Tirupati Laddu: ತಿರುಪತಿ ಲಡ್ಡುಗೆ ಬೆಲ್ಲವನ್ನು ಎಲ್ಲಿಂದ ತರುತ್ತಾರೆ?


Tirupathi Laddu: ದೇಶ ಮಾತ್ರವಲ್ಲದೆ ವಿಶ್ವಾದ್ಯಂತ ಖ್ಯಾತಿಗಳಿಸಿರುವ ಪ್ರಮುಖ ಹಿಂದೂ ಧಾರ್ಮಿಕ ಕ್ಷೇತ್ರವೆಂದರೆ ಅದು ತಿರುಪತಿ. ತಿಮ್ಮಪ್ಪನಿಗೆ ನಾಡಿನಾದ್ಯಂತ ಕೋಟ್ಯಾಂತರ ಭಕ್ತರಿದ್ದಾರೆ. ಪ್ರತಿದಿನವೂ ತಿರುಮಲ ಭಕ್ತರಿಂದ ತುಂಬಿ ತುಳುಕುತ್ತಿರುತ್ತದೆ. ಇದರೊಂದಿಗೆ ತಿರುಪತಿಯ ಲಡ್ಡು ಕೂಡ ಅಷ್ಟೇ ಫೇಮಸ್. ಈ ಲಡ್ಡು ಬಗ್ಗೆ ಅನೇಕ ಕುತೂಹಲಕಾರಿ ವಿಚಾರಗಳು ಜನರಿಗೆ ತಿಳಿದೇ ಇಲ್ಲ. ಅದರಂತೆ ತಿರುಪತಿ ಲಡ್ಡುಗೆ ಬೆಲ್ಲವನ್ನು ಎಲ್ಲಿಂದ ತರುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ. ನಾ ಕುರಿತು ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ ನೋಡಿ.
ತಿರುಪತಿ ತಿಮ್ಮಪ್ಪನಿಗೆ ಅರ್ಪಿತವಾಗುವ ಹಾಗೂ ಪ್ರಸಾದವಾಗಿ ನೀಡುವ ಲಡ್ಡು ತಯಾರಿಕೆಗೆ ಬೇಕಾಗುವ ಬೆಲ್ಲವು ಶ್ರೀಕಾಕುಳಂ ಜಿಲ್ಲೆಯ ಅಮದಲವಲಸ ಮಂಡಲದ ತೋರಲ್ಲಡ ಗ್ರಾಮದಲ್ಲಿ, ನಕ್ಕ ಚಿರಂಜೀವಿ, ಜಗನ್ ಮತ್ತು ನಕ್ಕ ಧನುಂಜಯ ರಾವ್ ಅವರಂತಹ ರೈತರು 30 ಎಕರೆ ಭೂಮಿಯಲ್ಲಿ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳಿಲ್ಲದೆ ಸಾವಯವ ಕೃಷಿಯನ್ನು ಬಳಸಿಕೊಂಡು, ಗೋಮೂತ್ರ ಮತ್ತು ಗೋಮಯ ಮಕರಂದವನ್ನು ಬಳಸಿ ಬೆಳೆದ ಕಬ್ಬಿನಿಂದ ತಯಾರಿಸಲ್ಪಟ್ಟಿದೆ. ಇದೇ ಬೆಲ್ಲವನ್ನು ಶ್ರೀ ವಾರಿಯ ಅಂದರೆ ತಿಮ್ಮಪ್ಪನ ಲಾಡು ತಯಾರಿಕೆಗೆ ಬಳಸಲಾಗುತ್ತದೆ.
Comments are closed.