ್ನು ವಿಕಾಸಶೀಲ ಇನ್ಸಾನ್ ಪಕ್ಷ (ವಿಐಪಿ)ದ ಮುಖ್ಯಸ್ಥ ಮುಖೇಶ್ ಸಹಾನಿಯನ್ನು ಉಪಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ.
Comments are closed.