Home Entertainment Bigg Boss: ಬಿಗ್ ಬಾಸ್ ಕನ್ನಡ ಸೀಸನ್ 12: ರಕ್ಷಿತಾ ಶೆಟ್ಟಿಗೆ ‘ಎಸ್ ಕೆಟಗರಿ’ ಪದ...

Bigg Boss: ಬಿಗ್ ಬಾಸ್ ಕನ್ನಡ ಸೀಸನ್ 12: ರಕ್ಷಿತಾ ಶೆಟ್ಟಿಗೆ ‘ಎಸ್ ಕೆಟಗರಿ’ ಪದ ಬಳಕೆ ವಿರುದ್ಧ ದೂರು ದಾಖಲು

Hindu neighbor gifts plot of land

Hindu neighbour gifts land to Muslim journalist

Bigg Boss: ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಅಶ್ವಿನಿ ಗೌಡ, ಸಹ ಸ್ಪರ್ಧಿ ರಕ್ಷಿತಾ ಶೆಟ್ಟಿ ವಿರುದ್ಧ ‘ಎಸ್ ಕೆಟಗರಿ’ ಎಂಬ ಪದ ಬಳಸಿದ್ದಕ್ಕಾಗಿ, ಈ ಪದಬಳಕೆ ವಿರುದ್ಧವಾಗಿ ವಕೀಲರೊಬ್ಬರು ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಕೀಲರಾದ ಪ್ರಶಾಂತ್ ಮಿತ್ತಲ್ ಎಂಬುವವರು ಬಿಡದಿ ಪೊಲೀಸ್ ಠಾಣೆಯಲ್ಲಿ ಈ ದೂರು ದಾಖಲಿಸಿದ್ದು, ಬಿಗ್ ಬಾಸ್ ಕನ್ನಡ ಸೀಸನ್ 12 ರ ಸ್ಪರ್ಧಿಗಳಲ್ಲಿ ಒಬ್ಬರಾದ ಅಶ್ವಿನಿ ಗೌಡ ಅವರು ಮತ್ತೊಬ್ಬ ಸ್ಪರ್ಧಿ ರಕ್ಷಿತಾ ವಿರುದ್ಧ ‘ಎಸ್ ಕೆಟಗರಿ’ ಎಂಬ ಪದವನ್ನು ಬಳಸಿದ್ದಾರೆ ಎಂದು ಆರೋಪಿಸಿದ್ದಾರೆ.

ದೂರುದಾರ ಪ್ರಶಾಂತ್ ಮಿತ್ತಲ್ ಅವರು ಬಿಡದಿ ಬಳಿಯಿರುವ ಬಿಗ್ ಬಾಸ್ ಶೋ ನಡೆಯುವ ಸ್ಟುಡಿಯೋ ಬಳಿ ಈ ದೂರನ್ನು ದಾಖಲಿಸಿದ್ದಾರೆ. ಈ ಪದವು ಒಂದು ಸಮುದಾಯ ಅಥವಾ ವ್ಯಕ್ತಿಯ ಕುರಿತು ಕೀಳಾಗಿ ಮಾತನಾಡುವ ಅಥವಾ ಅವಮಾನಿಸುವ ಉದ್ದೇಶವನ್ನು ಹೊಂದಿದೆ ಎಂದು ದೂರುದಾರರು ವಾದಿಸಿದ್ದಾರೆ. ಜೊತೆಗೆ ಬಿಗ್ ಬಾಸ್ ಕಾರ್ಯಕ್ರಮದ ಮುಖ್ಯಸ್ಥರಾದ ಪ್ರಶಾಂತ ನಾಯಕ್, ಶ್ರೀಮತಿ ಸುಷ್ಮಾ ಮತ್ತು ಪ್ರಕಾಶ್ ಅವರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ ಎಂದು ತಿಳಿದುಬಂದಿದೆ.