Mangalore: ವೈದ್ಯರು ಸತ್ತಿದ್ದಾರೆಂದು ಘೋಷಿಸಿದರೂ ಬದುಕಿ ಉಳಿದ ಕುಂಬಳೆಯ ವೃದ್ಧ, ಅಂತ್ಯಕ್ರಿಯೆ ಸಿದ್ಧತೆ ನಡೆಸಿದವರು ಬೇಸ್ತು

Share the Article

Mangalore: ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದ ಕಾಸರಗೋಡು ಜಿಲ್ಲೆಯ ಕುಂಬಳೆಯ 70 ವರ್ಷದ ವೃದ್ಧರೊಬ್ಬರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆತರಲಾಗಿದ್ದು, ಅಲ್ಲಿ ವೈದ್ಯರು ಪರೀಕ್ಷೆ ಮಾಡಿ ವ್ಯಕ್ತಿ ಸಾವಿಗೀಡಾಗಿದ್ದಾರೆಂದು ಘೋಷಿಸಿದ್ದು, ಮನೆಮಂದಿ ಆಂಬುಲೆನ್ಸ್‌ನಲ್ಲಿಯೇ ವಾಪಾಸು ಕರೆತಂದಿದ್ದರು. ಆದರೆ ವ್ಯಕ್ತಿ ಮನೆ ತಲುಪುವ ಮೊದಲೇ ಕಾಲು ಅಲ್ಲಾಡಿಸಿ ಜೀವಂತ ಇರುವುದಾಗಿ ತಿಳಿದು ಬಂದಿದೆ.

ರಾಮನಾಥ ಗಟ್ಟಿ (70) ಎಂಬ ವೃದ್ಧರೇ ಸತ್ತಿದ್ದಾರೆಂದು ಘೋಷಿಸಲ್ಪಟ್ಟಿದ್ದು, ಮತ್ತೆ ಬದುಕಿದವರು. ಇವರಿಗೆ ಅಸ್ತಮಾ ಕಾಯಿಲೆ ಇದ್ದು, ಮಳೆಗಾಲ ಆಗಿದ್ದವರಿಂದ ಉಸಿರು ಕಟ್ಟುವ ಸಮಸ್ಯೆ ಇತ್ತು, ಹಾಗಾಗಿ ಕೃತಿಕ ಉಸಿರಾಟಕ್ಕೆ ಮನೆಯಲ್ಲಿಯೇ ವ್ಯವಸ್ಥೆ ಮಾಡಲಾಗಿತ್ತು. ಆದರೆ ಕೆಲ ದಿನಗಳ ಹಿಂದೆ ಇವರ ಆರೋಗ್ಯ ಹದಗೆಟ್ಟಿತ್ತು, ಹಾಗಾಗಿ ಮಳೆಯಿದ್ದ ಕಾರಣ ಕರೆಂಟ್‌ ಇರುತ್ತಿರಲಿಲ್ಲ. ಈ ಕಾರಣದಿಂದ ಇವರ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು.

ಮನೆಮಂದಿ ಎರಡು ದಿನಗಳ ಹಿಂದೆ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ಗಟ್ಟಿ ಅವರನ್ನು ಕರೆದು ತಂದಿದ್ದರು. ಅಲ್ಲಿ ಪರೀಕ್ಷೆ ಮಾಡಿದ ವೈದ್ಯರು, ಇವರ ಸ್ಥಿತಿ ಗಂಭೀರವಿದ್ದು, ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರೆ ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ. ಹೀಗಾಗಿ ಮನೆಮಂದಿ ದೇರಳಕಟ್ಟೆ ಕೆಎಸ್‌ಹೆಗ್ಡೆ ಆಸ್ಪತತ್ರೆಗೆ ಕರೆದುಕೊಂಡು ಹೋಗಿದ್ದಾರೆ. ರಾತ್ರಿ ಡ್ಯೂಟಿ ಡಾಕ್ಟರ್‌ ಪರೀಕ್ಷೆ ಮಾಡಿ ಇವರ ಸ್ಥಿತಿ ಸೀರಿಯಸ್‌ ಇದೆ. ಹೇಳಿಕ್ಕಾಗಲ್ಲ. ನೀವು ಬೇರೆಲ್ಲಾದರೂ ಕರೆದುಕೊಂಡು ಹೋಗಿ ಎಂದು ಹೇಳಿದ್ದು, ನಾವು ಗ್ಯಾರಂಟಿ ಕೊಡುವುದಿಲ್ಲ ಎಂದು ಹೇಳಿದ್ದಾರೆ.

ಮತ್ತೆ ಕುಟುಂಬ ಸದಸ್ಯರು ಯೆನಪೋಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಪರೀಕ್ಷೆ ನಡೆಸಿದ ಡ್ಯೂಟಿ ವೈದ್ಯರೊಬ್ಬರು ರಮಾನಾಥ ಗಟ್ಟಿಯವರು ಸಾವಿಗೀಡಾಗಿದ್ದಾರೆಂದು ತಿಳಿಸಿದ್ದಾರೆ. ಈ ಘಟನೆ ಅ.19 ರಂದು ರಾತ್ರಿ ನಡೆದಿದ್ದು, ನೀವು ಶವವನ್ನು ಮರಳಿ ಮನೆಗೆ ಒಯ್ಯಬಹುದು ಎಂದು ತಿಳಿಸಿದ್ದಾರೆ. ರಾತ್ರಿಯೇ ಒಯ್ಯದಿದ್ದರೆ ಶವಾಗಾರದಲ್ಲಿ ಇಡಬೇಕು. ಅಲ್ಲಿಟ್ಟರೆ ಮತ್ತೆ ಬಿಲ್‌ ಆಗುತ್ತದೆ ಎಂದು ಮನೆಮಂದಿ ರಾತ್ರಿಯೇ ಶವವನ್ನು ಮನೆಗೆ ಕರೆದುಕೊಂಡು ಹೋಗಲು ಆಂಬುಲೆನ್ಸ್‌ ರೆಡಿ ಮಾಡಿದರು. ನಂತರ ಶವಕ್ಕೆ ತೊಡಿಸುವ ಬಿಳಿ ವಸ್ತ್ರ ತೊಡಿಸಿ ಆಂಬುಲೆನ್ಸ್‌ ಹೊರಟಿದ್ದು, ಮನೆಯ ಪರಿಸರದಲ್ಲಿ ರಾತ್ರಿಯೇ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಲಾಗಿತ್ತು. ಪರಿಸರದ ಜನರು ಕೂಡಾ ಸೇರಿದ್ದರು.

ಆದರೆ ಕುಂಬಳೆ ತಲುಪುವ ಮೊದಲೇ ರಮಾನಾಥ ಗಟ್ಟಿಯವರ ಕಾಲು ಅಲುಗಾಡಿದೆ. ಕೂಡಲೇ ಜೊತೆಗಿದ್ದವರು ಮುಖದ ವಸ್ತ್ರ ತೆಗೆದು ನೋಡಿದ್ದಾರೆ. ಅರೆ ಜೀವ ಇರುವುದು ತಿಳಿದು ನೇರವಾಗಿ ಕಾಸರಗೋಡು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಕೃತಕ ಉಸಿರಾಟ ನೀಡಿ, ವೈದ್ಯರು ಐಸಿಯುನಲ್ಲಿ ಇರಿಸಿದ್ದಾರೆ. ಎರಡು ದಿನ ಕಳೆದಿದ್ದು ಗಟ್ಟಿಯವರ ಆರೋಗ್ಯ ಸ್ಥಿತಿ ಚೆನ್ನಾಗಿದೆ ಎಂದು ಹೇಳಲಾಗಿದೆ. ಕಂಚಿಕಟ್ಟೆಯಲ್ಲಿ ಮೂಲ ತರವಾಡು ಹೊಂದಿರುವ ಮಂಗಳೂರಿನ ಗಟ್ಟಿ ಸಮಾಜದ ವ್ಯಕ್ತಿಯೊಬ್ಬರು ಈ ಕುರಿತು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.

 

Comments are closed.