Home News Presidents Helicopter Tire: ರಾಷ್ಟ್ರಪತಿ ಮುರ್ಮು ಹೆಕಾಪ್ಟರ್‌ ಇಳಿದ ಹೆಲಿಪ್ಯಾಡ್‌ನಲ್ಲಿ ಕುಸಿತ

Presidents Helicopter Tire: ರಾಷ್ಟ್ರಪತಿ ಮುರ್ಮು ಹೆಕಾಪ್ಟರ್‌ ಇಳಿದ ಹೆಲಿಪ್ಯಾಡ್‌ನಲ್ಲಿ ಕುಸಿತ

Hindu neighbor gifts plot of land

Hindu neighbour gifts land to Muslim journalist

Presidents Helicopter Tire: ಶಬರಿಮಲೆ ದರ್ಶನಕ್ಕೆ ಬಂದಿದ್ದ ರಾಷ್ಟ್ರಪತಿ ಮುರ್ಮು ಅವರ ಹೆಲಿಕಾಪ್ಟರ್‌ ಇಳಿದ ಸ್ಥಳದ ಕಾಕ್ರೀಟ್‌ ನೆಲ ಕುಸಿದ ಘಟನೆ ಪತ್ತನಂತಿಟ್ಟದ ಕೊನ್ನಿ ಪ್ರಮಾದಂ ಒಳಾಂಗಣ ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿದ್ದ ಹೆಲಿಪ್ಯಾಡ್‌ನಲ್ಲಿ ಈ ಘಟನೆ ನಡೆದಿದೆ. ಹೆಲಿಕಾಪ್ಟರ್‌ನ ಟೈರ್‌ಗಳು ಕಾಂಕ್ರೀಟ್‌ನಲ್ಲಿ ಹೂತುಹೋಗಿದ್ದು, ನಂತರ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಹೆಲಿಕಾಪ್ಟರ್‌ ಮೇಲೆಕ್ಕೆತ್ತಿದ್ದಾರೆ.

ರಾಷ್ಟ್ರಪತಿಯವರ ಮೊದಲು ನೀಲಕ್ಕಲ್‌ನಲ್ಲಿ ಹೆಲಿಕಾಪ್ಟರ್‌ ಇಳಿಸಲು ನಿರ್ಧಾರ ಮಾಡಲಾಗಿತ್ತು. ಪ್ರತಿಕೂಲ ಹವಾಮಾನದಿಂದ ಕೊನೆಯ ಕ್ಷಣದಲ್ಲಿ ಲ್ಯಾಂಡಿಂಗ್‌ ಸ್ಥಳವನ್ನು ಪ್ರಮಾದಂ ಒಳಾಂಗಣ ಕ್ರೀಡಾಂಗಣಕ್ಕೆ ಬದಲಾವಣೆ ಮಾಡಲಾಯಿತು. ಹೀಗಾಗಿ ಬೆಳಗ್ಗೆಯೇ ಪ್ರಮಾದಂನಲ್ಲಿ ಕಾಂಕ್ರೀಟ್‌ ಹಾಕಿ ಹೆಲಿಪ್ಯಾಡ್‌ ಸಿದ್ಧಪಡಿಸಲಾಗಿತ್ತು. ಈ ಮುನ್ನ ಕಾಂಕ್ರೀಟ್‌ ಗಟ್ಟಿಯಾಗುವ ಮುನ್ನ ಹೆಲಿಕಾಪ್ಟರ್‌ ಇಳಿಸಿದ್ದರಿಂದ ನೆಲ ಕುಸಿಯಲು ಕಾರಣ ಎಂದು ತಿಳಿದು ಬಂದಿದೆ. ಇದೊಂದು ಗಂಭೀರ ಭದ್ರತಾ ಲೋಪ ಎನ್ನಲಾಗಿದೆ.

ಇಂದು ಬೆಳಗ್ಗೆ 7.30ಕ್ಕೆ ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ತೆರಳಿ, ಅಲ್ಲಿಂದ ಹೆಲಿಕಾಪ್ಟರ್‌ ಮೂಲಕ ಪತ್ತನಂತಿಟ್ಟಕ್ಕೆ ಬಂದಿದ್ದು, ರಾಷ್ಟ್ರಪತಿಯವರ ಪ್ರಯಾಣ ನಿಗದಿತ ಸಮಯಕ್ಕಿಂತ ಮೊದಲೇ ಇತ್ತು. ಬೆಳಗ್ಗೆ 9 ಗಂಟೆಗೆ ಪ್ರಮಾದಂನಲ್ಲಿ ಹೆಲಿಕಾಪ್ಟರ್‌ ಇಳಿದ ಮೇಲೆ, ಅಲ್ಲಿಂದ ರಸ್ತೆ ಮೂಲಕ ಪಂಪಾಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ತೆರಳಿದ್ದಾರೆ. ಪೊಲೀಸ್‌ ಪಡೆಯ ಗೂರ್ಖಾ ವಾಹನದಲ್ಲಿ ಸನ್ನಿಧಾನಕ್ಕೆ ತೆರಳಿ ಇರುಮುಡಿ ಹೊತ್ತು 18 ಮೆಟ್ಟಿಲು ಹತ್ತಿ ಅಯ್ಯಪ್ಪನ ದರ್ಶನ ಪಡೆಯಲಿದ್ದಾರೆ.